ETV Bharat / state

ಬೆಂಗಳೂರು: ಕೈ ಮುಗಿದರೂ ಬಿಡದೆ ಹಲ್ಲೆ ನಡೆಸಿದ ಪುಂಡರ ತಂಡ- ಸಿಸಿಟಿವಿ ವಿಡಿಯೋ

ಅನ್ನಪೂರ್ಣೇಶ್ವರಿ ನಗರದಲ್ಲಿ ಪುಂಡರ ದರ್ಬಾರ್ ಮಿತಿ ಮೀರುತ್ತಿದೆ. ಬಾರ್​ಗೆ ನುಗ್ಗಿ ಯುವಕನ ಮೇಲೆ 15-20 ಮಂದಿ ಗುಂಪು ಮನಸೋಇಚ್ಚೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಹಲ್ಲೆ
ಹಲ್ಲೆ
author img

By

Published : Apr 24, 2022, 5:04 PM IST

ಬೆಂಗಳೂರು: ಈ ಪ್ರದೇಶದಲ್ಲಿ ರಾತ್ರಿ ಆದ್ಮೇಲೆ ಓಡಾಡೋಕೂ ಗುಂಡಿಗೆ ಗಟ್ಟಿ ಇರ್ಬೇಕಂತೆ. ಏನಾದ್ರೂ ಅಪ್ಪಿತಪ್ಪಿ ಬಾರ್ ಕಡೆಗೆ ಹೋದರೆ ನಿಮ್ಮ ಜೀವಕ್ಕಿರಲ್ಲ ಗ್ಯಾರಂಟಿ. ಯಾಕಂದ್ರೆ ಕೈ ಮುಗಿದು ಬೇಡಿದ್ರೂ ಬಿಡಲ್ಲ, ಕಾಲಿಗೆ ಬಿದ್ದರೂ ಬಿಡಲ್ಲ ಇಲ್ಲಿನ ಪುಂಡರ ಗ್ಯಾಂಗ್. ಬಾರ್‌ಗೆ ಮುಂದೆ ತನ್ನಪಾಡಿಗೆ ತಾವು ಎಣ್ಣೆ ಹಾಕೊಂಡು ಹೋಗ್ತೀವಿ ಅಂತ ಹೋದ್ರೂ ತಲೆ ತಗ್ಗಿಸಿ ಹೋಗ್ಬೇಕು. ತಲೆ ತಗ್ಗಿಸಿ ಬರ್ಬೇಕು. ಕಣ್ಣೆತ್ತಿ ನೋಡಿದ್ರೆ ಬೀಳುತ್ತೆ ಧರ್ಮದೇಟು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

ಅನ್ನಪೂರ್ಣೇಶ್ವರಿ ನಗರದಲ್ಲಿ ಪುಂಡರ ದರ್ಬಾರ್ ಮಿತಿ ಮೀರುತ್ತಿದೆ. ಕ್ಷುಲ್ಲಕ ಕಾರಣಕ್ಕೆ ಇಲ್ಲಿನ ಬಾರ್​ಗೆ ನುಗ್ಗಿ ಯುವಕನ ಮೇಲೆ 15-20 ಪುಂಡರ ಗುಂಪು ಮನಸೋ ಇಚ್ಚೆ ಹಲ್ಲೆ ನಡೆಸಿದೆ. ಮುದ್ದಯ್ಯನಪಾಳ್ಯದ ಎಸ್​ಎಸ್ ಬಾರ್​ನಲ್ಲಿ ನಡೆದ ಗಲಾಟೆ ಇದಾಗಿದೆ. ಏ. 21 ರಾತ್ರಿ ಬಾರ್​ಗೆ ಹೋಗಿದ್ದ ಸದಾನಂದ ಎಂಬ ಯುವಕನಿಗೆ ಹಲ್ಲೆ‌ ಮಾಡಲಾಗಿದೆ.

ಮಂಜೇಶ ಮತ್ತು ಆತ ತಂಡ ಸದಾನಂದನಿಗೆ ಹಲ್ಲೆ ಮಾಡಿದೆ. ಈ ವೇಳೆ, ಕೈ ಮುಗಿದು ಬೇಡಿದ್ರೂ ಬಿಡದೆ ಹಲ್ಲೆ ನಡೆಸಿ ದರ್ಪ ಮೆರೆದಿದ್ದಾರೆ. ಘಟನೆಯ ವಿಡಿಯೋ ದೊರೆತಿದೆ. ಆರೋಪಿ ಮಂಜೇಶ್ ಈ ಹಿಂದೆ ಕೆಲ ಪ್ರಕರಣಗಳಲ್ಲೂ ಪೊಲೀಸರ ಅತಿಥಿಯಾಗಿದ್ದ. ಆದರೂ ಯಾವ ಭಯವೂ ಇಲ್ಲದೆ ರಾಜಾರೋಷವಾಗಿ ಗುಂಪು ಕಟ್ಟಿಕೊಂಡು ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದಾನೆ. ಯುವಕ ಸದಾನಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇದನ್ನೂ ಓದಿ: ಕಾಂಗ್ರೆಸ್​​ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಬಿಜೆಪಿ ಮಾಡಬಾರದು: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.