ಬೆಂಗಳೂರು: ಕೇಂದ್ರ ಸರ್ಕಾರ ಮಟ್ಟದ ಉನ್ನತ ಹುದ್ದೆ ಪಡೆಯಲು ವಂಚಕ ಯುವರಾಜ್ ಸ್ವಾಮಿಗೆ(Yuvaraj swamy case)ಲಂಚ ನೀಡಿದ ಆರೋಪದಡಿ ಹೈಕೋರ್ಟ್ ನಿವೃತ್ತ ನ್ಯಾಯಧೀಶೆ ಸೇರಿ ಇಬ್ಬರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಂದಿದ್ದ ದೂರನ್ನು ಎಸಿಬಿಯು ಪರಿಶೀಲಿಸಿ ಸಿಬಿಐಗೆ(Central bureau of investigation)ವರ್ಗಾಯಿಸಿದೆ.
ವಂಚನೆ ಆರೋಪಿ ಯುವರಾಜ್ ಸ್ವಾಮಿ ಕೇಸ್ ಹೊಸ ತಿರುವು ಪಡೆದುಕೊಂಡಿದೆ. ನಿವೃತ್ತ ಹೈಕೋರ್ಟ್ ಜಡ್ಜ್ವೊಬ್ಬರು ಕೇಂದ್ರ ಸರ್ಕಾರದ ಉನ್ನತ ಮಟ್ಟದ ಹುದ್ದೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಆರೋಪಿ ಯುವರಾಜ್ಗೆ 8.27 ಕೋಟಿ ರೂಪಾಯಿ ಲಂಚ ನೀಡಿದ್ದ ಆರೋಪ ಕೇಳಿಬಂದಿತ್ತು. ಜೊತೆಗೆ ಎನಿತ್ ಕುಮಾರ್ ಎಂಬುವರು ಕೇಂದ್ರ ರೇಷ್ಮೆ ಮಂಡಳಿಯಲ್ಲಿ ಕೆಲಸ ಪಡೆಯಲು ಆರೋಪಿಗೆ 30 ಲಕ್ಷ ಹಣ ನೀಡಿದ್ದರು ಎನ್ನಲಾಗ್ತಿದೆ. ಈ ಸಂಬಂಧ ಇಬ್ಬರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಆದರ್ಶ ಆರ್ ಐಯ್ಯರ್ ಎಂಬುವರು ಎಸಿಬಿಗೆ ದೂರು ನೀಡಿದ್ದರು.
ಇದನ್ನೂ ಓದಿ:ವಂಚನೆ ಪ್ರಕರಣ.. ಯುವರಾಜ್ ಸ್ವಾಮಿಗೆ ಜಾಮೀನು ತಿರಸ್ಕರಿಸಿದ ಹೈಕೋರ್ಟ್
ಈ ಸಂಬಂಧ ದೂರು ಪರಿಶೀಲಿಸಿರುವ ಅಧಿಕಾರಿಗಳು ಕೇಂದ್ರ ಮಟ್ಟದ ಹುದ್ದೆಗೆ ರಾಜ್ಯ ಭ್ರಷ್ಟಾಚಾರ ನಿಗ್ರಹದಳ ವ್ಯಾಪ್ತಿಗೆ ಬರದ ಕಾರಣ ಸಿಬಿಐಗೆ ದೂರನ್ನು ವರ್ಗಾಯಿಸಿರುವುದಾಗಿ ದೂರುದಾರರಿಗೆ ನೀಡಿದ ಹಿಂಬರಹದಲ್ಲಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ವಂಚಕನಿಗೆ ಲಂಚ; ಹಣ ಕೊಟ್ಟವರ ವಿರುದ್ಧವೇ ಎಫ್‌ಐಆರ್
ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಲು ಯುವರಾಜ್ಗೆ ಈ ಹಿಂದೆ ಲಂಚ ನೀಡಿದ್ದ ಐದು ಮಂದಿ ವಿರುದ್ಧ ಆದರ್ಶ ಎಂಬುವರು ದೂರು ನೀಡಿದ್ದರು. ಕೆ.ಪಿ ಸುಧೀಂದ್ರ ರೆಡ್ಡಿ, ಗೋವಿಂದಯ್ಯ, ಜಿ.ನರಸಿಂಹ ಸ್ವಾಮಿ ವಿರುದ್ಧ ಎಸಿಬಿ ಅಧಿಕಾರಿಗಳು ಎಫ್ಐಆರ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದರು. ಇನ್ನಿಬ್ಬರಾದ ನಿವೃತ್ತ ಜಡ್ಜ್ ಹಾಗೂ ಆರ್ಎಸ್ಎಸ್ ಸದಸ್ಯನ ವಿರುದ್ದ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಈ ಸಂಬಂಧ ದೂರುದಾರರಿಗೆ ಸಿಬಿಐ ದೂರನ್ನು ವರ್ಗಾಯಿಸಿರುವುದಾಗಿ ಎಸಿಬಿ ತಿಳಿಸಿದೆ.
ಇದೀಗ ಬಿಜೆಪಿ ಹಾಗೂ RSS ನಾಯಕರ ಹೆಸರು ಹೇಳಿ ಯುವರಾಜ್ಗೆ ಹಣ ನೀಡಿ ವಂಚನೆಗೊಳಗಾದವರಿಗೆ ಮತ್ತೆ ಸಂಕಷ್ಟ ಎದುರಾಗಿದೆ.