ETV Bharat / state

ಅರಳು ಮಲ್ಲಿಗೆ ಗ್ರಾ.ಪಂ. ಕಾರ್ಯಾಲಯದ ಮೇಲೆ ಎಸಿಬಿ ದಾಳಿ, ಪಿಡಿಒ ಪರಾರಿ!

ಬೆಂಗಳೂರಿನ ಅರಳುಮಲ್ಲಿಗೆ ಗ್ರಾಮ ಪಂಚಾಯತ್ ಕಾರ್ಯಾಲಯದ ಮೇಲೆ ಎಸಿಬಿ ದಾಳಿ ನಡೆಸಿದ್ದ ವೇಳೆ ಪಿಡಿಒ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ACB raid on Bengaluru, Bengaluru crime news, ACB raid on Aralumallige GP, ಬೆಂಗಳೂರಿನಲ್ಲಿ ಎಸಿಬಿ ದಾಳಿ, ಬೆಂಗಳೂರು ಅಪರಾಧ ಸುದ್ದಿ, ಅರಳುಮಲ್ಲಿಗೆ ಗ್ರಾಪ ಮೇಲೆ ಎಸಿಬಿ ದಾಳಿ,
ಅರಳುಮಲ್ಲಿಗೆ ಗ್ರಾ.ಪಂ. ಕಾರ್ಯಾಲಯದ ಮೇಲೆ ಎಸಿಬಿ ದಾಳಿ
author img

By

Published : Jun 24, 2022, 1:20 PM IST

ದೊಡ್ಡಬಳ್ಳಾಪುರ: ತಾಲೂಕಿನ‌ ಅರಳುಮಲ್ಲಿಗೆ ಗ್ರಾಮ ಪಂಚಾಯ್ತಿ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರದ ದಳದ (ಎಸಿಬಿ) ಪೊಲೀಸರು ದಾಳಿ ನಡೆಸಿದ್ದು, ಈ ಸಮಯದಲ್ಲಿ ಪಿಡಿಒ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಎಸಿಬಿ ಡಿವೈಎಸ್ಪಿ ಜಗದೀಶ್ ನೇತೃತ್ವದಲ್ಲಿ‌ ದಾಳಿ‌ ನಡೆಸಲಾಗಿದ್ದು, 30ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿಯಲ್ಲಿ ಭಾಗಿಯಾಗಿದ್ದರು. ನಿನ್ನೆ ಮಧ್ಯಾಹ್ನ 3 ಗಂಟೆಗೆ ಪಂಚಾಯತ್ ಕಾರ್ಯಾಲಯಕ್ಕೆ ಆಗಮಿಸಿದ ಅಧಿಕಾರಿಗಳ ತಂಡ ತಡ ರಾತ್ರಿ 11 ಗಂಟೆವರೆಗೂ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ACB raid on Bengaluru, Bengaluru crime news, ACB raid on Aralumallige GP, ಬೆಂಗಳೂರಿನಲ್ಲಿ ಎಸಿಬಿ ದಾಳಿ, ಬೆಂಗಳೂರು ಅಪರಾಧ ಸುದ್ದಿ, ಅರಳುಮಲ್ಲಿಗೆ ಗ್ರಾಪ ಮೇಲೆ ಎಸಿಬಿ ದಾಳಿ,
ಅರಳುಮಲ್ಲಿಗೆ ಗ್ರಾ.ಪಂ. ಕಾರ್ಯಾಲಯದ ಮೇಲೆ ಎಸಿಬಿ ದಾಳಿ

ಓದಿ: ಲಂಚ ಸ್ವೀಕರಿಸುತ್ತಿದ್ದಾಗಲೇ ಎಸಿಬಿ ಬಲೆಗೆ ಬಿದ್ದ ಬಿಇಒ

ಅರಳುಮಲ್ಲಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಆಲಹಳ್ಳಿ ಗ್ರಾಮದ ಸರ್ವೆ ನಂಬರ್ 13/1 ರ 21 ಗುಂಟೆ ಜಮೀನು ಮತ್ತು 19 ಗುಂಟೆ ಜಮೀನನ್ನು ಯಾವುದೇ ಅನುಮತಿ ಇಲ್ಲದೇ ಕೃಷಿಭೂಮಿಯನ್ನ ವಾಸಯೋಗ್ಯ ನಿವೇಶನಗಳನ್ನಾಗಿ ಪರಿವರ್ತನೆ ಮಾಡಿದ್ದರು. ಅಕ್ರಮವಾಗಿ ಖಾತೆಗಳನ್ನ ಮಾಡಿರುವ ಬಗ್ಗೆ ಸಾರ್ವಜನಿಕರು ಎಸಿಬಿಗೆ ದೂರು ನೀಡಿದ್ದರು. ಸಾರ್ವಜನಿಕರ ದೂರಿನ ಹಿನ್ನೆಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿಯ ಸುದ್ದಿ ತಿಳಿದ ಪಿಡಿಒ ಸುಧಾಕರ್ ರೆಡ್ಡಿ ಕಾರ್ಯಾಲಯಕ್ಕೆ ಬಾರದೇ ಎಸ್ಕೇಪ್ ಆಗಿದ್ದಾರೆ. ಇಂದು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಎಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.