ETV Bharat / state

ಜಿಲ್ಲಾ ಭೂದಾಖಲೆಗಳ ಉಪನಿರ್ದೇಶಕಿ ಕುಸುಮಲತಾ ಮನೆ, ಕಚೇರಿ ಮೇಲೆ ಎಸಿಬಿ ದಾಳಿ - Bangalore news

ಭೂ ಮಾಲೀಕರಿಂದ ಲಂಚ ಪಡೆದು ಅಕ್ರಮವಾಗಿ ಭೂಪರಿವರ್ತನೆ ಎಸಗಿದ್ದಾರೆ ಎಂಬ ಆರೋಪದಡಿ ಎಸಿಬಿ ಅಧಿಕಾರಿಗಳು ಜಿಲ್ಲಾ ಭೂದಾಖಲೆಗಳ ಉಪನಿರ್ದೇಶಕರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ, ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

acb-officials-raided-over-ddlr-kusmalatha-house-office
ಜಿಲ್ಲಾ ಭೂದಾಖಲೆಗಳ ಉಪನಿರ್ದೇಶಕಿ ಕುಸುಮಲತಾ
author img

By

Published : Aug 26, 2021, 12:36 PM IST

ಬೆಂಗಳೂರು: ಡಿಡಿಎಲ್ಆರ್ (ಜಿಲ್ಲಾ ಭೂದಾಖಲೆಗಳ ಉಪನಿರ್ದೇಶಕರು) ಕುಸುಮಲತಾರ ಮನೆ, ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಭೂಪರಿವರ್ತನೆ ಆರೋಪ ಕೇಳಿಬಂದ ಹಿನ್ನೆಲೆ ದಾಳಿ ನಡೆಸಲಾಗಿದೆ ಎನ್ನಲಾಗ್ತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಸಂತಪುರ ವಿಲೇಜ್​ನ ಸರ್ವೇ ನಂ.17 ರಲ್ಲಿರುವ 29 ಗುಂಟೆ ಜಮೀನನ್ನು ಕೋರ್ಟ್ ಆದೇಶದ ಹೆಸರಲ್ಲಿ ಪರಿವರ್ತನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ ಜಮೀನು ಮಾಲೀಕರಾದ ವೇಣುಗೋಪಾಲ್ ಮತ್ತು ಮಧ್ಯವರ್ತಿ ಶಾಂತಕುಮಾರ್ ಜೊತೆ ಶಾಮೀಲಾದ ಕುಸುಮಲತಾ ಹಳೆಯ ಹೈಕೋರ್ಟ್ ಆದೇಶದ ಹೆಸರಿನಲ್ಲಿ ಭೂ ಪರಿವರ್ತನೆಗೆ ಮುಂದಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಡಿಡಿಎಲ್ಆರ್ ಕುಸುಮಲತಾ ಮೇಲೆ ಸರ್ಕಾರಕ್ಕೆ ಬರಬೇಕಾಗಿದ್ದ ತೆರಿಗೆ ವಂಚಿಸಿರುವ ಆರೋಪವಿದ್ದು, ಅಕ್ರಮಾಗಿ ಭೂ ಪರಿವರ್ತನೆಯ ಸಂಬಂಧ ಲಕ್ಷಾಂತರ ರೂಪಾಯಿ ಲಂಚ ಪಡೆದು ಅಕ್ರಮ ಎಸಗಿರುವ ಕುರಿತು ಎಸಿಬಿ ದಾಳಿಯಲ್ಲಿ ದಾಖಲೆಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಯುಕೆಪಿ, ತಮಿಳುನಾಡು ನದಿ ಜೋಡಣೆ ವಿರುದ್ಧ ಹೊಸ ಪಿಟಿಷನ್ ಸಲ್ಲಿಸಲು ನಿರ್ಧಾರ: ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.