ETV Bharat / state

ಇಂದಿನಿಂದ ಶೈಕ್ಷಣಿಕ ವರ್ಷಾರಂಭ: 31 ರಂದು ಶಾಲೆಗಳು ಆರಂಭ..! - ಈಟಿವಿಭಾರತ್​ ಕನ್ನಡ ನ್ಯೂಸ್

ರಾಜ್ಯಾದ್ಯಂತ ಇನ್ನೆರಡು ದಿನದಲ್ಲಿ ಮಕ್ಕಳು ಶಾಲೆಗಳತ್ತ ಹೆಜ್ಜೆ ಹಾಕಲಿದ್ದಾರೆ.

ಶೈಕ್ಷಣಿಕ ವರ್ಷಾರಂಭ
ಶೈಕ್ಷಣಿಕ ವರ್ಷಾರಂಭ
author img

By

Published : May 29, 2023, 10:59 PM IST

ಬೆಂಗಳೂರು : ಇಂದಿನಿಂದ 2023-24ನೇ ಸಾಲಿನ ಶಾಲಾ ಶೈಕ್ಷಣಿಕ ವರ್ಷಾರಂಭಗೊಂಡಿದ್ದು, ಮೇ 31 ರಿಂದ ರಾಜ್ಯಾದ್ಯಂತ ಏಕಕಾಲಕ್ಕೆ ಎಲ್ಲಾ ಶಾಲೆಗಳು ಆರಂಭಗೊಳ್ಳಲಿವೆ. ಶಾಲೆಗಳ ಆರಂಭಕ್ಕೆ ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಲ್ಲ ಶಾಲೆಗಳಿಗೆ ಸೂಚನೆ ನೀಡಿದೆ.

2022-23ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯಂತೆ ಶಾಲೆಗಳಿಗೆ ನೀಡಲಾಗಿದ್ದ ಬೇಸಿಗೆ ರಜೆ ನಿನ್ನೆಗೆ ( ಭಾನುವಾರ) ಅಂತ್ಯಗೊಂಡಿದ್ದು, ಇಂದಿನಿಂದ ನೂತನ ಶೈಕ್ಷಣಿಕ ವರ್ಷಾರಂಭವಾಗಿದೆ. ಆದರೆ, ಶಾಲೆಗಳ ಆರಂಭಕ್ಕೆ ಇನ್ನು ಎರಡು ದಿನ ಸಮಯ ನೀಡಿದ್ದು, ಮೇ 31ಕ್ಕೆ ಏಕ ಕಾಲಕ್ಕೆ ರಾಜ್ಯಾದ್ಯಂತ ಎಲ್ಲಾ ಶಾಲೆಗಳು ಆರಂಭಗೊಳ್ಳಲಿವೆ. ಇಂದಿನಿಂದಲೇ ರಾಜ್ಯದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮಖ್ಯ ಶಿಕ್ಷಕರು, ಶಿಕ್ಷಕರು ಶಾಲೆಗಳಿಗೆ ಆಗಮಿಸಿದ್ದು ಶಾಲಾ ಆರಂಭಕ್ಕೆ ಬೇಕಾದ ಸಿದ್ದತೆ ಆರಂಭಿಸಿದ್ದಾರೆ.

ಇದನನ್ನೂ ಓದಿ : ಆತಂಕದಲ್ಲಿ ಮಕ್ಕಳ ಶಿಕ್ಷಣ; ಸರ್ಕಾರಿ ಶಾಲೆಗಳ ಗೋಳು ಕೇಳೋರು ಯಾರು..?

ಇದೇ ಮೊದಲ ಬಾರಿಗೆ ಸರ್ಕಾರಿ ಮತ್ತು ಅನುದಾನಿ ಶಾಲೆಗಳ ಮಕ್ಕಳಿಗೆ ಒಂದು ಜೊತೆ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ರವಾನಿಸಲಾಗಿದ್ದು, ಸಮವಸ್ತ್ರ ಹಾಗು ಪಠ್ಯಪುಸ್ತಕಗಳ ಕೊರತೆಯಾಗದಂತೆ ವಿತರಣೆಗೆ ಅಗತ್ಯ ಕ್ರಮ ವಹಿಸುವಂತೆ ಹಾಗು ಬಿಸಿಯೂಟವನ್ನು ಮೊದಲ ದಿನದಿಂದಲೇ ಆರಂಭಿಸುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಡಿಡಿಪಿಐ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಪ್ರಸಕ್ತ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ವಿವರ :

  • ಮೊದಲನೇ ಅವಧಿಯ ಶಾಲಾ ಕರ್ತವ್ಯ ದಿನಗಳು:29-05-2023 ರಿಂದ ದಿನಾಂಕ 02-10-2023ರ ವರೆಗೆ.
  • ಎರಡನೇ ಅವಧಿಯ ಶಾಲಾ ಕರ್ತವ್ಯ ದಿನಗಳು : ದಿನಾಂಕ 25-10-2023 ರಿಂದ ದಿನಾಂಕ 10-04-2024ರವರೆಗೆ.
  • ದಸರಾ ರಜೆ : 08-10-2023 ರಿಂದ ದಿನಾಂಕ 24-10-2023ರ ವರೆಗೆ
  • ಬೇಸಿಗೆ ರಜೆ : 11-04-2024 ರಿಂದ ದಿನಾಂಕ 28-05-2024ರ ವರೆಗೆ

ರಾಜ್ಯದ ಎಲ್ಲ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2023-24ನೇ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಜಾರಿಗೊಳಿಸಲು ಅನುವಾಗುವಂತೆ ಶೈಕ್ಷಣಿಕ ಅವಧಿಗಳು ರಜಾ ದಿನಗಳನ್ನು ಮತ್ತು ವಾರ್ಷಿಕ ಕಾರ್ಯಸೂಚಿಯನ್ನು ನಿಗದಿಪಡಿಸಲಾಗಿದೆ. ರಾಜ್ಯ ಪಠ್ಯಕ್ರಮದ ಎಲ್ಲ ಶಾಲೆಗಳಲ್ಲಿ ಅನುಷ್ಠಾನಗೊಳಿಸಿ ಮತ್ತು ಅನುಪಾಲನೆ ಮಾಡಬೇಕು ಎಂದು ಸುತ್ತೋಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿದೆ.

ಇಷ್ಟು ದಿನ ಮಕ್ಕಳು ಬೇಸಿಗೆ ರಜೆಯ ಮಜಾದಲ್ಲಿದ್ದ ಮಕ್ಕಳು ಇದೀಗ ಆಟದಿಂದ ಪಾಠದತ್ತ ತಿರುಗುತ್ತಿದ್ದಾರೆ. ಶಾಲೆಯ ಬ್ಯಾಗುಗಳನ್ನು ಸಿದ್ದಪಡಿಸಿಕೊಂಡು ಹೊಸ ಪುಸ್ತಕಗಳೊಂದಿಗೆ ಶಾಲೆಗಳತ್ತ ಹೆಜ್ಜೆ ಹಾಕಲು ಸಿದ್ದತೆ ನಡೆಸಿದ್ದು ಇನ್ನೆರಡು ದಿನದಲ್ಲಿ ಮಕ್ಕಳು ಶಾಲೆಗಳತ್ತ ಹೆಜ್ಜೆ ಹಾಕಲಿದ್ದಾರೆ.

ಮುಗಿದ ರಜೆ, ಶಾಲೆ ಆರಂಭ : ಶಾಲೆಗಳನ್ನು ಪುನರಾರಂಭಕ್ಕೆ ದಾವಣಗೆರೆ ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಸನ್ನಧರಾಗಿ ಸಿದ್ಧತೆ ಮಾಡಿಕೊಂಡಿದ್ದಾರೆ‌. ಇದರೊಂದಿಗೆ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆ, ಎರಡು ಕೇಂದ್ರೀಯ ಶಾಲೆಗಳು ಕೂಡ ಆರಂಭವಾಗಲಿವೆ. ಜಿಲ್ಲೆಯಲ್ಲಿ ಒಟ್ಟು 2026 ಶಾಲೆಗಳಿದ್ದು, ಸರ್ಕಾರಿ ಹಾಗು ಅನುದಾನಿತ ಮತ್ತು ಅನುದಾನ ರಹಿತ ಎಲ್ಲಾ ಶಾಲೆಗಳು ಸೇರಿ 1517 ಪ್ರಾಥಮಿಕ ಶಾಲೆಗಳು, 509 ಪ್ರೌಢಶಾಲೆಗಳಿದ್ದು ಎಲ್ಲಾ ಶಾಲೆಗಳು ಪ್ರಾರಂಭವಾಗಲು ಕ್ಷಣಗಣನೆ ಸಿದ್ಧತೆ ನಡೆದಿದೆ.

ಇಂದು ಶಾಲೆಗಳನ್ನು ತೆರೆದರು ಮಕ್ಕಳು ಚಿಣ್ಣರು ಬರುವಿಕೆ ಕೊರತೆ ಎದ್ದು ಕಾಣಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಮೇ 31 ರಿಂದ ಅಧಿಕೃತ ಶಾಲಾಗಳು ಆರಂಭವಾಗಲಿವೆ. ಬಿಸಿಯೂಟ ಸೇರಿದ್ದಂತೆ ಶಾಲೆ ಶೌಚಾಲಯ, ಕೊಠಡಿಗಳು ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಮಕ್ಕಳ ಆಗಮನದ ನಿರೀಕ್ಷೆಯಲ್ಲಿರುವ ಸಿಬ್ಬಂದಿ ಮಕ್ಕಳಿಗೆ ತಯಾರು ಮಾಡುವ ಬಿಸಿಯೂಟಕ್ಕೆ ಬೇಕಾಗುವ ಅಗತ್ಯ ವಸ್ತುಗಳನ್ನು ಸಿದ್ಧತೆ ಕೂಡ ನಡೆದಿದೆ.

ಬಿಇಒ ಕಚೇರಿ ಪಠ್ಯ ಪುಸ್ತಕಗಳು : ಮಕ್ಕಳಿಗಾಗಿ ಬಿಸಿಯೂಟ ಕೂಡ ಶಾಲೆಗೆ ಬಂದು ಸೇರಿದೆ. ಇನ್ನು ಹಾಲಿನ ಪುಡಿ ಈಗಾಗಲೇ ಎಲ್ಲಾ ಶಾಲಾ ಕೇಂದ್ರಗಳಿಗೆ ತಲುಪಿದ್ದು, ಜಿಲ್ಲೆಯಲ್ಲಿ ಮಕ್ಕಳಿಗೆ 15,54,316 ಪಠ್ಯಪುಸ್ತಕಗಳನ್ನು ವಿತರಣೆ ಮಾಡಬೇಕಾಗಿದೆ. ಇನ್ನು ಇದರಲ್ಲಿ ಉಚಿತ ವಿತರಣೆ 11,18,303 ಹಾಗು ಮಾರಾಟದ 4,36,013 ಪುಸ್ತಕಗಳಿದ್ದು, ಆಯಾ ಬಿಇಒ ಕಚೇರಿಗಳಿಗೆ ರವಾನಿಸಲಾಗಿದೆ. ಮೇ31 ರಂದು ಶಾಲೆಗಳಲ್ಲಿ ಮಕ್ಕಳಿಗೆ ಸಮವಸ್ತ್ರ ಮತ್ತು ಸಿಹಿ ಊಟ ದೊಂದಿಗೆ ಶಾಲೆಗೆ ಮಕ್ಕಳನ್ನು ಅದ್ಧೂರಿಯಾಗಿ ಸ್ವಾಗತ ನೀಡಲಾಗುವುದೆಂದು ಡಿಡಿಪಿಐ ಜಿಆರ್ ತಿಪ್ಪೇಸ್ವಾಮಿಯವರು ಮಾಹಿತಿ ನೀಡಿದರು.

ಇದನನ್ನೂ ಓದಿ : ಮಕ್ಕಳ ರಜಾ ದಿನ ಮುಕ್ತಾಯ: ಮೊದಲ ದಿನ ಮಕ್ಕಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದ ಆಡಳಿತ ಮಂಡಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.