ETV Bharat / state

ಐಎಂಎ ವಂಚನೆ ಪ್ರಕರಣ: ಎಸಿ ನಾಗರಾಜ್​ ಜು.12 ರ ವರೆಗೆ ಎಸ್​ಐಟಿ ಕಸ್ಟಡಿಗೆ - undefined

ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಎಸ್‌ಐಟಿ ಬಂಧಿಸಿದ್ದ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್​.ಸಿ. ನಾಗರಾಜ್‌ ಅವರನ್ನು ನ್ಯಾಯಾಲಯ ಜು.12 ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿದೆ.

ಐಎಂಎ
author img

By

Published : Jul 7, 2019, 7:42 AM IST

ಬೆಂಗಳೂರು: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿಯಿಂದ ಬಂಧನಕ್ಕೊಳಗಾಗಿದ್ದ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್.ಸಿ. ನಾಗರಾಜ್‌ ಅವರನ್ನು ಜು.12 ರವರೆಗೆ ಸಿಟಿ ಸಿವಿಲ್​ ಕೋರ್ಟ್​ ಪೊಲೀಸ್‌ ಕಸ್ಟಡಿಗೆ ನೀಡಿದೆ.

ನಾಗರಾಜ್‌ ಅವರನ್ನು ಪೊಲೀಸರು ಶನಿವಾರ ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ನ ಪ್ರಧಾನ ನ್ಯಾಯಾಧೀಶ ಶಿವಶಂಕರ ಬಿ. ಅಮರಣ್ಣವರ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ವೇಳೆ ನಾಗರಾಜ್‌ ಪರ ವಾದ ಮಂಡಿಸಿದ ವಕೀಲ ಸಿ.ಹೆಚ್‌. ಹನುಮಂತರಾಯ, ಆರೋಪಿಯನ್ನು 2-3 ದಿನಗಳಲ್ಲಿ ವಿಚಾರಣೆ ಮಾಡಿ ಮುಗಿಸಬಹುದು. ಪ್ರಾಸಿಕ್ಯೂಷನ್‌ ಕೇಳಿರುವಂತೆ 14 ದಿನ ಪೊಲೀಸ್‌ ಕಸ್ಟಡಿಗೆ ನೀಡುವುದು ಸರಿಯಲ್ಲ ಎಂದು ವಾದಿಸಿದರು.

ಇದಕ್ಕೆ ಪ್ರಾಸಿಕ್ಯೂಷನ್‌ ಪರ ಹಾಜರಿದ್ದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ನಾರಾಯಣ ರೆಡ್ಡಿ, ಐಎಂಎ ಕಂಪನಿ ವಿರುದ್ಧ ಬಂದಿರುವ ದೂರುಗಳ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರ ಆರೋಪಿಗೆ ನಿರ್ದೇಶಿಸಿತ್ತು. ನಾಗರಾಜ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರನ್ನು ಕರೆಯಿಸಿಕೊಂಡು, ಟವರ ಪರವಾಗಿ ವರದಿ ನೀಡುವುದಾಗಿ ಅದರಲ್ಲಿದ್ದಂತಹ ಆಡಳಿತ ದೌರ್ಬಲ್ಯ, ವಹಿವಾಟಿನ ಹುಳುಕು ಮತ್ತು ಕಾನೂನು ಬಾಹಿರ ವ್ಯವಹಾರಗಳನ್ನು ಮುಚ್ಚಿಟ್ಟಿದ್ದರು. ಅಲ್ಲದೆ, ಎಲ್ಲಾ ಸರಿ ಇದೆ. ಇದರಲ್ಲಿ ಏನೂ ತೊಂದರೆ ಇಲ್ಲ ಎಂಬ ವರದಿ ನೀಡಿದ್ದಾರೆ ಎಂದು ಬಲವಾಗಿ ಆಕ್ಷೇಪ ವ್ಯಕ್ತಪಡಿಸಿದರು.

ಆರೋಪಿಯು ಸರ್ಕಾರದ ಉನ್ನತ ಅಧಿಕಾರಿಯಾಗಿದ್ದು, ಪ್ರಕರಣದಲ್ಲಿ ಅವರು 16ನೇ ಆರೋಪಿಯಾಗಿದ್ದಾರೆ. ನಾಗರಾಜ್​ ಅವರು, ಕಂದಾಯ ಅಧಿಕಾರಿ ಮಂಜುನಾಥ್‌ ಮುಖೇನ 4.5 ಕೋಟಿ ರೂ. ಹಣ ಪಡೆದಿದ್ದಾರೆ. ಇವರು ಪಡೆದಿರುವ ಹಣ ಹೂಡಿಕೆದಾರರಿಗೆ ಸೇರಿದ್ದು, ಅದನ್ನು ಅವರಿಗೆ ವಾಪಸ್‌ ನೀಡಬೇಕಿದೆ. ಅದಕ್ಕಾಗಿ ಆರೋಪಿ ಹಣವನ್ನು ಎಲ್ಲಿ ಅಡಗಿಸಿಟ್ಟಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕಿದೆ ಮತ್ತು ಅವರಿಗೆ ಸೇರಿದ ಚರ ಮತ್ತು ಸ್ಥಿರಾಸ್ತಿಗಳನ್ನು ಪಟ್ಟಿ ಮಾಡಬೇಕಿದೆ. ಹೀಗಾಗಿ 14 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸುವುದು ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.

ಬಳಿಕ ನ್ಯಾಯಾಧೀಶರು ಎಲ್‌.ಸಿ. ನಾಗರಾಜ್‌ ಅವರನ್ನು ಜು.12 ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದರು.

Intro:nullBody:ಐಎಂಎ ವಂಚನೆ ಪ್ರಕರಣ: ಬೆಂಗಳೂರು ನಾರ್ತ್​ ಎಸಿ ನಾಗರಾಜ್​ಗೆ ಇದೇ 12ರವರೆಗೆ ಎಸ್​ಐಟಿ ಕಸ್ಟಡಿಗೆ
ಬೆಂಗಳೂರು: ಬಹುಕೋಟಿ ವಂಚನೆಯ ಐಎಂಎ ಕಂಪೆನಿಯ ಹಗರಣದಲ್ಲಿ ಎಸ್‌ಐಟಿಯಿಂದ ಬಂಧಿಸಿದ್ದ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್‌.ಸಿ.ನಾಗರಾಜ್‌ ಅವರನ್ನು ಇದೇ 12ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ.
ನಾಗರಾಜ್‌ ಅವರನ್ನು ಪೊಲೀಸರು ಶನಿವಾರ ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ನ ಪ್ರಧಾನ ನ್ಯಾಯಾಧೀಶ ಶಿವಶಂಕರ ಬಿ.ಅಮರಣ್ಣವರ ಅವರ ಮುಂದೆ ಹಾಜರುಪಡಿಸಿದರು. ಇಂದು ಸಂಜೆ 4 ಗಂಟೆಗೆ ಪ್ರಕರಣವನ್ನು ವಿಚಾರಣೆ ನಡೆಯಿತು. ವಿಚಾರಣೆ ವೇಳೆ ನಾಗರಾಜ್‌ ಪರ ಹಾಜರಿದ್ದು ವಾದ ಮಂಡಿಸಿದ ವಕೀಲ ಸಿ.ಎಚ್‌.ಹನುಮಂತರಾಯ ಅವರು, ಆರೋಪಿಯನ್ನು ಎರಡು ಮೂರು ದಿನಗಳಲ್ಲಿ ವಿಚಾರಣೆ ಮಾಡಿ ಮುಗಿಸಬಹುದು. ಪ್ರಾಸಿಕ್ಯೂಷನ್‌ ಕೇಳಿರುವಂತೆ 14 ದಿನ ಪೊಲೀಸ್‌ ಕಸ್ಟಡಿಗೆ ನೀಡುವುದು ಸರಿಯಲ್ಲ ಎಂದು ವಾದಿಸಿದರು.
ಇದಕ್ಕೆ ಪ್ರಾಸಿಕ್ಯೂಷನ್‌ ಪರ ಹಾಜರಿದ್ದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ನಾರಾಯಣ ರೆಡ್ಡಿ, ಐಎಂಎ ಕಂಪನಿ ವಿರುದ್ಧ ಬಂದಿರುವ ದೂರುಗಳ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರ ಆರೋಪಿಗೆ ನಿರ್ದೇಶಿಸಿತ್ತು. ನಾಗರಾಜ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರನ್ನು ಕರೆಯಿಸಿಕೊಂಡು, ನಿಮ್ಮ ಪರವಾಗಿ ವರದಿ ನಿಡುತ್ತೇನೆ ಎಂದು ಅದರಲ್ಲಿದ್ದಂತಹ ಆಡಳಿತ ದೌರ್ಬಲ್ಯ, ವಹಿವಾಟಿನ ಹುಳುಕು ಮತ್ತು ಕಾನೂನುಬಾಹಿರ ವ್ಯವಹಾರಗಳನ್ನು ಮುಚ್ಚಿಟ್ಟು, ಎಲ್ಲಾ ಸರಿ ಇದೆ. ಇದರಲ್ಲಿ ಏನೂ ತೊಂದರೆ ಇಲ್ಲ ಎಂಬ ಪಕ್ಷಪಾತಿ ವರದಿ ನೀಡಿದ್ದಾರೆ ಎಂದು ಬಲವಾಗಿ ಆಕ್ಷೇಪಿಸಿದರು.
ಆರೋಪಿಯು ಸರ್ಕಾರದ ಉನ್ನತ ಅಧಿಕಾರಿಯು ಪ್ರಕರಣದಲ್ಲಿ ಅವರು 16ನೇ ಆರೋಪಿ ಕಂದಾಯ ಅಧಿಕಾರಿ ಮಂಜುನಾಥ್‌ ಮುಖೇನ 4.5 ಕೋಟಿ ರೂ.ಪಡೆದಿದ್ದಾರೆ. ಇವರು ಪಡೆದಿರುವ ಹಣ ಹೂಡಿಕೆದಾರರಿಗೆ ಸೇರಿದ್ದು ಅದನ್ನು ಅವರಿಗೆ ವಾಪಸ್‌ ನೀಡಬೇಕಿದೆ. ಅದಕ್ಕಾಗಿ ಆರೋಪಿ ಹಣವನ್ನು ಎಲ್ಲಿ ಅಡಗಿಸಿಟ್ಟಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕಿದೆ ಮತ್ತು ಅವರಿಗೆ ಸೇರಿದ ಚರ ಮತ್ತು ಸ್ಥಿರಾಸ್ತಿಗಳನ್ನು ಪಟ್ಟಿ ಮಾಡಬೇಕಿದೆ. ಹೀಗಾಗಿ 14 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸುವುದು ಅತ್ಯಂತ ಅವಶ್ಯವಿದೆ ಎಂದು ಪ್ರತಿಪಾದಿಸಿದರು.

Conclusion:ಐಎಂಎ ವಂಚನೆ ಪ್ರಕರಣ: ಬೆಂಗಳೂರು ನಾರ್ತ್​ ಎಸಿ ನಾಗರಾಜ್​ಗೆ ಇದೇ 12ರವರೆಗೆ ಎಸ್​ಐಟಿ ಕಸ್ಟಡಿಗೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.