ಬೆಂಗಳೂರು: ನಗರದಲ್ಲಿ ಸೂಪರ್ ಮಾರ್ಕೆಟ್ಗಳನ್ನು ಭಾನುವಾರವೇ ತೆರೆಯಲು ಆದೇಶ ನೀಡಲಾಗಿತ್ತು. ಆದರೀಗ ಹವಾನಿಯಂತ್ರಿತ ವ್ಯವಸ್ಥೆ ಹೊಂದಿರುವ ಮಾಲ್ಗಳನ್ನೂ ಕೂಡಲೇ ಬಂದ್ ಮಾಡಬೇಕೆಂದು ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ರಾಜು ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ ಭೀತಿ ಹಿನ್ನೆಲೆ ಹಲವು ಮುನ್ನೆಚ್ಚರಿಕಾ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ. ಪ್ರಮುಖವಾಗಿ ಬೆಂಗಳೂರಿನಲ್ಲಿ ಕೊರೊನ ಸೋಂಕು ಇರುವ ವ್ಯಕ್ತಿಗಳನ್ನು ಗುರುತಿಸಲು ಜಿಐಎಸ್ GIS (global geographical information system) ಅಳವಡಿಕೆ ಮಾಡಲಾಗಿದೆ. ಜನರು ಕೂಡ ಪಾಲಿಕೆ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದರು.
ಇಂದಿನಿಂದಲೇ ಎಲ್ಲಾ ಎಸಿ ಅಳವಡಿಕೆ ಇರುವ ಸೂಪರ್ ಮಾರ್ಕೆಟ್‌ಗಳು ಕ್ಲೋಸ್ ಆಗಬೇಕು. ಶಾಲಾ-ಕಾಲೇಜುಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ರದ್ದಾಗಬೇಕು. ಮೊದಲೇ ನಿಗದಿಯಾದ ಮದುವೆ ಸಮಾರಂಭಗಳು ಹೊರತುಪಡಿಸಿ, ಕಲ್ಯಾಣ ಮಂಟಪಗಳಲ್ಲಿ ನಡೆಯುವ ಕಾರ್ಯಕ್ರಮಗಳು ರದ್ದು ಮಾಡಬೇಕು. ಬಿಬಿಎಂಪಿಯಿಂದಲೂ ನಾಲ್ಕು ಆರೋಗ್ಯಾಧಿಕಾರಿಗಳನ್ನು ಏರ್ಪೋರ್ಟ್ನಲ್ಲಿ ನೇಮಿಸಲಾಗಿದ್ದು, ವಿದೇಶದಿಂದ ಬರುವವರನ್ನು ತಪಾಸಣೆ ನಡೆಸುತ್ತಿದ್ದಾರೆ ಎಂದರು.