ETV Bharat / state

Cauvery water issue: ಕಾವೇರಿ ನಿರ್ವಹಣಾ ಮಂಡಳಿ, ಪ್ರಾಧಿಕಾರ ರದ್ದುಗೊಳಿಸಿ ಸ್ವತಂತ್ರ ಸಮಿತಿ ರಚಿಸಿ: ಕುರುಬೂರು ಶಾಂತಕುಮಾರ್ - ಕುರುಬೂರು ಶಾಂತಕುಮಾರ್ ಸಭೆ

ಸರ್ಕಾರ ರಜನಿಕಾಂತ್​ ಅವರ ಮಧ್ಯಸ್ಥಿಕೆ ವಹಿಸಿಕೊಂಡು ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದು ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

Kuruburu Shanthakumar Meeting
ಕುರುಬೂರು ಶಾಂತಕುಮಾರ್ ಸಭೆ
author img

By ETV Bharat Karnataka Team

Published : Sep 21, 2023, 3:20 PM IST

ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಮಂಡಳಿ ಮತ್ತು ಕಾವೇರಿ ಪ್ರಾಧಿಕಾರಗಳನ್ನು ರದ್ದುಗೊಳಿಸಿ ಚುನಾವಣಾ ಆಯೋಗದ ಮಾದರಿಯಲ್ಲಿ ಸ್ವತಂತ್ರ ಸಮಿತಿಯೊಂದನ್ನು ರಚಿಸಬೇಕು ಎಂದು ರೈತ ನಾಯಕ ಕುರುಬೂರು ಶಾಂತಕುಮಾರ್ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.

ಕೂಡಲೇ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ ಸುಪ್ರೀಂಕೋರ್ಟ್ ಮುಂದೆ ಮರುಪರಿಶೀಲನೆ ಅರ್ಜಿ ಹಾಕಬೇಕು. ಕಾವೇರಿ ನಿರ್ವಹಣಾ ಮಂಡಳಿ, ಪ್ರಾಧಿಕಾರ, ಸರ್ಕಾರಗಳಿಂದ ವಾಸ್ತವ ತಲುಪುತ್ತಿಲ್ಲ. ಹಾಗಾಗಿ ಮಂಡಳಿ, ಪ್ರಾಧಿಕಾರ ರದ್ದುಪಡಿಸಿ ನಾಲ್ಕು ರಾಜ್ಯಗಳ ತಜ್ಞರು, ಪರಿಣಿತರನ್ನು ಒಳಗೊಂಡ ಸಮಿತಿ ರಚಿಸಬೇಕು. ಚುನಾವಣಾ ಆಯೋಗದ ರೀತಿ ಸ್ವತಂತ್ರ ಸಮಿತಿ ರಚನೆಯಾಗಬೇಕು. ರಾಜ್ಯದಿಂದ ರಾಜ್ಯಸಭೆಗೆ ಕರ್ನಾಟಕದವರೇ ಆಯ್ಕೆಯಾಗಬೇಕು. ರಾಜ್ಯದ ಪರ ದನಿ ಎತ್ತುವಂತವರಾಗಬೇಕು. ನಿರ್ಮಲಾ ಸೀತಾರಾಮನ್ ನಡೆ ರಾಜ್ಯದ ದೌರ್ಭಾಗ್ಯ ಎಂದರು. ಮುಂದಿನ ಹೋರಾಟ ಹೇಗಿರಬೇಕು, ಇಡೀ ರಾಜ್ಯ ಬಂದ್ ಬದಲು, ಕಾವೇರಿ ಕೊಳ್ಳದ ಬಂದ್​ಗೆ ಕರೆ ಕೊಡಬೇಕು ಎನ್ನುವ ಅಭಿಪ್ರಾಯ ಸಲ್ಲಿಸಿದರು.

ಸಮಿತಿ ಸಂಚಾಲಕ ಕುಮಾರಸ್ವಾಮಿ ಮಾತನಾಡಿ, ತಮಿಳುನಾಡಿಗೆ ನೀರು ಬಿಡದ ಬಗ್ಗೆ ಒಕ್ಕೋರಲಿನ ನಿರ್ಧಾರ ಮಾಡಬೇಕು. ಮಹದಾಯಿ ವಿಚಾರದಲ್ಲಿ ನಾವು ನಿರ್ಲಕ್ಷ್ಯ ವಹಿಸಿದ್ದೇವೆ. ನಮ್ಮದೂ ತಪ್ಪಿದೆ. ಆದರೂ ಕರ್ನಾಟಕ ಬಂದ್​ಗೆ ಕರೆ ಕೊಡಬೇಕು. ಎಲ್ಲರ ಬೆಂಬಲ ಗಳಿಸಬೇಕು, ಚಿತ್ರರಂಗ ಸಂಪೂರ್ಣ ಬೆಂಬಲ ಕೊಡಬೇಕು. ಎರಡೂ ರಾಜ್ಯದ ಸಂಕಷ್ಟ ಪರಿಹರಿಸಲು ನಟ ರಜನಿಕಾಂತ್ ಅವರನ್ನು ಬಳಸಿಕೊಳ್ಳಲು ಸರ್ಕಾರ ಮುಂದಾಗಬೇಕು. ಎರಡೂ ರಾಜ್ಯಕ್ಕೆ ರಜನಿಕಾಂತ್ ಬೇಕಾದವರು. ಹಾಗಾಗಿ ಅವರ ಮಧ್ಯಸ್ಥಿಕೆ ವಹಿಸಿಕೊಂಡು ಶಾಶ್ವತ ಪರಿಹಾರಕ್ಕೆ ನಿರ್ಣಯ ಕೈಗೊಳ್ಳಬೇಕು. ಸರ್ವಪಕ್ಷ ಸಭೆ ಕರೆದರು, ಆದರೆ ರೈತ ಮುಖಂಡರು, ಕನ್ನಡಪರ ಹೋರಾಟಗಾರರನ್ನು ಸಭೆಗೆ ಕರೆಯದೆ ಅಸಡ್ಡೆ ತೋರಿದ್ದೀರಿ. ಇಂತಹ ತಪ್ಪು ಮಾಡಬಾರದು, ಕೂಡಲೇ ನಮ್ಮ ಸಭೆ ಕರೆಯಬೇಕು ಎಂದು ಕುರುಬೂರು ಆಗ್ರಹಿಸಿದರು.

ಹೋರಾಟಗಾರರ ಮೇಲೆ ಕೇಸು ಹಾಕಬಾರದು. ಈ ಹಿಂದೆ ಹೋರಾಟದಲ್ಲಿ ಕೇಸು ಹಾಕಿದ್ದರು. ಇದರಿಂದಾಗಿ ಹೋರಾಟಕ್ಕೆ ಮುಂದಾಗಲು ಜನರು ಹಿಂದೇಟು ಹಾಕಬಾರದು. ಕೂಡಲೇ ಸರ್ಕಾರ ಕೇಸು ಹಾಕಲ್ಲ ಎನ್ನುವ ನಿರ್ಧಾರ ಪ್ರಕಟಿಸಬೇಕು. ಕೇಸು ಹಾಕಿದರೆ ರಾಜ್ಯ ವಿರೋಧಿ ಎನ್ನುವ ನಿಲುವನ್ನು ನಾವು ತಳೆಯಬೇಕು ಎಂದರು.

ಜನತಾದಳದ ಕುಮಾರ್ ಮಾತನಾಡಿ, ಶಾಂತ ಸ್ವಭಾವದ ಹೋರಾಟದಿಂದ ಏನೂ ಆಗಲ್ಲ. ಶಾಂತ ಸ್ವರೂಪದ ಹೋರಾಟ ಬೇಡ, ಉಗ್ರ ಹೋರಾಟ ನಡೆಸೋಣ, ನಮ್ಮ ಪರ ಮಾತನಾಡುವವರು ಯಾರೂ ಇಲ್ಲ, ಈಗಿನ ಮುಖ್ಯಮಂತ್ರಿಗಳು ಒಳಗೊಳಗೆ ನೀರು ಬಿಟ್ಟಿರುವುದನ್ನು ನೋಡಿದರೆ ಮುಂದಿನ ಚುನಾವಣೆ ಪರವಾಗಿದ್ದಾರೆ ಎನಿಸುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದರು.

ನಾವು ಶಾಂತವಾಗಿ ಕುಳಿತುಕೊಳ್ಳುವ ಅವಶ್ಯಕತೆ ಇಲ್ಲ. ಯಾರೋ ಮಳೆ ಬರಲಿದೆ, ಡ್ಯಾಂ ತುಂಬಲಿದೆ ಎಂದು ಭವಿಷ್ಯ ಹೇಳಿದ್ದಾರಂತೆ. ಅದಕ್ಕೆ ಇವರು ನೀರು ಬಿಟ್ಟಿದ್ದಾರಂತೆ ಎಂದು ಕಿಡಿಕಾರಿದ ಕುಮಾರ್, ಅಧಿವೇಶನದಲ್ಲಿ ಸಂಕಷ್ಟ ಸೂತ್ರ ಇಲ್ಲ. ಸೌಹಾರ್ದಯುತ ಚರ್ಚೆ ಮಾಡೋಣ ಎಂದು ನಮ್ಮ ಎಲ್ಲ ಸಂಸದರು ಒತ್ತಾಯಿಸಬೇಕು. ಬೆಂಗಳೂರಿಗೆ ಬಂದಿರುವ ವಲಸಿಗರನ್ನು ನಾವು ತಲುಪಬೇಕು. ಅವರೂ ನೀರು ಬಳಸುತ್ತಿದ್ದಾರೆ, ನಮ್ಮ ರೈತರಿಗೆ ಬೆಳೆಗೆ ನೀರಿಲ್ಲ. ನಿಮಗೆಲ್ಲಾ ಪೋಲು ಮಾಡಲು ನೀರು ಇದೆ. ಅವರನ್ನೂ ಹೋರಾಟಕ್ಕೆ ಕರೆಸಬೇಕು. ಈ ಬಗ್ಗೆ ತಿಳುವಳಿಕೆ ಮೂಡಿಸಬೇಕು, ನಾವು ಮಾತ್ರ ಹೋರಾಟ ಮಾಡಬೇಕು. ವಲಸಿಗರು ಕೂತು ತಿನ್ನಬೇಕಾ? ಕಾವೇರಿ ನೀರು ಕುಡಿಯುತ್ತಿರುವ ಎಲ್ಲರನ್ನೂ ಹೋರಾಟಕ್ಕೆ ಕರೆಯೋಣ ಎಂದು ಹೇಳಿದರು.

ಆಪ್ ಮಾಜಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, ಜನಬಲ ತೋರಿಸಲೇಬೇಕು, ಜೈಲಿಗೆ ಹೋದರೂ ಚಿಂತೆ ಇಲ್ಲ, ಹೋರಾಟ ಮಾಡೋಣ, ಬೆಂಗಳೂರಿನಲ್ಲಿ ಕಾವೇರಿ ನೀರಿನ ಚರ್ಚೆಯೇ ಆಗುತ್ತಿಲ್ಲ, ಮೊದಲು ಆ ಚರ್ಚೆ ಹುಟ್ಟುಹಾಕಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ: ತುರ್ತು ಅಧಿವೇಶನ ನಡೆಸಿ 'ನೀರು ಬಿಡಲು ಸಾಧ್ಯವಿಲ್ಲ' ಎಂದು ಸುಗ್ರೀವಾಜ್ಞೆ ಜಾರಿಗೆ ತನ್ನಿ: ಮುಖ್ಯಮಂತ್ರಿ ಚಂದ್ರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.