ETV Bharat / state

ಬೆಂಗಳೂರು ಜನತೆಗೆ ರಾಜ್ಯ ಸರ್ಕಾರ ಬಜೆಟ್​ನಲ್ಲಿ ಮೋಸ ಮಾಡಿದೆ: ಅಬ್ದುಲ್ ವಾಜಿದ್​ - ವಿಪಕ್ಷ ನಾಯಕ ವಾಜಿದ್ ಟೀಕೆ

ಬಿಬಿಎಂಪಿಗೆ ಚುನಾವಣಾ ವರ್ಷವಾಗಿರೋದ್ರಿಂದ ರಾಜ್ಯ ಸರ್ಕಾರದ ಬಜೆಟ್​​ನಲ್ಲಿ ಬೆಂಗಳೂರಿಗೆ ಹೆಚ್ಚಿನ ಅನುದಾನದ ನಿರೀಕ್ಷೆ ಇಡಲಾಗಿತ್ತು. ಆದ್ರೆ ಹಳೆಯ ಯೋಜನೆಗಳನ್ನೇ ಮುಂದುವರಿಸಿದ್ದು, ಹೊಸ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡದಿರುವುದು ಬೆಂಗಳೂರಿನ ಪಾಲಿಗೆ ಕಹಿಯಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್​​ ಆರೋಪಿಸಿದೆ‌.

abdul-wajid-speak-about-state-govt-budget
ಅಬ್ದುಲ್ ವಾಜಿದ್
author img

By

Published : Mar 5, 2020, 11:53 PM IST

ಬೆಂಗಳೂರು: ಬಿಬಿಎಂಪಿಗೆ ಚುನಾವಣಾ ವರ್ಷವಾಗಿರೋದ್ರಿಂದ ರಾಜ್ಯ ಸರ್ಕಾರದ ಬಜೆಟ್​​ನಲ್ಲಿ ಬೆಂಗಳೂರಿಗೆ ಹೆಚ್ಚಿನ ಅನುದಾನದ ನಿರೀಕ್ಷೆ ಇಡಲಾಗಿತ್ತು. ಆದ್ರೆ ಹಳೆಯ ಯೋಜನೆಗಳನ್ನೇ ಮುಂದುವರಿಸಿದ್ದು, ಹೊಸ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡದಿರುವುದು ಬೆಂಗಳೂರಿನ ಪಾಲಿಗೆ ಕಹಿಯಾಗಿದೆ ಎಂದು ಪ್ರತಿಪಕ್ಷ ಆರೋಪಿಸಿದೆ‌. ಅಲ್ಲದೆ ಹೆಚ್ಚಿನ ತೆರಿಗೆ ನೀಡುವ ಬಿಬಿಎಂಪಿಗೆ ಕಡಿಮೆ ಮೊತ್ತದ ಅನುದಾನ ನೀಡಿ ಮೋಸ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಅಬ್ದುಲ್​​ ವಾಜಿದ್ ಟೀಕಿಸಿದ್ದಾರೆ.

ಅಬ್ದುಲ್ ವಾಜಿದ್, ಪ್ರತಿಪಕ್ಷ ನಾಯಕ

ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳ ಅಭಿವೃದ್ಧಿಗೆ ಎರಡು ವರ್ಷಕ್ಕೆ ಸಾವಿರ ಕೋಟಿ ಮೀಸಲಿಟ್ಟಿದ್ದು, ಕಸದಿಂದ ವಿದ್ಯುತ್ ಯೋಜನೆಗೆ 210 ಕೋಟಿ ರೂ., ಮಳೆನೀರು, ಕಾಲುವೆ ಅಭಿವೃದ್ಧಿಗೆ 500 ಕೋಟಿ ರೂ. ಮೀಸಲಿಟ್ಟಿದೆ. ಅಲ್ಲದೆ 2019-20ನೇ ಸಾಲಿನ ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆಯ 8344 ಕೋಟಿ ರೂ., ಶುಭ್ರ ಯೋಜನೆಯ 999 ಕೋಟಿ ರೂ. ಯೋಜನೆ ಅನುಷ್ಠಾನದ ಬಗ್ಗೆ ಬಜೆಟ್​​ನಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ ಇಂದಿರಾ ಕ್ಯಾಂಟೀನ್ ಯೋಜನೆ, ರಸ್ತೆ ಅಭಿವೃದ್ಧಿಗಳಿಗೆ ಈ ಬಾರಿ ಹೆಚ್ಚಿನ ಅನುದಾನ ನೀಡಿಲ್ಲ.

ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಮೇಯರ್ ಗೌತಮ್ ಕುಮಾರ್, 8772 ಕೋಟಿ ರೂಪಾಯಿ ಬಿಬಿಎಂಪಿಗೆ ನೀಡಿದ್ದಾರೆ. ಜನರ ಹಿತದೃಷ್ಟಿಯಿಂದ ಈ ಬಜೆಟ್ ನೀಡಿದ್ದಾರೆ. 110 ಹೊಸ ಹಳ್ಳಿಗಳ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ‌. 2020-21ನೇ ಸಾಲಿಗೆ ಐನೂರು ಕೋಟಿ ನೀಡಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನೂರು ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣ ಜನರಿಗೆ ಖುಷಿ ಕೊಡುವ ಕಾರ್ಯ. ಕಸದ ವಿಲೇವಾರಿ, ಕಸದಿಂದ ವಿದ್ಯುತ್ ಘಟಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ. 14,500 ಕೋಟಿ ಸಂಚಾರ ದಟ್ಟಣೆ ನಿವಾರಣೆಗೆ ಮೀಸಲಿಟ್ಟಿದ್ದಾರೆ. ಇಪ್ಪತ್ನಾಲ್ಕು ಫ್ಲೈ ಓವರ್ ನಿರ್ಮಾಣಕ್ಕೆ ಅನುದಾನ ಇಟ್ಟಿದ್ದು, ಉತ್ತಮ ಬಜೆಟ್ ನೀಡಿದ್ದಾರೆ ಎಂದರು.

ಆದ್ರೆ ವಿಪಕ್ಷ ನಾಯಕ ವಾಜಿದ್ ಪ್ರತಿಕ್ರಿಯಿಸಿ, 110 ಹಳ್ಳಿಗಳ ಅಭಿವೃದ್ಧಿಗೆ ಸಾವಿರ ಕೋಟಿ ರೂ. ಸಾಲುವುದಿಲ್ಲ. ಎರಡೂ ಕಡೆ ಬಿಜೆಪಿ ಆಡಳಿತ ಇರೋದ್ರಿಂದ ಹೆಚ್ಚೇ ನಿರೀಕ್ಷೆ ಇತ್ತು. ಆದ್ರೆ ನಗರದಿಂದ ಒಂದು ಲಕ್ಷ ಕೋಟಿ ರೂ. ತೆರಿಗೆ ನೀಡುವ ಸರ್ಕಾರಕ್ಕೆ ಶೇ. 10ರಷ್ಟು ಕೂಡಾ ಅನುದಾನ ನೀಡಿಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.