ಬೆಂಗಳೂರು: ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಅಧಿಕಾರಕ್ಕೆ ಬಂದು ನೂರು ದಿನಗಳು ಕಳೆದಿವೆ. ಆದ್ರೆ ಕೊಟ್ಟಿರುವ ಯಾವ ಆಶ್ವಾಸನೆಯೂ ಪೂರ್ಣಗೊಳಿಸಿಲ್ಲ ಎಂದು ವಿರೋಧ ಪಕ್ಷದ ನಾಯಕ ವಾಜಿದ್ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೇಯರ್ ಗೌತಮ್ ಕುಮಾರ್ ಅವರು, ಕಸ ಸ್ವಚ್ಛ ಮಾಡ್ತೇವೆ, ಪ್ಲಾಸ್ಟಿಕ್ ಬ್ಯಾನ್ ಮಾಡ್ತೇವೆ, ಜಾಹೀರಾತು ಹೋರ್ಡಿಂಗ್ಸ್ ಬ್ಯಾನ್ ಮಾಡುತ್ತೇವೆ ಹೀಗೆ ಸಾಕಷ್ಟು ಆಶ್ವಾಸನೆಗಳನ್ನು ಕೊಟ್ರು. ಆದ್ರೆ ಇದುವರೆಗೆ ಯಾವ ಕಾರ್ಯಗಳನ್ನು ಮಾಡಿಲ್ಲ. ಈವರೆಗೆ ಒಂದು ಸಭೆ ಕೂಡ ಆಗಿಲ್ಲ. ಸರ್ಕಾರದಿಂದ ಬಜೆಟ್ ಬರುತ್ತಿದ್ದು, ಈವರೆಗೆ ಅನುದಾನ ತರಿಸುವ ಬಗ್ಗೆ ಒಂದು ಸಭೆಯೂ ನಡೆದಿಲ್ಲ. ಮೇಯರ್, ಆಯುಕ್ತರು, ಉಪಮೇಯರ್ ಒಂದೊಂದು ದಿಕ್ಕಿನಲ್ಲಿದ್ದು, ಆಡಳಿತದಲ್ಲಿ ಹೊಂದಾಣಿಕೆ ಇಲ್ಲ. ಇದು ಆಡಳಿತದ ವೈಫಲ್ಯ ಎಂದರು.
ಇನ್ನೂ ಹಸಿ ತ್ಯಾಜ್ಯದ ಟೆಂಡರ್ ಕಾಂಗ್ರೆಸ್ ಆಡಳಿತ ಮಾಡಿದ್ರೂ, ಬಿಜೆಪಿ ಅದನ್ನು ಪೂರ್ಣಗೊಳಿಸಿಲ್ಲ. ನಗರದಲ್ಲಿ ಕಸದ ಸಮಸ್ಯೆ ಉಲ್ಬಣಗೊಂಡಿದೆ. ಈಗಾಗಲೇ ಮೂರು ಕೌನ್ಸಿಲ್ ಸಭೆ ನಡೆಸಿದ್ರೂ ಕೇವಲ ಮೂರು ಗಂಟೆ ಚರ್ಚೆ ನಡೆದಿದೆ ಎಂದರು.