ETV Bharat / state

ತಂತ್ರಜ್ಞಾನದ ಬಳಕೆ ವಿಪತ್ತು ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತೆ: ಬಸವರಾಜ ಬೊಮ್ಮಾಯಿ - ಆಪ್ದಾಮಿತ್ರ ಕಾರ್ಯಗಾರ ಬೆಂಗಳೂರು

ಪ್ರವಾಹಕ್ಕೆ ತುತ್ತಾಗುವ ಪ್ರದೇಶಗಳಲ್ಲಿ ಸಂಭವಿಸಬಹುದಾದ ವಿಪತ್ತುಗಳ ಬಗ್ಗೆ ಮುಂಚಿತವಾಗಿ ತಿಳಿಸುವ ಆಪ್ದಾಮಿತ್ರ ಆ್ಯಪ್ ಪ್ರತಿಯೊಬ್ಬರು ಬಳಸುವಂತಾಗಬೇಕು. ತಂತ್ರಜ್ಞಾನದ ಬಳಕೆ ವಿಪತ್ತು ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಬಸವರಾಜ್​ ಬೊಮ್ಮಾಯಿ ಹೇಳಿದರು.

aapda mitra workshop
ಆಪ್ದಾಮಿತ್ರ ಕಾರ್ಯಾಗಾರ
author img

By

Published : Jul 22, 2022, 8:10 PM IST

ಬೆಂಗಳೂರು: ಪ್ರಕೃತಿ ವಿಕೋಪ ಸಂದರ್ಭದಲ್ಲಿ ಪ್ರಮಾಣೀಕೃತ ವಿಪತ್ತು ನಿರ್ವಹಣೆಯ ವ್ಯವಸ್ಥೆ ಅತ್ಯಗತ್ಯವಿದ್ದು, ವಿಪತ್ತು ಎದುರಿಸಲು ರಾಜ್ಯ ಸನ್ನದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೇಂದ್ರ ಗೃಹ ಮಂತ್ರಾಲಯ ಹಾಗೂ ಕೆ.ಎಸ್.ಡಿ.ಎಂ.ಎ ವತಿಯಿಂದ ಆಯೋಜಿಸಲಾಗಿದ್ದ ’ಆಪ್ದಾಮಿತ್ರ’ ಯೋಜನೆಯ ಉನ್ನತೀಕರಣಕ್ಕಾಗಿ ಮೊಬೈಲ್ ಆಪ್ ಹಾಗೂ ಎಂಐಎಸ್ ತರಬೇತಿಗಾಗಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಹಲವು ಬಾರಿ ಪ್ರಕೃತಿ ವಿಕೋಪದ ಪರಿಸ್ಥಿತಿಯನ್ನು ಎದುರಿಸಿದೆ.

ಆಪ್ದಾಮಿತ್ರ ಕಾರ್ಯಗಾರ

ಹಿಂದಿನ ವಿಪತ್ತು ನಿರ್ವಹಣೆಯಲ್ಲಾದ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳುವ ಜೊತೆಗೆ ಪ್ರಮಾಣೀಕೃತ ವಿಪತ್ತು ನಿರ್ವಹಣೆಯ ವ್ಯವಸ್ಥೆಯ ಅಗತ್ಯವಿದೆ. ರಾಜ್ಯದಲ್ಲಿ ಪ್ರವಾಹಕ್ಕೆ ತುತ್ತಾಗುವ ಪ್ರದೇಶಗಳಲ್ಲಿ ಸಂಭವಿಸಬಹುದಾದ ವಿಪತ್ತುಗಳ ಬಗ್ಗೆ ಮುಂಚಿತವಾಗಿಯೇ ತಿಳಿದುಕೊಂಡು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪ್ರತಿಬಾರಿಯೂ ಸೂಚನೆಗಾಗಿ ಕಾಯುವಂತಿರಬಾರದು. ತಂತ್ರಜ್ಞಾನದ ಬಳಕೆ ವಿಪತ್ತು ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಜನರ ಭಾಗವಹಿಸುವಿಕೆಯಿಂದ ವಿಪತ್ತು ನಿರ್ವಹಣೆ ಸುಲಭ: ಪ್ರಕೃತಿ ವಿಕೋಪಗಳನ್ನು ತಡೆಯಲು ಸಾಧ್ಯವಿಲ್ಲ. ಆದರೆ, ವಿಪತ್ತುಗಳು ಸಂಭವಿಸುವ ಮುನ್ನ ಹಾಗೂ ನಂತರದ ನಿರ್ವಹಣಾ ಕ್ರಮಗಳು ಪ್ರಾಮುಖ್ಯತೆಯನ್ನು ಪಡೆಯುತ್ತವೆ. ಈ ವಿಕೋಪಗಳಿಂದ ನಾವು ಬಹಳಷ್ಟು ಕಲಿತಿದ್ದೇವೆ. ದೇಶದ ಕರಾವಳಿ ಭಾಗಗಳಲ್ಲಿ, ಉತ್ತರ ಹಾಗೂ ದಕ್ಷಿಣ ಭಾಗಗಳಲ್ಲಿ ಪ್ರಕೃತಿ ವಿಕೋಪಗಳು ಉಂಟಾಗಿವೆ.

ವಿಪತ್ತು ನಿರ್ವಹಣೆಗೆ ಅತ್ಯಂತ ಮಹತ್ವ ನೀಡಿ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ. ಈ ಚಿಂತನೆಯಿಂದ ಆಪ್ದಾಮಿತ್ರ ಆಪ್‍ ಅನ್ನು ತಯಾರಿಸಲಾಗಿದೆ. ದೇಶದ ಜನರು ಆರ್ಥಿಕ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಜೊತೆಗೆ ವಿಪತ್ತು ನಿರ್ವಹಣೆಯಲ್ಲಿಯೂ ಕೈಜೋಡಿಸಬೇಕು ಎಂದರು.

ವಿಪತ್ತು ನಿರ್ವಹಣೆಯಲ್ಲಿ ಸಾಮಾನ್ಯ ಕೋಡ್‍ಗಳ ಬಳಕೆ : ಹೆಚ್ಚಿನ ಎಸ್‍ಡಿಆರಎಫ್ ತಂಡಗಳನ್ನು ರಚಿಸಲು ಸೂಚನೆ ನೀಡಲಾಗಿದೆ. ವಿಪತ್ತು ನಿರ್ವಹಣೆಯಲ್ಲಿ ಸಮುದಾಯಗಳನ್ನು ಬಳಸಿಕೊಳ್ಳುವ ಕರ್ನಾಟಕ ವಿನೂತನ ಕ್ರಮವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದ್ದಾರೆ. ವಿಪತ್ತು ಸಂಭವಿಸಿದ ಎಲ್ಲ ಪ್ರದೇಶಗಳಲ್ಲಿ ಸಾಮಾನ್ಯ ಕೋಡ್‍ಗಳ ಬಳಕೆ ಮಾಡಿಕೊಂಡು ಕ್ಷಿಪ್ರ ಹಾಗೂ ಪರಿಣಾಮಕಾರಿ ಕಾರ್ಯಾಚರಣೆ ಮಾಡಬೇಕಿದೆ. ಜನರು ತೀವ್ರತರವಾದ ಸಮಸ್ಯೆಯಲ್ಲಿದ್ದಾಗ ಕಾರ್ಯನಿರ್ವಹಿಸುವ ಆಪ್ದಾಮಿತ್ರ ಮೊಬೈಲ್ ಆಪ್​ನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತಾಗಬೇಕು.

ವಿಕೋಪಗಳನ್ನು ತಡೆಗಟ್ಟಲು ಸಮುದಾಯಗಳ ಪಾಲ್ಗೊಳ್ಳುವಿಕೆ ಅಗತ್ಯ: ಪ್ರಕೃತಿ ವಿಕೋಪವನ್ನು ಸಮುದಾಯಗಳ ಭಾಗವಹಿಸುವಿಕೆ, ಸಹಾಯದಿಂದ ನಿಯಂತ್ರಿಸಬಹುದು ಎನುವುದನ್ನು ನಾವು ಕಂಡುಕೊಂಡಿದ್ದೇವೆ. ಕಳೆದ 70 ವರ್ಷಗಳಿಂದ ಯೋಚಿಸಿರದಿದ್ದ ಸಮುದಾಯದ ಭಾಗವಹಿಸುವಿಕೆಯನ್ನು ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಮುದಾಯಗಳ ಮೂಲಕ ವಿಕೋಪಗಳನ್ನು ಎದುರಿಸಬಹುದೆಂದು ನಿರೂಪಿಸಿದ್ದು, ಆಪ್ದಾಮಿತ್ರಾ ಆ್ಯಪ್​​​ ಪ್ರತಿಫಲವಾಗಿದೆ.

ಕರ್ನಾಟಕ ಐಟಿಬಿಟಿಯಲ್ಲಿ ಮುಂಚೂಣಿಯಲ್ಲಿದ್ದು, ಆಪ್ದಾಮಿತ್ರಾ ಎಂ.ಐ.ಎಸ್​ನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ಹೊತ್ತಿದೆ. ಕೇಂದ್ರ ಸರ್ಕಾರ ಸೇರಿದಂತೆ ಎಲ್ಲ ರಾಜ್ಯಗಳ ಮಧ್ಯೆ ಮಾಹಿತಿ ವಿನಿಮಯಕ್ಕೆ ಇದರಿಂದ ಅನುಕೂಲವಾಗಲಿದೆ.

ಇದನ್ನೂ ಓದಿ: ನೀವು ಹೇಳಿದಂತೆ ಕೇಳ್ಕೊಂಡು ಇರುತ್ತೇನೆ ಎಂದು ಬ್ರಿಟಿಷರಿಗೆ ಸಾವರ್ಕರ್ ಕ್ಷಮಾಪಣಾ ಬರೆದು‌ಕೊಟ್ಟಿದ್ರು: ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.