ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರು ಗೃಹ ಸಚಿವರನ್ನು ನಿದ್ದೆಯಿಂದ ಎಚ್ಚರಿಸಿ, 'ನಿರ್ಭಯಾ ನಿಧಿ' ಅವ್ಯವಹಾರದ ಬಗ್ಗೆ ಶೀಘ್ರ ತನಿಖೆ ನಡೆಸಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
ನಿರ್ಭಯಾ ಪ್ರಕರಣ ಜರುಗಿ 8 ವರ್ಷ 7 ದಿನಗಳಾಗಿವೆ. ಆದರೆ ಇಂದಿಗೂ ಹೆಣ್ಣು ಮಕ್ಕಳ ರಕ್ಷಣೆಯ ವಿಚಾರದಲ್ಲಿ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯ ಆಘಾತಕಾರಿ ಎಂದು ಆಮ್ ಆದ್ಮಿ ಪಕ್ಷ ಮಹಿಳಾ ಘಟಕದ ಅಧ್ಯಕ್ಷೆ ಕುಶಲ ಸ್ವಾಮಿ ಕಿಡಿಕಾರಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇವಲ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಎರಡು ಬಾರಿ ಟೆಂಡರ್ ಕರೆದು ರದ್ದು ಮಾಡಲಾಗಿದೆ. ಮಹಿಳೆಯರ ಸುರಕ್ಷತೆಯ ವಿಚಾರವಾಗಿ ಕ್ರಮ ತೆಗೆದುಕೊಳ್ಳಲು ಇನ್ನೆಷ್ಟು ವರ್ಷಗಳು, ಯುಗಗಳು ಬೇಕು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿರ್ಭಯಾ ಹೆಸರಿನಲ್ಲಿ ಹೆಣ್ಣುಮಕ್ಕಳ ರಕ್ಷಣೆಗೆ ಎಂದು ಸ್ಥಾಪಿತವಾಗಿರುವ ಮಹಿಳಾ ಸುರಕ್ಷತಾ ಯೋಜನೆಯಲ್ಲೂ ಕೊಳ್ಳೆ ಹೊಡೆಯಲು ಹೊರಟಿರುವ ಭ್ರಷ್ಟ ವ್ಯವಸ್ಥೆಗೆ ನಾಚಿಕೆಯಾಗಬೇಕು ಎಂದರು. ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಎಂದು ಮಂಕುಬೂದಿ ಎರಚುತ್ತಾ ಆ ದೇಶದ, ಈ ದೇಶದ ವಸ್ತುಗಳು ಬೇಡ ಎಂದು ದೇಶದ ಹೆಣ್ಣು ಮಕ್ಕಳ ವಿಚಾರದಲ್ಲಿ ಬಾಲಿಶವಾಗಿ ಬಿಜೆಪಿ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಓದಿ: ಭಾರತದಲ್ಲಿ 6 ಮಂದಿಗೆ ರೂಪಾಂತರಗೊಂಡ ಕೊರೊನಾ ವೈರಸ್: ಕರ್ನಾಟಕದ ಮೂವರಲ್ಲಿ ಸೋಂಕು