ಬೆಂಗಳೂರು: ಕೊರೊನಾ ಸಂಕಷ್ಟ ಹಿನ್ನೆಲೆ ಬಡಬಗ್ಗರಿಗೆ ಸಹಾಯ ಮಾಡಿದ ಆಪ್ ಮುಖಂಡ ಪ್ರಕಾಶ್ ಮತ್ತು ತಂಡ ಜನರಿಗೆ ದಿನಸಿ ಕಿಟ್ ಕೊಡುವ ಮೊದಲು ಪ್ರತಿಜ್ಞಾ ವಿಧಿ ಬೋಧಿಸಿದೆ.
ದಿನಸಿ ಕಿಟ್ ಪಡೆಯಲು ಬಂದವರು ಪ್ರತಿಜ್ಞಾ ವಿಧಿ ಸ್ವೀಕರಿಸಿ ಕಾಯಾ, ವಾಚಾ, ಮನಸಾ ನಾವು ಕೊರೊನಾ ನಿಯಮ ಪಾಲನೆ ಮಾಡುತ್ತೇವೆ ಎಂದು ಹೇಳಿದರು.
ಇಂತಹ ಸಂಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ಸಹಾಯ ಹಸ್ತ ನೀಡೋಣ. ಯಾವುದೇ ಕಾರಣಕ್ಕೂ ನಾನು ಕೊರೊನಾದಿಂದ ಭಯ ಪಡುವುದಿಲ್ಲ. ಎಲ್ಲರೂ ಸೇರಿ ಸೋಂಕಿನ ವಿರುದ್ಧ ಹೋರಾಟ ಮಾಡೋಣ ಎಂದು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ನಗರದ ಬಸವನಗುಡಿಯ ಟಿ.ಡಿ.ನಾಗಣ್ಣ ಮೈದಾನದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ 200ಕ್ಕೂ ಅಧಿಕ ಮಂದಿಗೆ ದಿನಸಿ ಕಿಟ್ಗಳನ್ನು ತಮ್ಮ ವೇತನದ ಹಣದಲ್ಲಿ ವಿತರಣೆ ಮಾಡಿದ ಪ್ರಕಾಶ್, ಕೊರೊನಾ ಮುಗಿಯುವ ತನಕ ತಮ್ಮ ವೇತನದ ಒಂದಿಷ್ಟು ಹಣ ತೆಗೆದಿಟ್ಟು ಜನರ ಸಹಾಯಕ್ಕೆ ಮುಂದಾಗಿದ್ದಾರೆ.