ETV Bharat / state

ಮದುವೆ ಸಂಬಂಧದಿಂದ ಆಧಾರ್ ಖಾಸಗಿತನ ಮೊಟಕು ಸಾಧ್ಯವಿಲ್ಲ: ಹೈಕೋರ್ಟ್

Karnataka High court order on Aadhaar privacy: ಪತಿಯ ಆಧಾರ್ ಕಾರ್ಡ್​ನಲ್ಲಿರುವ ಮಾಹಿತಿ ಕೋರಿದ್ದ ಪತ್ನಿ. ಮದುವೆ ಸಂಬಂಧದಿಂದ ಆಧಾರ್ ಖಾಸಗಿತನ ಮೊಟಕು ಸಾಧ್ಯವಿಲ್ಲ ಎಂದ ಹೈಕೋರ್ಟ್.

Aadhaar act
ಆಧಾರ್ ಖಾಸಗಿತನ
author img

By ETV Bharat Karnataka Team

Published : Nov 28, 2023, 7:19 AM IST

ಬೆಂಗಳೂರು: ಮದುವೆ ಸಂಬಂಧದಿಂದ ಆಧಾರ್ ಕಾರ್ಡ್ ಸಂಖ್ಯೆ ಹೊಂದಿರುವವರ ಖಾಸಗಿ ಹಕ್ಕು, ಆಧಾರ್ (ಹಣಕಾಸು ಮತ್ತು ಇತರೆ ಸಬ್ಸಿಡಿಗಳು, ಸಹಾಯಧನ ಮತ್ತು ಸೇವೆಗಳ ಗುರಿ ಕೇಂದ್ರಿತ ತಲುಪಿಸುವಿಕೆ) ಕಾಯಿದೆ 2016ರ ಅಡಿ ಕಾರ್ಯವಿಧಾನದ ಹಕ್ಕು ಮೊಟಕುಗೊಳಿಸಲಾಗದು ಎಂದು ಹೈಕೋರ್ಟ್ ಆದೇಶಿಸಿದೆ.

ಆಧಾರ್ ಕಾರ್ಡ್‌ನ ಮಾಹಿತಿ ನೀಡುವಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಭಾರತದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ (ಯುಐಡಿಎಐ) ಉಪ ಮಹಾನಿರ್ದೇಶಕರು ಮತ್ತು ಎಫ್‌ಎಎ ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಸ್.ಸುನಿಲ್ ದತ್ ಯಾದವ್ ಮತ್ತು ವಿಜಯಕುಮಾರ್ ಎ.ಪಾಟೀಲ್ ನೇತೃತ್ವದ ವಿಭಾಗೀಯ ಪೀಠ ನಡೆಸಿ ವಿಚಾರಣೆ ನಡೆಸಿ ಅರ್ಜಿ ಇತ್ಯರ್ಥಪಡಿಸಿತು.

ಕೆ.ಎಸ್.ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ವ್ಯಕ್ತಿಯ ಮಾಹಿತಿ ಕೋರಿದರೆ ಅಂಥ ಮಾಹಿತಿ ಬಹಿರಂಗದ ವಿರುದ್ಧ ದಾವೆ ಹೂಡಲು ಆಧಾರ್ ಕಾಯಿದೆ ಸೆಕ್ಷನ್ 33(1)ರ ಅಡಿ ಆ ವ್ಯಕ್ತಿ ಹಕ್ಕು ಹೊಂದಿದ್ದಾರೆ ಎಂದು ಹೇಳಿದೆ. ಆಧಾರ್ ಸಂಖ್ಯೆ ಹೊಂದಿರುವವರ ಗೌಪ್ಯತೆಯ ಹಕ್ಕು ವ್ಯಕ್ತಿಯ ಗೌಪ್ಯತೆಯ ಹಕ್ಕಿನ ಸ್ವಾಯತ್ತತೆಯನ್ನು ಸಂರಕ್ಷಿಸುತ್ತದೆ, ಅದು ಪ್ರಾಮುಖ್ಯತೆಯನ್ನು ನೀಡುತ್ತದೆ ಮತ್ತು ಶಾಸನಬದ್ಧ ಸ್ಕೀಮ್ ಅಡಿಯಲ್ಲಿ ಯಾವುದೇ ವಿನಾಯಿತಿ ಇರುವುದಿಲ್ಲ. ಇಬ್ಬರು ಸಹಭಾಗಿಗಳು ಮದುವೆಯಾಗುವುದರಿಂದ ವ್ಯಕ್ತಿಗತವಾಗಿರುವ ಖಾಸಗಿ ಹಕ್ಕನ್ನು ಮೊಟಕುಗೊಳಿಸುವುದಿಲ್ಲ. ಇದು ಕಾಯಿದೆಯ ಸೆಕ್ಷನ್ 33ರ ಅಡಿ ಅಂಥ ವ್ಯಕ್ತಿಗತ ಹಕ್ಕಿಗೆ ರಕ್ಷಣೆ ಇದೆ. ಮದುವೆಯಾಗುವುದರಿಂದ ಆಧಾರ್ ಕಾಯಿದೆ ಸೆಕ್ಷನ್ 33ರ ಅಡಿ ದೊರೆತಿರುವ ಹಕ್ಕು ರದ್ದಾಗುವುದಿಲ್ಲ ಎಂದು ಪೀಠ ಹೇಳಿತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಹೊಸದಾಗಿ ಪರಿಗಣಿಸುವಂತೆ ಏಕಸದಸ್ಯ ಪೀಠಕ್ಕೆ ವಿಭಾಗೀಯ ಪೀಠ ನಿರ್ದೇಶಿಸಿದೆ. ಅದರಲ್ಲಿ ಪತಿಯನ್ನು ಪ್ರತಿವಾದಿಯನ್ನಾಗಿಸುವಂತೆ ಸೂಚಿಸಲಾಗಿದೆ.

ಪ್ರಕರಣದ ಹಿನ್ನೆಲೆ: ಪತಿಯ ಆಧಾರ್ ಕಾರ್ಡ್​​ನಲ್ಲಿನ ಮಾಹಿತಿಯನ್ನು ಪತ್ನಿ ಕೋರಿದ್ದರು. ಹುಬ್ಬಳ್ಳಿಯ ನಿವಾಸಿಯಾದ ಮಹಿಳೆ 2005ರ ನವೆಂಬರ್​ನಲ್ಲಿ ವಿವಾಹವಾಗಿದ್ದರು. ದಂಪತಿಗೆ ಒಂದು ಹೆಣ್ಣು ಮಗುವಿದೆ. ಪತಿಯ ವಿರುದ್ಧ ದಾವೆ ಹೂಡಿದ್ದ ಮಹಿಳೆಗೆ ಕೌಟುಂಬಿಕ ನ್ಯಾಯಾಲಯವು ₹10,000 ಜೀವನಾಂಶ ಹಾಗೂ ಹೆಣ್ಣು ಮಗುವಿಗೆ ₹5,000 ಜೀವನಾಂಶ ನೀಡಲು ಆದೇಶಿಸಿತ್ತು. ಪತಿ ಎಲ್ಲಿದ್ದಾನೆ ಎಂಬುದನ್ನು ಪತ್ತೆ ಮಾಡಲಾಗದಿರುವುದರಿಂದ ನ್ಯಾಯಾಲಯದ ಆದೇಶ ಜಾರಿಗೊಳಿಸಲಾಗಿರಲಿಲ್ಲ. ಹೀಗಾಗಿ, ಮಹಿಳೆ ಮಾಹಿತಿ ಹಕ್ಕು ಕಾಯಿದೆಯಡಿ ಯುಐಡಿಎಐ ಮೆಟ್ಟಿಲೇರಿದ್ದರು.

ಪತಿಯ ಆಧಾರ್ ಕಾರ್ಡ್​​ನಲ್ಲಿನ ಮಾಹಿತಿಯನ್ನು ಬಹಿರಂಗಪಡಿಸಲಾಗದು. ಇದನ್ನು ಆಧಾರ್ ಕಾಯಿದೆ ಸೆಕ್ಷನ್ 33ರ ಅಡಿ ಹೈಕೋರ್ಟ್ ನಿರ್ಧರಿಸಬೇಕಾಗುತ್ತದೆ ಎಂದು ಯುಐಡಿಎಐ ತಿಳಿಸಿ 2021ರ ಫೆಬ್ರವರಿ 25ರಂದು ಪತ್ನಿಯ ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಪತಿಗೆ ನೊಟೀಸ್ ಜಾರಿ ಮಾಡಿದ್ದ ನ್ಯಾಯಾಲಯವು, ಮಹಿಳೆಯ ಅರ್ಜಿ ಪರಿಗಣಿಸುವಂತೆ ಯುಐಡಿಎಐಗೆ 2023ರ ಫೆಬ್ರವರಿ 8ರಂದು ಆದೇಶಿಸಿತ್ತು.

ಈ ಆದೇಶ ಪ್ರಶ್ನಿಸಿ ಯುಐಡಿಎಐ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಆಧಾರ್ ಕಾಯಿದೆ ಸೆಕ್ಷನ್ 33 (1) ಅನ್ನು ಪಾಲಿಸುವುದು ಕಡ್ಡಾಯ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹೈಕೋರ್ಟ್​​​ ನ್ಯಾಯಮೂರ್ತಿ ಆದೇಶ ಮಾಡಿದ ಬಳಿಕ ಮಾತ್ರ ಮಾಹಿತಿ ಬಹಿರಂಗಪಡಿಸಬಹುದು ಎಂದು ಹೇಳಿದೆ ಎಂದು ವಾದಿಸಿತ್ತು. ಪತ್ನಿಯ ಪರವಾಗಿ ವಾದಿಸಿದ್ದ ವಕೀಲರು, ಮದುವೆಯ ಬಳಿಕ ಪತಿ-ಪತ್ನಿಯ ಗುರುತು ಒಂದಕ್ಕೊಂದು ಸಂಬಂಧವಿರಲಿದೆ. ದಂಪತಿಯಲ್ಲಿ ಒಬ್ಬರು ಮತ್ತೊಬ್ಬರ ಮಾಹಿತಿ ಕೋರುವುದಕ್ಕೆ ಯಾವುದೇ ಆಕ್ಷೇಪ ಇರುವುದಿಲ್ಲ. ಮೂರನೇ ವ್ಯಕ್ತಿ ಮಾಹಿತಿ ಕೋರಿದಾಗ ನಿರ್ಬಂಧ ವಿಧಿಸುವುದನ್ನು ಹಾಲಿ ಪ್ರಕರಣಕ್ಕೆ ಅನ್ವಯಿಸಲಾಗದು ಎಂದು ವಾದಿಸಿದ್ದರು.

ಇದನ್ನೂ ಓದಿ: ಕುಟುಂಬ ಪಿಂಚಣಿ ಪಡೆಯಲು ಎರಡನೇ ಪತ್ನಿ ಅರ್ಹರಲ್ಲ: ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.