ETV Bharat / state

ಪ್ರೀತಿಸಿದವಳು ಸಿಗಲ್ಲ ಅಂದುಕೊಂಡು ಯುವಕ ಆತ್ಮಹತ್ಯೆ.. ಸಾಯುವ ಮುನ್ನ ಆಡಿಯೋ ಮಾಡಿ ಸೂಸೈಡ್

ಪ್ರೀತಿಸಿದ ಹುಡುಗಿ ಸಿಗಲ್ಲ ಎಂದು ಬೇಸರ- ಮನೆಯಲ್ಲಿ ನೇಣಿಗೆ ಶರಣಾದ ಯುವಕ- ಬೆಂಗಳೂರಿನಲ್ಲಿ ಪ್ರಕರಣ

ಮಣಿಕಂಠ
ಮಣಿಕಂಠ
author img

By

Published : Jul 24, 2022, 8:22 PM IST

ಬೆಂಗಳೂರು: ಪ್ರೀತಿಸಿದ ಹುಡುಗಿ ತನಗೆ ಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಮನೆಯಲ್ಲೇ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾಯುವ ಮುನ್ನ ಆಡಿಯೋ ಮಾಡಿ ಬಾರದಲೋಕಕ್ಕೆ ತೆರಳಿದ್ದಾನೆ. ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಮಣಿಕಂಠ ಆತ್ಮಹತ್ಯೆಗೆ ಶರಣಾದ ಯುವಕ. ಶನಿವಾರ (ಜು 23)ರಂದು ಈ ಘಟನೆ ನಡೆದಿದೆ. ಮಡಿವಾಳದ ಮಾರುತಿ ನಗರದಲ್ಲಿ ಮಣಿಕಂಠ ವಾಸವಾಗಿದ್ದ. ಕಳೆದ‌ ಆರು ತಿಂಗಳ ಹಿಂದೆ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ‌. ಈ ಪ್ರೀತಿಗೆ ಯುವತಿಯಿಂದಲೂ‌ ಒಪ್ಪಿಗೆಯಿತ್ತು. ಇತ್ತೀಚೆಗೆ ಇಬ್ಬರ ನಡುವೆ ವೈಮನಸ್ಸು‌ ಮೂಡಿ ದೂರವಾಗಿದ್ದರು ಎನ್ನಲಾಗ್ತಿದೆ.

ಪ್ರೀತಿಯ ಕೊರಗಿನಲ್ಲಿ ಮಣಿಕಂಠ ಕಾಲ‌ ಕಳೆಯುತ್ತಿದ್ದ. ಜುಲೈ 23 ರಂದು ಮನೆಗೆ ಬಂದ ಮಣಿಕಂಠ ಮಲಗುವುದಾಗಿ ರೂಮ್​ಗೆ ಹೋಗಿದ್ದ. ಎಷ್ಟೊತ್ತಾದರೂ ಬಾಗಿಲು ತಟ್ಟಿದರೂ‌ ಕದ ತೆರೆಯದಿರುವುದನ್ನು ಕಂಡ ಮನೆಯವರು ಅನುಮಾನ ವ್ಯಕ್ತಪಡಿಸಿದ್ದರು. ಸ್ಥಳೀಯರ ನೆರವಿನಿಂದ ಬಾಗಿಲು ಮುರಿದು ಒಳಹೋಗಿ ನೋಡಿದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಗೊತ್ತಾಗಿದೆ. ಈ‌ ಸಂಬಂಧ‌ ಮಡಿವಾಳ‌ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ಓದಿ: ಗಂಗಾವತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ 6 ಜನರ ಬಂಧನ.. ವಾಹನ-ಚಿನ್ನಾಭರಣ ವಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.