ETV Bharat / state

ಮಗುವನ್ನೆತ್ತಿಕೊಂಡು ಕೆಳಗೆ ಕುಳಿತು ಮೆಟ್ರೋ ಪ್ರಯಾಣ: ಮಾನವೀಯತೆ ಮರೆತ ಮಂದಿಗೆ ಸುಧಾಮೂರ್ತಿ ಸಂದೇಶ

'ನಾವು ಎಷ್ಟೇ ಮೇಧಾವಿಗಳಾಗಿರಬಹುದು, ಅತಿಯಾದ ವಿದ್ಯಾವಂತರೂ ಆಗಿರಬಹುದು, ಶ್ರೀಮಂತರೂ ಆಗಿರಬಹುದು. ಆದರೆ ಇಷ್ಟೆಲ್ಲ ಇದ್ದೂ ಸಾಮಾನ್ಯಜ್ಞಾನ ಇಲ್ಲವೆಂದಾದರೆ ವಿದ್ಯೆ, ಶ್ರೀಮಂತಿಕೆಗೆ ಯಾವುದೇ ಬೆಲೆ ಇರೋಲ್ಲ. ನಮ್ಮ ಮನೆ ಹಿರಿಯರು ಅಥವಾ ನಮ್ಮ ಮನೆಯಲ್ಲಿ ಚಿಕ್ಕಮಗು ಇರುವಂತವರು ಪ್ರಯಾಣಿಸುವಾಗ ನಮ್ಮೆದುರು ಬಂದರೆ ಅವರಿಗೆ ನಾವು ಕುಳಿತುಕೊಳ್ಳಲು ಆಸನ ಬಿಟ್ಟು ಕೊಡುತ್ತೇವೆ. ಆದರೆ ಬೇರೆ ಯಾರಾದರೂ ಬಂದರೆ ಅವರು ಹಿರಿಯರೇ ಆಗಿರಲಿ ಅಥವಾ ನಿಲ್ಲಲು ಅಶಕ್ತರೇ ಆಗಿರಲಿ ಅವರಿಗೆ ಆಸನ ನೀಡುವುದಿಲ್ಲ. ನಮ್ಮ ಆಲೋಚನೆ ಬದಲಾಗಲೇಬೇಕು'.

Woman sits on floor, Woman sits on floor in Hyderabad metro, Woman sits on floor in Hyderabad metro holding infant, Hyderabad metro, Hyderabad metro news, ಕೆಳಗೆ ಕುಳಿತು ಪ್ರಯಾಣಿಸಿದ ಮಹಿಳೆ, ಹೈದರಾಬಾದ್​ ಮೆಟ್ರೋದಲ್ಲಿ ಕೆಳಗೆ ಕುಳಿತು ಪ್ರಯಾಣಿಸಿದ ಮಹಿಳೆ, ಹೈದರಾಬಾದ್​ ಮೆಟ್ರೋದಲ್ಲಿ ಮಗುವನ್ನ ಮಡಿಲಿನಲ್ಲಿಟ್ಟು ಕೆಳಗೆ ಕುಳಿತು ಪ್ರಯಾಣಿಸಿದ ಮಹಿಳೆ, ಹೈದರಾಬಾದ್​ ಮೆಟ್ರೋ, ಹೈದರಾಬಾದ್​ ಮೆಟ್ರೋ ಸುದ್ದಿ,
ಇತರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸುಧಾಮೂರ್ತಿ
author img

By

Published : Oct 28, 2021, 11:24 AM IST

ಹೈದರಾಬಾದ್​: ಇತ್ತೀಚೆಗೆ ತಾಯಿಯೊಬ್ಬಳು ಪುಟ್ಟ ಕಂದಮ್ಮನನ್ನು ತನ್ನೊಡಲಲ್ಲಿ ಕೂರಿಸಿಕೊಂಡು ಹೈದರಾಬಾದ್‌ ಮೆಟ್ರೋದಲ್ಲಿ ಕೆಳಗೆ ಕುಳಿತು ಪ್ರಯಾಣಿಸಿದ್ದರು.

ವಿಡಿಯೋದಲ್ಲೇನಿದೆ?

ತಾಯಿಯೊಬ್ಬಳು ತನ್ನ ಮಗುವನ್ನು ಮಡಿಲಲ್ಲಿ ಮಲಗಿಸಿ ಮೆಟ್ರೋದಲ್ಲಿ ಕೆಳಗಡೆ ಕುಳಿತು ಪ್ರಯಾಣಿಸಿದ್ದರು. ಮೇಟ್ರೋ ರೈಲಿನ ಆಸನದಲ್ಲಿ ಕುಳಿತುಕೊಂಡಿದ್ದ ಕಾಲೇಜು ವಿದ್ಯಾರ್ಥಿನಿಗಳಾಗಲಿ, ಅಲ್ಲಿದ್ದ ಮಹಿಳೆಯರಾಗಲಿ ಆ ತಾಯಿ-ಮಗುವಿಗೆ ಆಸನ ಬಿಟ್ಟುಕೊಡುವ ಗೋಜಿಗೆ ಹೋಗಲಿಲ್ಲ. ಈ ದೃಶ್ಯವನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು. ವಿಡಿಯೋ ಸಖತ್​ ವೈರಲ್​ ಆಗಿತ್ತು. ಇದನ್ನು ಗಮನಿಸಿದ ಅನೇಕರು ಮಾನವೀಯತೆ ಮರೆತ ಜನರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಸುಧಾಮೂರ್ತಿಯವರು ಕೂಡಾ ಪ್ರತಿಕ್ರಿಯಿಸಿದ್ದಾರೆ.

'ನಾವು ಎಷ್ಟೇ ಮೇಧಾವಿಗಳಾಗಿರಬಹುದು, ಅತಿಯಾದ ವಿದ್ಯಾವಂತರೂ ಆಗಿರಬಹುದು, ಶ್ರೀಮಂತರೂ ಆಗಿರಬಹುದು. ಆದರೆ ಇಷ್ಟೆಲ್ಲ ಇದ್ದೂ ಸಾಮಾನ್ಯಜ್ಞಾನ ಇಲ್ಲವೆಂದಾದರೆ ವಿದ್ಯೆ, ಶ್ರೀಮಂತಿಕೆಗೆ ಯಾವುದೇ ಬೆಲೆ ಇರೋಲ್ಲ. ನಮ್ಮ ಮನೆ ಹಿರಿಯರು ಅಥವಾ ನಮ್ಮ ಮನೆಯಲ್ಲಿ ಚಿಕ್ಕಮಗು ಇರುವಂತವರು ಪ್ರಯಾಣಿಸುವಾಗ ನಮ್ಮೆದುರು ಬಂದರೆ ಅವರಿಗೆ ನಾವು ಕುಳಿತುಕೊಳ್ಳಲು ಆಸನ ಬಿಟ್ಟು ಕೊಡುತ್ತೇವೆ. ಆದರೆ ಬೇರೆ ಯಾರಾದರೂ ಬಂದರೆ ಅವರು ಹಿರಿಯರೇ ಆಗಿರಲಿ ಅಥವಾ ನಿಲ್ಲಲು ಅಶಕ್ತರೇ ಆಗಿರಲಿ ಅವರಿಗೆ ಆಸನ ನೀಡುವುದಿಲ್ಲ. ನಮ್ಮ ಆಲೋಚನೆ ಬದಲಾಗಲೇಬೇಕು. ಎಲ್ಲರೂ ನಮ್ಮವರೇ ಎಂದು ಯೋಚಿಸಬೇಕು. ಇಂತಹ ಚಿಕ್ಕಪುಟ್ಟ ಸಹಾಯವನ್ನು ಮಾಡಲೇಬೇಕು' ಎಂದು ಉತ್ತರಕನ್ನಡದ ಶಿರಸಿ ನಿವಾಸಿ ಪ್ರಜ್ವಲ್ ಆರ್.ನಾಯ್ಕ ಮಾಳಂಜಿ ಬರೆದಿರುವ ಲೇಖನದ ಜೊತೆ ಮಹಿಳೆಯ ವಿಡಿಯೋವನ್ನು ಇನ್ಸ್ಟಾಗ್ರಾಮ್​ನಲ್ಲಿ ಸುಧಾಮೂರ್ತಿ ಹಂಚಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.