ETV Bharat / state

ಗಂಡ, ಮಗುವನ್ನು ಬಿಟ್ಟು ಪ್ರಿಯಕರನಿಗಾಗಿ ಮನೆ ಬಿಟ್ಟು ಹೋಗಿದ್ದ ಮಹಿಳೆ ಬಾವಿಯಲ್ಲಿ ಪತ್ತೆ! - ಮಹಿಳೆ ಪಾಳು ಬಿದ್ದ ಬಾವಿಯಲ್ಲಿ ಪತ್ತೆ ಸುದ್ದಿ

ಗಂಡ ಮತ್ತು ಮಗವನ್ನು ಬಿಟ್ಟು ಪ್ರಿಯಕರನಿಗಾಗಿ ಓಡಿ ಹೋಗಿದ್ದ ಮಹಿಳೆ ನಾಲ್ಕು ದಿನದ ಬಳಿಕ ಪಾಳು ಬಿದ್ದ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಬೆಂಗಳೂರು ಹೊರವಲಯದಲ್ಲಿ ನಡೆದಿದೆ.

woman found in 100 feet depth well, woman found in 100 feet depth well at Bangalore, Love issue, Bangalore crime news, ಮಹಿಳೆ ಪಾಳು ಬಿದ್ದ ಬಾವಿಯಲ್ಲಿ ಪತ್ತೆ, ಬೆಂಗಳೂರಿನಲ್ಲಿ ಮಹಿಳೆ ಪಾಳು ಬಿದ್ದ ಬಾವಿಯಲ್ಲಿ ಪತ್ತೆ, ಪ್ರೀತಿ ವಿವಾದ, ಮಹಿಳೆ ಪಾಳು ಬಿದ್ದ ಬಾವಿಯಲ್ಲಿ ಪತ್ತೆ ಸುದ್ದಿ, ಬೆಂಗಳೂರು ಅಪರಾಧ ಸುದ್ದಿ,
ಗಂಡ, ಮಗುವನ್ನು ಬಿಟ್ಟು ಪ್ರಿಯಕರನಿಗಾಗಿ ಹೋಗಿದ್ದ ಮಹಿಳೆ ಬಾವಿಯಲ್ಲಿ ಪತ್ತೆ
author img

By

Published : Oct 15, 2020, 7:18 AM IST

ದೇವನಹಳ್ಳಿ: ಪ್ರಿಯಕರನ ಮಾತಿಗೆ ಮರುಳಾಗಿ ಗಂಡ ಮತ್ತು ಮಗುವನ್ನು ಬಿಟ್ಟು ಮನೆ ಬಿಟ್ಟು ಪರಾರಿಯಾಗಿದ್ದ ಗೃಹಿಣಿ ನಾಲ್ಕು ದಿನದ ಬಳಿಕ 100 ಅಡಿ ಆಳದ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಎ.ರಂಗನಾಥಪುರ ಗ್ರಾಮದಲ್ಲಿ ನಡೆದಿದೆ.

ಮಾಲೂರು ತಾಲೂಕಿನ ಸೊಣ್ಣಹಳ್ಳಿ ಗ್ರಾಮದ 23 ವರ್ಷದ ಮಹಿಳೆಯನ್ನು ಅದೇ ಗ್ರಾಮದ ಯುವಕನ ಜೊತೆ ಎರಡು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಈ ದಂಪತಿಗೆ ಒಂದು ಗಂಡು ಮಗು ಸಹ ಇದೆ. ಸುಖವಾಗಿ ಸಾಗುತ್ತಿದ್ದ ಇವರ ದಾಂಪತ್ಯ ಜೀವನದ ಮಧ್ಯೆ ಪ್ರಿಯಕರ ಆದರ್ಶ ಬಂದಿದ್ದಾನೆ.

ಕಳೆದ ಶನಿವಾರ ಎಂದಿನಂತೆ ಗಂಡ ಕೆಲಸಕ್ಕೆ ತೆರಳಿದ್ದಾನೆ. ಇತ್ತ ಅತ್ತೆ-ಮಾವ ಹೊಲಕ್ಕೆ ಹೋಗಿದ್ದಾರೆ. ಮಗುವನ್ನು ಪಕ್ಕದ ಮನೆಯವರಿಗೆ ಕೊಟ್ಟು ಮಾಲೂರಿಗೆ ಹೋಗುವುದ್ದಾಗಿ ಹೇಳಿ ಮನೆ ಬಿಟ್ಟು ಪರಾರಿಯಾಗಿದ್ದಳು. ನಾಪತ್ತೆಯಾಗಿದ್ದ ಗೃಹಿಣಿಯನ್ನು ಗಂಡನ ಮನೆಯ ಕಡೆಯವರು ಹುಡುಕಾಟ ನಡೆಸಿದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಇನ್ನು ಗೃಹಿಣಿಯನ್ನು ರಂಗನಾಥಪುರದಲ್ಲಿದ್ದ ಪ್ರಿಯಕರ ಆದರ್ಶ ಎಂಬಾತನು ಕರೆಸಿಕೊಂಡಿದ್ದನಂತೆ. ಶನಿವಾರವೇ ಕರೆಸಿಕೊಂಡಿದ್ದ ಪ್ರಿಯಕರ ಆಕೆಯನ್ನ 100 ಅಡಿ ಆಳದ ಪಾಳು ಬಾವಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿ ಪರಾರಿಯಾಗಿದ್ದಾನೆ. ಆದ್ರೆ ಕಳೆದ ನಾಲ್ಕು ದಿನಗಳಿಂದ ಬಾವಿಯಲ್ಲೇ ಬಿದ್ದಿದ್ದ ಮಹಿಳೆ ಮೇಲೆ ಬರಲಾಗದೆ ಕಾಪಾಡಿ ಅಂತಾ ಕೂಗಿಕೊಂಡಿದ್ದಾಳೆ.

ಬಾವಿಯಿಂದ ನಿರಂತರ ಕೂಗಾಟದ ಶಬ್ದ ಕೇಳಿದ ಅಕ್ಕಪಕ್ಕದ ತೋಟದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ವಿಜಯಪುರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬಾವಿಯಲ್ಲಿ ಬಿದ್ದಿದ್ದ ಗೃಹಿಣಿಯನ್ನು ರಕ್ಷಣೆ ಮಾಡಿದ್ದಾರೆ.

ಅಸ್ವಸ್ಥವಾಗಿರುವ ಮಹಿಳೆಯನ್ನು ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಬಾವಿಗೆ ತಳ್ಳಿದ್ದ ಆದರ್ಶನ ಮಾಹಿತಿಯನ್ನ ಪಡೆದಿರುವ ಪೊಲೀಸರು, ಆತನನ್ನ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವಿಜಯಪುರ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.