ನೆಲಮಂಗಲ: ಅಂಗಡಿಯಲ್ಲಿದ್ದ ಪೆಟ್ಟಿಗೆಯಿಂದ ಹಣ ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನ ಹಿಡಿದ ಜನರು ಕಂಬಕ್ಕೆ ಕಟ್ಟಿ ಗೂಸ ನೀಡಿರುವ ಘಟನೆ ಬೆಂಗಳೂರು ಹೊರವಲಯದ ಹೆಸರಘಟ್ಟ ರಸ್ತೆಯ ಬಾಣವಾರದಲ್ಲಿ ನಡೆದಿದೆ.
ಹೆಸರಘಟ್ಟ ರಸ್ತೆಯ ಬಾಣವಾರದ ಸುರೇಶ ಎಂಬುವರ ಅಂಗಡಿಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿದ ರೇಣುಕೇಶ್ ಎಂಬ ವ್ಯಕ್ತಿ ಗಲ್ಲಪೆಟ್ಟಿಗೆಯಿಂದ ಹಣ ಕದ್ದು ಪರಾರಿಯಾಗುತ್ತಿದ್ದ. ನಂತರ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಹಣ ಕದ್ದಿರೋದು ಖಚಿತವಾಗಿದೆ. ಆರೋಪಿ ಬಾಣವಾರ ಬಳಿಯ ಚಿಕ್ಕಸಂದ್ರದ ನಿವಾಸಿಯಾಗಿದ್ದಾನೆ.
ತಕ್ಷಣವೇ ಕಳ್ಳನನ್ನು ಬೆನ್ನಟ್ಟಿದ್ದ ಸ್ಥಳೀಯರು ಹಾಗೂ ಮಾಲೀಕ ಆತನನ್ನು ಹಿಡಿದು ಕಂಬಕ್ಕೆ ಕಟ್ಟಿ ಗೂಸ ಕೊಟ್ಟಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.