ETV Bharat / state

ಡ್ರಗ್ಸ್ ಪ್ರಕರಣ: ಮೂವರು ಆರೋಪಿಗಳ ಬಂಧನಕ್ಕೆ 12 ಮಂದಿ ಇನ್ಸ್​ಪೆಕ್ಟರ್​ಗಳ ತಂಡ ರಚನೆ - Sandalwood

ಸ್ಯಾಂಡಲ್​ವುಡ್​ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದ ಮೂವರು ಆರೋಪಿಗಳ ಪತ್ತೆಗೆ 12 ಪೊಲೀಸ್ ಇನ್ಸ್​ಪೆಕ್ಟರ್​ಗಳ ತಂಡ ಕೆಲಸ‌ ಮಾಡುತ್ತಿದ್ದು, ‌ನಿರಂತರ ಹುಡುಕಾಟ ನಡೆಸುತ್ತಿದ್ದರೂ ಈವರೆಗೂ ಸಣ್ಣ ಸುಳಿವು ಸಿಗದಿರುವುದು ವಿಪರ್ಯಾಸ.

dsd
12 ಮಂದಿ ಇನ್ಸ್​ಪೆಕ್ಟರ್​ಗಳ ತಂಡ ರಚನೆ
author img

By

Published : Sep 24, 2020, 10:08 AM IST

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ನಂಟು ಆರೋಪ ಸಂಬಂಧ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮೂವರು ಪ್ರಮುಖ ಆರೋಪಿಗಳ ಪತ್ತೆಗಾಗಿ ಇಬ್ಬರು ಎಸಿಪಿಗಳ ನೇತೃತ್ವದಲ್ಲಿ12 ಮಂದಿ ಇನ್ಸ್​ಪೆಕ್ಟರ್​ಗಳ ತಂಡ ರಚಿಸಿ ತನಿಖೆ ನಡೆಸಲಾಗುತ್ತಿದೆ.

ಡ್ರಗ್ಸ್ ಕೇಸ್ ಪ್ರಕರಣದ‌‌ಲ್ಲಿ ಶಿವಪ್ರಕಾಶ್, ಆದಿತ್ಯಾ ಆಳ್ವಾ ಹಾಗೂ ಶೇಖ್ ಪಾಜಿಲ್​ಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಪ್ರಕರಣದ ಮೊದಲ ಆರೋಪಿಯಾಗಿರುವ ಶಿವಪ್ರಕಾಶ್‌ ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾನೆ. ನಟಿ ರಾಗಿಣಿ ಆಪ್ತನಾಗಿಯೂ ಗುರುತಿಸಿಕೊಂಡಿದ್ದಾನೆ ಎನ್ನಲಾಗ್ತಿದೆ.

ಅದೇ ರೀತಿ ಮಾಜಿ ಸಚಿವರ ಪುತ್ರ ಆದಿತ್ಯ ಆಳ್ವಾ‌ ಹೆಸರು ಕೇಳುಬರುತ್ತಿದ್ದಂತೆ ಮೊಬೈಲ್ ಸ್ವಿಚ್​ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ‌. ಇಬ್ಬರು ಆರೋಪಿಗಳು ದೇಶಬಿಟ್ಟು ತೆರಳಿಲ್ಲ ಎಂದು ಕೇಂದ್ರ ತನಿಖಾ ಸಂಸ್ಥೆ ಖಚಿತಪಡಿಸಿದೆ. ಈ‌ ಮಧ್ಯೆ ಈ ಇಬ್ಬರು ಆರೋಪಿಗಳ ಪತ್ತೆಗಾಗಿ ಸಿಸಿಬಿ ಲುಕ್ ಔಟ್ ನೊಟೀಸ್ ಜಾರಿ ಮಾಡಿದೆ. ಅದೇ ರೀತಿ‌‌ ಮೂರನೇ ಆರೋಪಿಯಾದ ಶೇಖ್ ಫಾಜಿಲ್ ಶ್ರೀಲಂಕಾದಲ್ಲಿ‌ ಕ್ಯಾಸಿನೊ ವ್ಯವಹಾರ ನಡೆಸುತ್ತಿದ್ದ.‌ ಸ್ಟಾರ್ ನಟ-ನಟಿರನ್ನು ಪಾರ್ಟಿಗೆ ಆಹ್ವಾನಿಸಿ ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದ. ‌ಡ್ರಗ್ಸ್ ಜಾಲ ಬೆಳಕಿಗೆ ಫಾಜಿಲ್‌ ಸೇರಿದಂತೆ ಮೂವರು ಆರೋಪಿಗಳು ಸುಳಿವು ಸಿಗದಂತೆ‌ ಎಸ್ಕೇಪ್‌ ಆಗಿದ್ದಾರೆ.

ಆರೋಪಿಗಳ‌ ಪತ್ತೆಗಾಗಿ ಕಳೆದ 20 ದಿನಗಳಿಂದಲೂ ಮೊಬೈಲ್ ಟವರ್ ಲೊಕೇಷನ್, ಕಾಲ್ ಡಿಟೈಲ್ಸ್ ಸೇರಿ ಹಲವು ಆಯಾಮಗಳಲ್ಲಿ ಹುಡುಕಾಟ ನಡೆಸಿದರೂ ಏನೂ ಪ್ರಯೋಜನವಾಗಿಲ್ಲ. ಸಿಸಿಬಿ ಟೆಕ್ನಿಕಲ್ ಟೀಂನಿಂದ ಮೂವರ ಮೊಬೈಲ್ ಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಆರೋಪಿಗಳ ಮನೆಯವರ ಫೋನ್​ಗಳ‌ ಮೇಲೆಯೂ ಸಿಸಿಬಿ ಹದ್ದಿನ ಕಣ್ಣಿಟ್ಟಿದೆ. ‌ಆರೋಪಿಗಳ ಮೂರು ತಿಂಗಳ ಕಾಲ್ ಡಿಟೈಲ್ಸ್ ಪರಿಶೀಲಿಸುತ್ತಿದ್ದು ಇನ್ನೊಂದು ವಾರದಲ್ಲಿ ತ್ರಿಮೂರ್ತಿಗಳನ್ನು ಹಿಡಿಯಲೇಬೇಕೆಂದು ಹಿರಿಯ ಅಧಿಕಾರಿಗಳು 12 ಮಂದಿ ಇನ್ಸ್​ಪೆಕ್ಟರ್​ಗಳ ತಂಡಕ್ಕೆ‌ ಟಾಸ್ಕ್ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.