ಬೆಂಗಳೂರು: ವರ್ಷಕ್ಕೆ ಒಂದೆರಡು ಬಾರಿ ಸಂಭವಿಸುವ ಖಗೋಳದ ಕೌತುಕಗಳನ್ನು ನೋಡೋದಂದ್ರೆ ಎಲ್ಲರಿಗೂ ಕುತೂಹಲ. ಇದೇ ರೀತಿಯ ವಿಶೇಷ ದಿನಕ್ಕೆ ಬೆಂಗಳೂರು ಸಾಕ್ಷಿಯಾಯ್ತು. ಇವತ್ತು ಝೀರೋ ಶ್ಯಾಡೋ ಡೇ... ಅಂದ್ರೆ ಶೂನ್ಯ ನೆರಳಿನ ದಿನ.
ಬೆಂಗಳೂರಿನಲ್ಲಿ ಸರಿಯಾಗಿ 12-18 ರ ಸಮಯಕ್ಕೆ ನೆರಳು ಕಾಣದಿರುವ ಕ್ಷಣ ಸಂಭವಿಸಿತು. ಮಂಗಳೂರು ಹಾಗೂ ಚೆನ್ನೈನಲ್ಲೂ ಬೇರೆ ಸಮಯದಲ್ಲಿ ಈ ಕೌತುಕ ಕಂಡುಬಂತು.
ಏನಿದು ಶೂನ್ಯ ನೆರಳು ದಿನ?
ಪ್ರತೀ ವರ್ಷ ಇದು ಎರಡು ಬಾರಿ ಸಂಭವಿಸುತ್ತದೆ. ಏಪ್ರಿಲ್ 24 ಹಾಗೂ ಆಗಸ್ಟ್ 18ಕ್ಕೆ ನಡೆಯುತ್ತದೆ. ಶೂನ್ಯ ನೆರಳು ಸಂಭವಿಸುವಾಗ ಭೂಮಿಯ ವೇಗ ತಿಳಿಯುವ ಪ್ರಯತ್ನ ಮಾಡಲಾಗುತ್ತಿದ್ದು, ಒಂದು ಕ್ಷಣ ಸಂಭವಿಸುತ್ತದೆ. ಭೂಮಿಯ ವಿವಿಧ ಭಾಗ ಸೂರ್ಯನಿಗೆ ಎದುರಾಗುವಾಗ ಶೂನ್ಯ ನೆರಳಾಗುತ್ತದೆ ಎಂದು ಜವಹರಲಾಲ್ ನೆಹರೂ ತಾರಾಲಯದ ನಿರ್ದೇಶಕ ಪ್ರಮೋದ್ ಜಿ.ಗಲಗಲಿ ತಿಳಿಸಿದರು.
ಅಲ್ಲದೆ ಹಿಂದಿನ ಕಾಲದ ವಿಜ್ಞಾನಿಯೊಬ್ಬರು ಭೂಮಿಯ ನಡುವಿನ ಅಂತರವನ್ನು ತಿಳಿಯಲು, ಕಂಬದ ನೆರಳಿನ ಅಂತರ ಲೆಕ್ಕಾಚಾರ ಮಾಡಿ ಭೂಮಿಯ ಸುತ್ತಳತೆ ಕಂಡುಹಿಡಿದಿದ್ದರು. ಇದನ್ನೇ ಈಗ ಭಾರತದ ಹಲವಾರು ತಾರಾಲಯಗಳು ಸೇರಿ ಈ ಪ್ರಯೋಗ ಮಾಡುತ್ತಿದ್ದೇವೆ ಎಂದರು.