ETV Bharat / state

ಹೊಸ ತೆರಿಗೆ ಇಲ್ಲದ ದಾಖಲೆಯ 3 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡನೆ - ತೆರಿಗೆ ಹೆಚ್ಚಳಗಳನ್ನು ಪ್ರಸ್ತಾಪ ಮಾಡದೆ

ಇಂದು ಮಂಡಿಸಲಾದ ಕರ್ನಾಟಕ ಬಜೆಟ್​ನಲ್ಲಿನ ರಾಜಸ್ವ ಹಾಗೂ ತೆರಿಗೆಗೆ ಸಂಬಂಧಿಸಿದ ಪ್ರಮುಖಾಂಶಗಳು ಇಲ್ಲಿವೆ.

A record 3 lakh crore budget presented with no new taxes

author img

By

Published : Feb 17, 2023, 11:42 AM IST

Updated : Feb 17, 2023, 1:27 PM IST

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಂಡಿಸಿರುವ 2023-24ನೇ ಸಾಲಿನ ಆಯವ್ಯಯದಲ್ಲಿ ಯಾವುದೇ ಹೊಸ ತೆರಿಗೆಗಳನ್ನು ವಿಧಿಸಿಲ್ಲ. ಅಲ್ಲದೇ ಯಾವುದೇ ತೆರಿಗೆ ಹೆಚ್ಚಳಗಳನ್ನು ಪ್ರಸ್ತಾಪ ಮಾಡದೇ ಒಟ್ಟು 3 ಲಕ್ಷದ 9 ಸಾವಿರ 182 ಕೋಟಿ ರೂಪಾಯಿ ಗಾತ್ರದ ಬಜೆಟ್​ ಮಂಡಿಸಿದ್ದಾರೆ. ತೆರಿಗೆ ವಲಯ ಹಾಗೂ ರಾಜಸ್ವಕ್ಕೆ ಸಂಬಂಧಿಸಿದಂತೆ ಬಜೆಟ್​ನಲ್ಲಿನ ಪ್ರಮುಖಾಂಶಗಳು ಹೀಗಿವೆ:

  • ವೃತ್ತಿ ತೆರಿಗೆ ವಿನಾಯಿತಿ ಮಿತಿ 15 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಳ
  • ಜಿಎಸ್​ಟಿ ಪೂರ್ವ ತೆರಿಗೆ ವಿವಾದ ಪರಿಹಾರಕ್ಕೆ 2023ರ ಅಕ್ಟೋಬರ್ ಒಳಗೆ ತೆರಿಗೆ ಪಾವತಿಸುವವರಿಗೆ ತೆರಿಗೆ ಮತ್ತು ಬಡ್ಡಿ ಪರಿಹಾರ
  • ರಾಜ್ಯದಲ್ಲಿ 72,010 ಕೋಟಿ ರೂ. ಜಿಎಸ್​ಟಿ ಸಂಗ್ರಹದ ಗುರಿ
  • ರಾಜ್ಯದಲ್ಲಿ 83,010 ಕೋಟಿ ರೂ. ರಾಜಸ್ವ ಸಂಗ್ರಹಣೆ
  • ರಾಜ್ಯದಲ್ಲಿ ವಾಣಿಜ್ಯ ತೆರಿಗೆ ಇಲಾಖೆಗೆ 92,000 ಕೋಟಿ ರೂಪಾಯಿ ತೆರಿಗೆ ಸಂಗ್ರಹಣೆಯ ಗುರಿ ನಿಗದಿ
  • ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 19000 ಕೋಟಿ ರೂಪಾಯಿ ರಾಜಸ್ವ ಸಂಗ್ರಹಣೆ ಗುರಿ ನಿಗದಿ
  • ಸಾರಾಯಿ ಮತ್ತು ಸೇಂದಿ ಅಬಕಾರಿ ಬಾಕಿ ವಸೂಲಾತಿಗೆ ನೂತನ ಕರಸಮಾಧಾನ ಯೋಜನೆ ಪ್ರಕಟ. ಜೂನ್ ಅಂತ್ಯದೊಳಗೆ ತೆರಿಗೆ ಪಾವತಿಸುವವರಿಗೆ ಬಡ್ಡಿ ಮತ್ತು ದಂಡ ಬಡ್ಡಿ ಪಾವತಿಯಲ್ಲಿ ಪರಿಹಾರ
  • ಅಬಕಾರಿ ಇಲಾಖೆಗೆ 35,000 ಕೋಟಿ ರಾಜಸ್ವ ಸಂಗ್ರಹಣೆ ಗುರಿ
  • ಸಾರಿಗೆ ಇಲಾಖೆಗೆ ಈ ಹಣಕಾಸು ವರ್ಷದಲ್ಲಿ 10,500 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ
  • ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ 7500 ಕೋಟಿ ತೆರಿಗೆ ಸಂಗ್ರಹಣೆ ಗುರಿ
  • ಪ್ರಸಕ್ತ ಹಣಕಾಸು ವರ್ಷದಲ್ಲಿ 1,64,653 ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸುವ ಅಂದಾಜು
  • ತೆರಿಗೆಯೇತರ ರಾಜಸ್ವಗಳಿಂದ 11,000 ಕೋಟಿ ರೂಪಾಯಿ ರಾಜಸ್ವ ಸಂಗ್ರಹಣೆ ನಿರೀಕ್ಷೆ
  • ಕೇಂದ್ರ ತೆರಿಗೆಯ ಪಾಲಿನಲ್ಲಿ 37,252 ಕೋಟಿ ರೂಪಾಯಿ ಮತ್ತು 13,000 ಕೋಟಿ ರೂಪಾಯಿ ಕೇಂದ್ರದ ಸಹಾಯ ಧನ ನಿರೀಕ್ಷೆ
  • 77,750 ಕೋಟಿ ರೂಪಾಯಿ ಸಾಲ ಮಾಡುವ ಪ್ರಸ್ತಾಪ
  • ಎಲ್ಲ ಮೂಲಗಳಿಂದ ರಾಜಸ್ವ ಸಂಗ್ರಹಣೆ 3,03,910 ಕೋಟಿ ರೂಪಾಯಿ
  • ಒಟ್ಟು ವೆಚ್ಚ 3,09,182 ಕೋಟಿ ರೂಪಾಯಿ
  • 2023-24ನೇ ಸಾಲಿನಲ್ಲಿ 5,272 ಕೋಟಿ ರೂಪಾಯಿ ಕೊರತೆ ಬಜೆಟ್

ಇದನ್ನು ಓದಿ: ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ: ಗೃಹಿಣಿ ಶಕ್ತಿ ಯೋಜನೆ ಶೀಘ್ರದಲ್ಲೇ ಜಾರಿ

Last Updated : Feb 17, 2023, 1:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.