ಬೆಂಗಳೂರು: ಬಾಂಧವ ಸಂಸ್ಥೆ ವತಿಯಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್‍ನಲ್ಲಿ ತಯಾರಿಸಿದ ಗೌರಿ-ಗಣೇಶ ಮೂರ್ತಿಗಳನ್ನು ಉಪಯೋಗಿಸಬಾರದೆಂದು ಜಯನಗರದಲ್ಲಿ ಜನ ಜಾಗೃತಿ ಮೂಡಿಸಲಾಯಿತು.
ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಪರಿಸರ ಸ್ನೇಹಿ ಹಬ್ಬ ಆಚರಿಸುವಂತೆ ಮನವಿ ಮಾಡಿದ್ರು. ಕಿತ್ತೂರು ರಾಣಿ ಚೆನ್ನಮ್ಮ ಆಟದ ಮೈದಾನದಿಂದ ಹೊರಟು ಜಯನಗರ ಕಾಂಪ್ಲೆಕ್ಸ್ ಹಾಗೂ ಜಯನಗರ ಬಡಾವಣೆಗಳಲ್ಲಿ ಸಂಚರಿಸಿ, ಪಿಓಪಿ ಗಣೇಶ ಬೇಡ, ಮಣ್ಣಿನ ಗಣೇಶ ಬೇಕು, ಪಿಒಪಿ ತ್ಯಜಿಸಿ ಪರಿಸರ ಉಳಿಸಿ ಎಂದು ಘೋಷಣೆಗಳನ್ನು ಕೂಗುತ್ತಾ ಪರಿಸರ ಸ್ನೇಹಿ ಗಣೇಶ ಹಬ್ಬವನ್ನು ಆಚರಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ಶಾಸಕಿ ಸೌಮ್ಯರೆಡ್ಡಿ, ಜಾಗೃತಿ ರ‍್ಯಾಲಿಯಲ್ಲಿ ಹೆಜ್ಜೆ ಹಾಕುವ ಮೂಲಕ ವಿದ್ಯಾರ್ಥಿಗಳಿಗೆ ಸಾಥ್ ನೀಡಿದರು.