ಬೆಂಗಳೂರು: ನಗರದ ಹೃದಯ ಭಾಗ ಮೆಜೆಸ್ಟಿಕ್ನಲ್ಲಿ ಮಧ್ಯರಾತ್ರಿ ಮಾರಕಾಸ್ತ್ರ ಹಿಡಿದು ವ್ಯಕ್ತಿಯೊಬ್ಬ ತಿರುಗಾಡುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೆಜೆಸ್ಟಿಕ್ ರೈಲು ನಿಲ್ದಾಣದ ಬಳಿ ನಡುರಾತ್ರಿಯಲ್ಲಿ ಲಾಂಗ್ ಹಿಡಿದು ಬಂದ ಆಗಂತುಕ, ಇಲ್ಲಿನ ಮಹಿಳೆಯರ ಶೌಚಾಲಯದ ಸುತ್ತ ಸುಮಾರು ಎರಡ್ಮೂರು ಗಂಟೆ ಅಡ್ಡಾಡಿದ್ದಾನೆ. ಬಳಿಕ ಕಾಂಪೌಂಡ್ ಹಾರಿ ಪರಾರಿಯಾಗಿದ್ದಾನೆ. ಈ ದೃಶ್ಯವನ್ನು ನೋಡಿದ ಸಿಸಿಟಿವಿ ಮಾಲೀಕರು ಉಪ್ಪಾರಪೇಟೆ ಮತ್ತು ಕಾಟನ್ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ದೃಶ್ಯಾವಳಿ ಆಧರಿಸಿ ವ್ಯಕ್ತಿಗಾಗಿ ಶೋಧ ಶುರು ಮಾಡಿದ್ದಾರೆ.