ETV Bharat / state

ಮಲತಾಯಿಯನ್ನೇ ಕೊಂದು ಪೊಲೀಸರಿಗೆ ಶರಣಾದ ಪಾಪಿ.. - anekal bangalore latest news

ಆಸ್ತಿಗಾಗಿ ಮಹೇಶ್ ಗೌಡ ಎಂಬಾತ ತನ್ನ ಚಿಕ್ಕಮ್ಮನನ್ನೇ ಕತ್ತು ಕತ್ತರಿಸಿ ಕೊಂದು ಪೊಲೀಸರಿಗೆ ಶರಣಾಗಿರುವ ಘಟನೆ ನಡೆದಿದೆ.

A man murder his aunty for property
ಆಸ್ತಿಗಾಗಿ ತನ್ನ ಚಿಕ್ಕಮ್ಮನನ್ನೇ ಕೊಲೆಗೈದ ಪಾಪಿ
author img

By

Published : Mar 21, 2020, 1:10 PM IST

ಆನೇಕಲ್​ : ಆಸ್ತಿಗಾಗಿ ತನ್ನ ಮಲತಾಯಿಯನ್ನೇ ಕತ್ತು ಕತ್ತರಿಸಿ ಕೊಂದು ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣಾಗಿರುವ ಘಟನೆ ನಡೆದಿದೆ.

ಆಸ್ತಿಗಾಗಿ ತನ್ನ ಮಲತಾಯಿಯನ್ನೇ ಕೊಲೆಗೈದ ಪಾಪಿ

ನಾರಾಯಣಮ್ಮ ಎಂಬುವವರೇ ಮೃತ ಮಹಿಳೆ. ಇವರು ತಾತಪ್ಪ ಎಂಬುವರಿಗೆ 2ನೇ ಹೆಂಡತಿಯಾಗಿ ಬರೋಬ್ಬರಿ ನಲ್ವತ್ತು ವರ್ಷ ಸಂಸಾರ ನಡೆಸಿದ್ದರು. ತನ್ನ ಏಕೈಕ ಪುತ್ರನಿಗಾಗಿ ಕೋರ್ಟಿನಲ್ಲಿ ಧಾವೆ ಹೂಡಿ ನ್ಯಾಯ ಕೂಡಾ ಪಡೆದಿದ್ದರು. ಆದರೆ, ಮೊದಲ ಹೆಂಡತಿಯ ಮಗ ಮಹೇಶ್‌ ಗೌಡ ಎಂಬಾತನ ಜಮೀನಿನ ದಾಹಕ್ಕೀಗ ಬಲಿಯಾಗಿದ್ದಾರೆ.

ಕೋರ್ಟ್​ನಲ್ಲಿ ನಾರಾಯಣಮ್ಮನ ಪರ ಜಮೀನು ಆದೇಶವಾಗಿತ್ತು. ಕೊಲೆ ಆರೋಪಿ ಮಹೇಶ್ ಗೌಡ ತನಗೂ ಒಂದು ಭಾಗವಿದೆ ಎಂದು ಮತ್ತೆ ಕೋರ್ಟ್​ನ ಮೆಟ್ಟಿಲು ಹತ್ತಿದ್ದ. ಮೃತ ಚಿಕ್ಕಮ್ಮ ಕೋರ್ಟ್​ಗೆ ಹಾಜರಾಗಿ ನ್ಯಾಯಕ್ಕಾಗಿ ಬೇಡಿಕೆಯಿಟ್ಟಿದ್ದರು. ಇದರ ಬೆನ್ನಲ್ಲೇ ಛಲ ಬಿಡುವುದಿಲ್ಲವೆಂದು ತಿಳಿದ ಮಹೇಶ್ ಗೌಡ ಚಿಕ್ಕಮ್ಮನ ಮನೆಯಲ್ಲಿ ಆಕೆಯ ಕೈಲಿ ಟೀ ಕುಡಿದು ಬೆಳಗ್ಗೆ ಏಳು ಗಂಟೆಗೆ ದೇವರ ಕೋಣೆ ಮುಂದೆ ಪೂಜೆಗೆ ಕುಳಿತಾಗ ಮಹೇಶ್ ಗೌಡ ತನ್ನ ಚಿಕ್ಕಮ್ಮನ ಕತ್ತು ಕತ್ತರಿಸಿ ಬಾಗಿಲು ಹಾಕಿಕೊಂಡು ಆನೇಕಲ್ ಪೊಲೀಸ್ ಸ್ಟೇಷನ್​ಗೆ ಹೋಗಿ ವಿಷಯ ಮುಟ್ಟಿಸಿ ಶರಣಾಗಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.