ಬೆಂಗಳೂರು: ಪ್ರೇಮಿಗಳಿಬ್ಬರ ನಡುವೆ ನಡೆದ ಗಲಾಟೆ ಪ್ರೇಯಸಿ ಕೊಲೆಯಲ್ಲಿ ಅಂತ್ಯವಾಗಿದೆ.
ಚಿಕ್ಕಮಗಳೂರಿನ ತರಿಕೆರೆ ಮೂಲದ ನಯನಾ (25) ಕೊಲೆಯಾದ ಯುವತಿ. ಬೆಂಗಳೂರಿನ ಮಾರತಹಳ್ಳಿಯಲ್ಲಿ ಈ ಪ್ರೇಮಿಗಳು ಸಹಜೀವನ ನಡೆಸುತ್ತಿದ್ದರು. ಕ್ಯಾಬ್ ಚಾಲಕನಾಗಿ ತಿಪ್ಪೇಸ್ವಾಮಿ ಕೆಲಸಮಾಡುತ್ತಿದ್ದರೆ, ದಿನಸಿ ಸಾಮಗ್ರಿ ಮಾರಾಟ ಮಳಿಗೆಯಲ್ಲಿ ನಯನಾ ಕೆಲಸ ಮಾಡುತ್ತಿದ್ದಳು. 8 ತಿಂಗಳ ಹಿಂದೆ ಪರಿಚಯವಾಗಿ ಕಳೆದ ನಾಲ್ಕು ತಿಂಗಳಿಂದ ಸಹಜೀವನ ನಡೆಸುತ್ತಿದ್ದರು.
ಮೇ 19 ರಾತ್ರಿ ತಿಪ್ಪೇಸ್ವಾಮಿ ಮದುವೆಯಾಗೋಣ ಅಂತ ನಯನಾಗೆ ಕೇಳಿದ್ದ. ಈ ವೇಳೆ ನಯನಾ ತಾನು ಮತ್ತೊಬ್ಬ ಯುವಕನನ್ನು ಪ್ರೀತಿಸುತ್ತಿದ್ದು, ನಿನ್ನನ್ನು ಮದುವೆಯಾಗುವುದಿಲ್ಲ ಅಂದಿದ್ದಾಳಂತೆ. ರೊಚ್ಚಿಗೆದ್ದ ತಿಪ್ಪೆಸ್ವಾಮಿ ನಯನಾಗೆ ಚಾಕುವಿನಿಂದ ಹಲ್ಲೆ ಮಾಡಿ, ನಂತ್ರ ದೋಸೆ ತವಾದಿಂದ ಹೊಡೆದು ಕೊಲೆ ಮಾಡಿದ್ದಾನೆ.
ಘಟನೆ ನಂತರ ತಿಪ್ಪೇಸ್ವಾಮಿ ಮಾರತ್ತಹಳ್ಳಿ ಪೊಲೀಸರಿಗೆ ಶರಣಾಗಿದ್ದಾನೆ.ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.