ETV Bharat / state

ಬನಶಂಕರಿ ದೇವಾಲಯದಲ್ಲಿ ಕಳ್ಳತನ ಮಾಡಿರುವ ಆರೋಪ: ಪ್ರಧಾನ ಅರ್ಚಕರ ಮನೆಗೆ ನುಗ್ಗಿ ದಾಂಧಲೆ

author img

By

Published : Aug 1, 2021, 4:54 PM IST

Updated : Aug 1, 2021, 5:14 PM IST

ಬೆಂಗಳೂರಲ್ಲಿ ಅರ್ಚಕನ ವಿರುದ್ಧವೇ ದೇವಸ್ಥಾನದಲ್ಲಿ ಕಳ್ಳತನ ಮಾಡಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅವರ ಮನೆಗೆ ನುಗ್ಗಿ ವೆಂಕಟೇಶ್ ಮೂರ್ತಿ ಹಾಗೂ ಅವರ ಸ್ನೇಹಿತರು ದಾಂಧಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

A man hassle with priest over theft in temple
ಅರ್ಚಕನ ಮನೆಗೆ ನುಗ್ಗಿ ದಾಂಧಲೆ

ಬೆಂಗಳೂರು: ಪ್ರತಿಷ್ಠಿತ ಬನಶಂಕರಿ ದೇವಾಲಯದ ಪ್ರಧಾನ ಅರ್ಚಕರ ಮನೆಗೆ ನುಗ್ಗಿ ದೇವಸ್ಥಾನದ ವಸ್ತುಗಳನ್ನ ಕದ್ದಿದ್ದಾರೆ ಎಂದು ಆರೋಪಿಸಿ ದಾಂಧಲೆ ನಡೆಸಿರುವ ಪ್ರಕರಣ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪ್ರಧಾನ ಅರ್ಚಕರ ಮನೆಗೆ ಏಕಾಏಕಿ ವಿಚಾರಣೆ ಹೆಸರಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ವೆಂಕಟೇಶ್ ಮೂರ್ತಿ ನುಗ್ಗಿ ದಾಂಧಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಜುಲೈ 29 ರ ರಾತ್ರಿ ಬನಶಂಕರಿ ದೇವಾಲಯದ ಕ್ವಾಟ್ರಸ್‌ನಲ್ಲಿ ಈ ಘಟನೆ ನಡೆದಿದೆ.

ಅರ್ಚಕನ ಮನೆಗೆ ನುಗ್ಗಿ ದಾಂಧಲೆ

ಪ್ರಧಾನ ಅರ್ಚಕ ಸತ್ಯನಾರಾಯಣ ಶಾಸ್ತ್ರಿ ಅವರ ಮನೆಗೆ ವೆಂಕಟೇಶ್ ಮೂರ್ತಿ ಹಾಗೂ ಅವರ ಸ್ನೇಹಿತರು ನುಗ್ಗಿ ದಾಂಧಲೆ ನಡೆಸಿದ್ದಾರಂತೆ. ದೇವರ ತಾಳಿ ಹಾಗೂ ಸೀರೆಗಳನ್ನ ದೇವಸ್ಥಾನದಿಂದ ಕದ್ದಿದ್ದಾರೆ ಎಂದು ಅರ್ಚಕರ ಮೇಲೆ ಆರೋಪ ಮಾಡಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ದೇವಸ್ಥಾನದ ಪ್ರಧಾನ ಅರ್ಚಕ ಕುಮಾರಸ್ವಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ವೆಂಕಟೇಶ್ ಮೂರ್ತಿ ಹಾಗೂ ಅವರ ಸ್ನೇಹಿತರ ವಿರುದ್ಧ ಎಫ್​​ಐಆರ್ ದಾಖಲಿಸಲಾಗಿದೆ.

Last Updated : Aug 1, 2021, 5:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.