ETV Bharat / state

ಆ್ಯಪ್​ ಮೂಲಕ ಮನೆ ಕೆಲಸಕ್ಕೆ ಕರೆಸಿಕೊಂಡು ಯುವತಿ ಮೇಲೆ ಅತ್ಯಾಚಾರ ಆರೋಪ..

author img

By

Published : Dec 20, 2022, 8:24 PM IST

Updated : Dec 20, 2022, 9:11 PM IST

ಮನೆ ಕೆಲಸ ಹಾಗೂ ವಯಸ್ಸಾದ ತಂದೆ, ತಾಯಿಯನ್ನು ನೋಡಿಕೊಳ್ಳಲು ಆ್ಯಪ್ ಮೂಲಕ ಯುವತಿಯನ್ನು ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿರುವ ಆರೋಪ ಪ್ರಕರಣ ಬೆಂಗಳೂರಿನ ಪರಪ್ಪನ ಅಗ್ರಹಾರ ಸಮೀಪದ ಕೂಡ್ಲು ಬಡಾವಣೆಯಲ್ಲಿ ನಡೆದಿದೆ.

young woman was raped by calling her to work

ಆನೇಕಲ್: ಮನೆ ಕೆಲಸ ಹಾಗೂ ವಯಸ್ಸಾದ ತಂದೆ, ತಾಯಿಯನ್ನು ನೋಡಿಕೊಳ್ಳಲು ಆ್ಯಪ್ ಮೂಲಕ 21 ವರ್ಷದ ಯುವತಿಯನ್ನು ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿರುವ ಆರೋಪ ಪ್ರಕರಣ ಬೆಂಗಳೂರಿನ ಪರಪ್ಪನ ಅಗ್ರಹಾರ ಸಮೀಪದ ಕೂಡ್ಲು ಬಡಾವಣೆಯಲ್ಲಿ ಬೆಳಕಿಗೆ ಬಂದಿದೆ.

ಅತ್ಯಾಚಾರ ಆರೋಪ ಸಂಬಂಧ 47 ವರ್ಷದ ಕೇಶವಮೂರ್ತಿ ಎಂಬುವರನ್ನು ಬಂಧಿಸಲಾಗಿದೆ. ಆರೋಪಿ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದು, ವಯಸ್ಸಾದ ತಂದೆ, ತಾಯಿ ನೋಡಿಕೊಳ್ಳಲು ಹಾಗೂ ಮನೆ ಕೆಲಸಕ್ಕೆ ಮಹಿಳಾ ಕೆಲಸದವರು ಬೇಕೆಂದು ವಿಲ್ಸನ್‍ಗಾರ್ಡನ್‍ನಲ್ಲಿರುವ ಆ್ಯಪ್​ನ ಕಚೇರಿಯನ್ನು ಸಂಪರ್ಕಿಸಿದ್ದರಂತೆ.

ತಮ್ಮ ವೃದ್ಧ ತಾಯಿಯನ್ನು ನೋಡಿಕೊಳ್ಳಲು ತಿಂಗಳಿಗೆ 15 ಸಾವಿರ ರೂಪಾಯಿ ಕೊಡುವುದಾಗಿ ಹೇಳಿ, ಒಟ್ಟು 18 ಸಾವಿರ ಕೊಟ್ಟು ರೂಪಾಯಿ ಯುವತಿಯನ್ನು ಮನೆಗೆ ಕರೆದುಕೊಂಡು ಬಂದಿದ್ದರಂತೆ. ಮನೆಗೆ ಬಂದ ಯುವತಿಯ ಮೇಲೆ ಸತತವಾಗಿ ಅತ್ಯಾಚಾರ ಎಸಗಿದ್ದಾರಂತೆ. ಮನೆಯ ಪಾಲನೆಗಾಗಿ ಯುವತಿ ಝಾರ್ಖಂಡ್ ನಿಂದ ಬೆಂಗಳೂರಿಗೆ ಬಂದಿದ್ದಳು ಎಂದು ತಿಳಿದುಬಂದಿದೆ.

ಯುವತಿ ಮೇಲೆ ಅತ್ಯಾಚಾರ ಎಸಗಿದ ಬಳಿಕ ಈ ವಿಷಯ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರಂತೆ. ಈ ಕುರಿತು ಯುವತಿ ತನ್ನ ಕಂಪನಿ ಮ್ಯಾನೆಜರ್​ಗೆ ಕರೆ ಮಾಡಿ ನಡೆದ ಘಟನೆಯನ್ನು ವಿವರಿಸಿದ್ದಾರೆ.

ಕೂಡಲೇ ಆ್ಯಪ್​ನ ಕಂಪನಿಯ ಸಿಬ್ಬಂದಿ ಪೋಲೀಸರಿಗೆ ಮಾಹಿತಿ ನೀಡಿ ಯುವತಿಯನ್ನು ರಕ್ಷಿಸಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಕೇಶವಮೂರ್ತಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:Gang rape in Vijayawada: 3 ದಿನಗಳಿಂದ ಮಹಿಳೆ ಮೇಲೆ ನಿರಂತರ ಅತ್ಯಾಚಾರ, ಕಾಮುಕರ ಬಂಧನಕ್ಕೆ ಪೊಲೀಸ್​ ತಲಾಶ್​

Last Updated : Dec 20, 2022, 9:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.