ETV Bharat / state

ಬೆಂಗಳೂರು: ಮುಸ್ಲಿಂ ಯುವತಿಗೆ ಡ್ರಾಪ್ ನೀಡಿದ ವ್ಯಕ್ತಿಗೆ ಥಳಿಸಿದ ಗುಂಪು.. ಇಬ್ಬರ ಬಂಧನ

ಯುವತಿಯೋರ್ವಳಿಗೆ ಬೈಕ್​ನಲ್ಲಿ ಡ್ರಾಪ್ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಕೆಲ ಯುವಕರು ಹಲ್ಲೆ ನಡೆಸಿದ್ದರು. ಈ ಘಟನೆ ವಿಡಿಯೋ ಸಹ ವೈರಲ್ ಆಗಿತ್ತು. ಇದೀಗ ಘಟನೆ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

a-group-of-people-beats-a-man-who-giving-a-drop-to-muslim-woman-in-bangalore
ಮುಸ್ಲಿಂ ಮಹಿಳೆಗೆ ಡ್ರಾಪ್ ನೀಡುತ್ತಿದ್ದ ವ್ಯಕ್ತಿಗೆ ಥಳಿಸಿದ ಗುಂಪು
author img

By

Published : Sep 19, 2021, 2:29 PM IST

Updated : Sep 20, 2021, 11:34 AM IST

ಬೆಂಗಳೂರು: ಹೊಸೂರು ರಸ್ತೆ ಡೈರಿ ಸರ್ಕಲ್ ಬಳಿ ಅನ್ಯಕೋಮಿನ ಯುವತಿಗೆ ಬೈಕ್​ನಲ್ಲಿ ಡ್ರಾಪ್​ ಕೊಡುವಾಗ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಉಪವಿಭಾಗದ ಉಪ ಪೊಲೀಸ್ ಆಯುಕ್ತ ಶ್ರೀನಾಥ್ ಮಹದೇವ್ ಜೋಶಿ ಹೇಳಿದ್ದಾರೆ.

ಏನಿದು ಘಟನೆ..?

ಮುಸ್ಲಿಂ ಯುವತಿಗೆ ವ್ಯಕ್ತಿಯೋರ್ವ ಬೈಕ್​ನಲ್ಲಿ ಡ್ರಾಪ್ ನೀಡುತ್ತಿದ್ದ. ಈ ವೇಳೆ ಕೆಲ ದುಷ್ಕರ್ಮಿಗಳು ಆತನನ್ನು ಹಿಂಬಾಲಿಸಿಕೊಂಡು ಬಂದು ಬೈಕ್ ನಿಲ್ಲಿಸಿ ಹಲ್ಲೆ ನಡೆಸಿದ್ದರು. ಮುಸ್ಲಿಂ ಯುವತಿಯನ್ನ ಎಲ್ಲಿಗೆ ಕರೆದುಕೊಂಡು ಹೋಗುತ್ತಿರುವೆ..? ಎಂದು ಪ್ರಶ್ನಿಸಿ ಹಲ್ಲೆ ನಡೆಸಿದ್ದಲ್ಲದೆ ವಿಡಿಯೋ ಮಾಡಿದ್ದರು. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿತ್ತು. ಹಿಂದೂ ಪರ ಸಂಘಟನೆಗಳು ಘಟನೆಯನ್ನು ವಿರೋಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದವು.

ಈ ಘಟನೆ ನಡೆದು 12 ಗಂಟೆಯೊಳಗಾಗಿ ಮೈಕೋಲೇಔಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕರಿಬಸವನಗೌಡ ಮಾರ್ಗದರ್ಶನದಲ್ಲಿ ಸುದ್ದಿಗುಂಟೆಪಾಳ್ಯ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್‌ ಡಿ.ಎಸ್ ನಟರಾಜ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಇದೀಗ ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ.

ಇದನ್ನೂ ಓದಿ: ಪೊಲೀಸ್ ಚೆಕ್​​ ಪೋಸ್ಟ್ ಕಟ್ಟಡಕ್ಕೆ ಲಾರಿ ಡಿಕ್ಕಿ.. ಚಾಲಕ ಸ್ಥಳದಲ್ಲೇ ಸಾವು

Last Updated : Sep 20, 2021, 11:34 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.