ಬೆಂಗಳೂರು : ಲಾಕ್ಡೌನ್ ಜಾರಿಯಾಗಿ ಅದೆಷ್ಟೋ ಜನರು ಎರಡು ಹೊತ್ತಿನ ಊಟಕ್ಕಾಗಿ ಪರಿತಪಿಸುತ್ತಿದ್ದಾರೆ. ಕೈಯಲ್ಲಿ ಹಣವಿಲ್ಲದೆ, ಉದೋಗ್ಯವಿಲ್ಲದೆ ಕಂಗಲಾಗಿದ್ದಾರೆ.
ಈ ಮಧ್ಯೆ ನಗರದಲ್ಲಿ ಹಸಿದ ಹೊಟ್ಟೆಗಳಿಗೆ ಅನ್ನ ನೀಡುವ ಮೂಲಕ ಯುವಕರ ತಂಡ ಸದ್ದಿಲ್ಲದೆ ಮಾನವೀಯ ಕೆಲಸ ಮಾಡುತ್ತಿದೆ.
ಮಾರತ್‌ಹಳ್ಳಿ ಪೊಲೀಸರ ಸಹಯೋಗದೊಂದಿಗೆ ಸ್ಪೆಷಲ್ ಬೈಕ್ ರೈಡರ್ಸ್ ತಂಡ ಲಾಕ್ಡೌನ್ ಆರಂಭದಿಂದಲೂ ಗಲ್ಲಿ ಗಲ್ಲಿಗೂ ತೆರಳಿ ಆಹಾರ ಪೊಟ್ಟಣ ನೀಡುವ ನಿರ್ಗತಿಕರ ಪಾಲಿಗೆ ಅನ್ನದಾತರಾಗಿದ್ದಾರೆ. ದಿಲೀಪ್ ಸೇರಿದಂತೆ ನಾಲ್ಕೈದು ಮಂದಿ ಕಳೆದ 10 ದಿನಗಳಿಂದ ಮಧ್ಯಾಹ್ನ ಆಹಾರ ವಿತರಣೆ ಮಾಡುತ್ತಿದ್ದಾರೆ.
ಆ್ಯಂಬುಲೆನ್ಸ್ ಚಾಲಕರು, ಚಿತಾಗಾರ ಸಿಬ್ಬಂದಿ ಹಾಗೂ ನಿರ್ಗತಿಕರು, ಬಡವರು ವಲಸೆ ಕಾರ್ಮಿಕರಿಗೆ ಊಟ ನೀಡುತ್ತಿದ್ದು, ಸ್ವತಃ ಇವರೇ ಕಚೇರಿಯಲ್ಲಿ ಅಡುಗೆ ಮಾಡಿ ಪ್ಯಾಕೆಟ್ ಕಟ್ಟಿ ಪ್ರತಿನಿತ್ಯ 500 ಜನರಿಗೆ ಊಟ ಹಂಚುತ್ತಿದ್ದಾರೆ.
ಇಂದು ಭಾನುವಾರ ಸಹ 500 ಮಂದಿಗೆ ಬಿರಿಯಾನಿ ಊಟ ನೀಡಿರುವ ಇವರು, ಆಹಾರ ಸಿಗದೆ ಪರದಾಡುವ ಮಂದಿಗೆ ಊಟ ಕೊಟ್ಟು ಸಹಕರಿಸಿ ಎಂದು ಮನವಿ ಮಾಡಿದ್ದಾರೆ.
ಓದಿ: ರಾಜ್ಯದಲ್ಲಿ ತೌಕ್ತೆ ಅಬ್ಬರ: ಚಂಡಮಾರುತಕ್ಕೆ ನಾಲ್ವರು ಬಲಿ, 216 ಮನೆಗಳಿಗೆ ಹಾನಿ