ಯಲಹಂಕ : ಮೈಲಪ್ಪನಹಳ್ಳಿಯ ನ್ಯೂ ಏಜ್ ವರ್ಲ್ಡ್ ಸ್ಕೂಲ್ ಆವರಣದಲ್ಲಿ ಬೃಹತ್ ಆಲದ ಮರವೊಂದು ಏಕಾಏಕಿ ನೆಲಕ್ಕುರುಳಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ.
ಮುಂಜಾನೆ ಐದು ಗಂಟೆ ಸುಮಾರಿನಲ್ಲಿ ಏಕಾಏಕಿ ದೊಡ್ಡಮಟ್ಟದ ಶಬ್ಧ ಕೇಳಿ ಬಂದಿದೆ. ವಿದ್ಯುತ್ ಟ್ರಾನ್ಸ್ಫಾರ್ಮರ್ ಬ್ಲಾಸ್ಟ್ ಆಗಿರಬಹುದು ಎಂದುಕೊಂಡ ಸ್ಥಳೀಯರು, ಮನೆಯಿಂದ ಹೊರಬಂದು ನೋಡಿದ್ರೆ ಆಲದ ಮರ ಧರೆಗುರುಳಿತ್ತು.
ಕೊರೊನಾ ಪ್ರೇರಿತ ಲಾಕ್ಡೌನ್ನಿಂದಾಗಿ ಶಾಲೆಗೆ ರಜೆ ನೀಡಲಾಗಿದ್ದರಿಂದ ಬೃಹತ್ ಅನಾಹುತವೇ ತಪ್ಪಿದಂತಾಗಿದೆ. ಘಟನೆಯಲ್ಲಿ ಒಂದು ಆಟೋ, ಎರಡು ದ್ವಿಚಕ್ರ ವಾಹನ ಹಾಗೂ ವಿದ್ಯುತ್ ಕಂಬಗಳು ಜಖಂಗೊಂಡಿವೆ.