ಬೆಂಗಳೂರು: ಯಾರದ್ದೋ ಲವ್ ಸ್ಟೋರಿ, ಇನ್ಯಾರದೋ ಮೇಲಿನ ದ್ವೇಷಕ್ಕೆ ರಸ್ತೆಯಲ್ಲಿ ನಿಂತಿದ್ದ ಅಪರಿಚಿತನಿಗೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ.
ಮಂಜೇಶ್ ಆ್ಯಂಡ್ ಗ್ಯಾಂಗ್ ಹುಚ್ಚಾಟಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿ ಆಸ್ಪತ್ರೆ ಪಾಲಾಗಿದ್ದಾನೆ. ದಸರಾ ಮೆರವಣಿಗೆಗೆ ವೇಳೆ ನಡೆದಿದ್ದ ಘಟನೆಯ ಅಸಲಿ ಸತ್ಯವನ್ನು ಮಾಗಡಿ ರಸ್ತೆಯ ಪೊಲೀಸರು ಬಯಲಿಗೆಳೆದಿದ್ದಾರೆ.
ಹಲ್ಲೆ ಮಾಡಿದ ಮಂಜೇಶ್ಗೆ ಯುವತಿಯೋರ್ವಳ ಮೇಲೆ ಪ್ರೀತಿ ಇತ್ತು. ಆದರೆ ಆ ಯುವತಿ ನಿತಿನ್ ಎಂಬಾತನನ್ನು ಪ್ರೀತಿ ಮಾಡುತ್ತಿದ್ದಳು. ತಾನು ಇಷ್ಟಪಟ್ಟ ಯುವತಿಯ ಪ್ರಿಯಕರನ ಮೇಲೆ ಕೋಪಗೊಂಡಿದ್ದ ಮಂಜೇಶ್ ಮಾತುಕತೆಯ ನೆಪದಲ್ಲಿ ಕರೆದು ಹಲ್ಲೆ ಮಾಡಲು ತಂತ್ರ ನಡೆಸಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟೂಲ್ಸ್ ಸಮೇತ ಎಂಟ್ರಿ ಕೊಟ್ಟಿದ್ದ ಮಂಜೇಶ್ ಆ್ಯಂಡ್ ಗ್ಯಾಂಗ್: ಈ ವೇಳೆ ನಿತಿನ್ ತನ್ನ ಸಹೋದರನ ಜೊತೆ ಬರುವುದಾಗಿ ಹೇಳಿದ್ದ. ನಿತಿನ್ ಸಿಗುವುದಾಗಿ ಹೇಳಿದಾಗ ಟೂಲ್ಸ್ ಸಮೇತ ಎಂಟ್ರಿ ಕೊಟ್ಟ ಮಂಜೇಶ್ ಆ್ಯಂಡ್ ಗ್ಯಾಂಗ್ ತನ್ನ ಗೆಳೆಯನ ಜೊತೆ ನಿಂತಿದ್ದ ದೀಪು ಎಂಬಾತನನ್ನು ನೋಡಿ ನಿತಿನ್ ಎಂದು ತಿಳಿದು ಅಟ್ಯಾಕ್ ಮಾಡಿ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.
ನಾನವನಲ್ಲ ಎಂದು ಹೇಳಲು ಹೋದರು ಹಲ್ಲೆ: ದೀಪು ನಾನು ಅವನಲ್ಲ ಎಂದು ಹೇಳಲು ಹೊರಟರೂ ಆತನ ಮಾತು ಕೇಳದೇ ಮನಬಂದಂತೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಮಾಗಡಿ ರಸ್ತೆ ಪೊಲೀಸ್ ಸಿಬ್ಬಂದಿ ಮಂಜೇಶ್ನನ್ನು ಬಂಧಿಸಿದ್ದು, ಉಳಿದವರಿಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಮಾಹಿತಿ ಕೇಳಿದ ವಿಶೇಷಚೇತನನಿಗೆ ಒದ್ದ ಸರಪಂಚ್.. ದರ್ಪ ತೋರಿ ಸ್ಥಾನ ಕಳೆದುಕೊಂಡ ದುರಹಂಕಾರಿ