ಬೆಂಗಳೂರು: ಚಂದನವನದಲ್ಲಿ ನಿರ್ದೇಶಕನಾಗಿ ಮಿಂಚಬೇಕು ಎಂದು ಕನಸಿನ ಮೂಟೆ ಬಂದಿರುವ ಆಟೋರಾಜ ಶಂಕರ್ ನಾಗ್ ಅವರ ಅಭಿಮಾನಿಯೊಬ್ಬರು, ಗಾಂಧಿನಗರದಲ್ಲಿ ಸರ್ಕಸ್ ಮಾಡಿ ಕೊನೆಗೂ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದು, "ಕಿರಿಕ್ ಲೈಫ್" ಎಂಬ ಚಿತ್ರವನ್ನು ನಿರ್ದೇಶನ ಮಾಡ್ತಿದ್ದಾರೆ. ಈಗಾಗಲೇ ಕೆಲ ಚಿತ್ರಗಳಿಗೆ ಸಹ ನಿರ್ದೇಶನ ಮಾಡಿದ ಅನುಭವವಿದ್ದ ಗುರುರಾಜ್ ಕುಲಕರ್ಣಿ " ಕಿರಿಕ್ ಲೈಫ್" ಎಂಬ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನಾಗಿದ್ದು. ಶಂಕರ್ ನಾಗ್ ಹಾಗೂ ಉಪ್ಪಿಯ ಹಾದಿಯಲ್ಲಿ ಸಾಗುವ ಇರಾದೆ ಹೊಂದಿದ್ದಾರೆ.
ಇನ್ನು ಕಿರಿಕ್ ಲೈಫ್ ಚಿತ್ರದ ಕಥೆಯ ವಿಚಾರಕ್ಕೆ ಬಂದರೆ ಪ್ರತಿಯೊಬ್ಬರ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಕಿರಿಕ್ ಅನ್ನೋದು ಇದ್ದೇ ಇರುತ್ತೆ ಅದರಲ್ಲೂ ಸ್ಲಂ ನಲ್ಲಿ ವಾಸ ಮಾಡುವವರ ಲೈಫ್ ನಲ್ಲಿ ಕಿರಿಕ್ ಗಳ ಸರಮಾಲೆಯೇ ಇರುತ್ತೆ. ಇನ್ನೂ ಈ ಕಿರಿಕ್ ಏತಕೆ ಎಂಬ ಒಂದು ಸಣ್ಣ ಎಳೆಯನ್ನು ಇಟ್ಟು ಕೊಂಡು. ನಿರ್ದೇಶಕ ಗುರುರಾಜ್ ಕುಲಕರ್ಣಿ ಸ್ಲಂ ನಲ್ಲಿ ವಾಸ ಮಾಡುವ ಹುಡುಗರ ಲೈಫ್ನಲ್ಲಿ ಎನೆಲ್ಲಾ ಸವಾಲುಗಳನ್ನು ಎದುರಿಸುತ್ತಾರೆ ಎಂಬುದನ್ನು ನಿರ್ದೇಶಕರು ಹೊರಟಿದ್ದಾರೆ. ಇನ್ನೂ ಚಿತ್ರದಲ್ಲಿ ನಾಯಕನಾಗಿ ಹೊಸ ನಟ ಶರತ್ ಬಾಬು ಇಂಜಿನಿಯರಿಂಗ್ ಪದವಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಚಿತ್ರರಂಗದಲ್ಲಿ ಮಿಂಚಬೇಕು ಎಂಬ ಕನಸು ಹೊತ್ತು ಈ ಚಿತ್ರದ ಮುಖಾಂತರ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಅಲ್ಲದೆ ನಾಯಕಿಯಾಗಿ ಬೆಳಗಾವಿಯ ಸುವಾರ್ಥ ಅಭಿನಯಿಸಿದ್ದು, ಸಂದೇಶ್ ಹಾಸನ್ ಎಂಬುವರು ಚಿತ್ರ ನಿರ್ಮಾಣ ಮಾಡ್ತಿದ್ದಾರೆ. ಅಲ್ಲದೆ ಕಿರಿಕ್ ಲೈಫ್ ಚಿತ್ರ ಇತ್ತೀಚೆಗಷ್ಟೆ ಸೆಟ್ಟೇರಿದ್ದು ಜುಲೈನಲ್ಲಿ ಚಿತ್ರದ ಶೂಟಿಂಗ್ ಶುರುಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಶಿವು ಜಮಖಂಡಿಯವರು ಸಂಗೀತ ಮತ್ತು ಮುಂಜಾನೆ ಮಂಜು ಛಾಯಾಗ್ರಾಹಣದ ಜವಬ್ದಾರಿ ಹೊತ್ತಿದ್ದಾರೆ. ಸಕಲೇಶಪುರ ಹಾಸನ ಹಾಗೂ ಮೈಸೂರು ಸುತ್ತ ಮುತ್ತ ಚಿತ್ರದ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿದ್ದಾರೆ.