ETV Bharat / state

3 ಎಕರೆ ಜಮೀನಲ್ಲೇ ಅಧಿಕ ಲಾಭ... ಕೃಷಿಯಲ್ಲೇ ಬದುಕು ಕಟ್ಟಿಕೊಂಡ ರೈತ ಕುಟುಂಬ! - undefined

ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಜ್ಯೋತಿಪುರ ಗ್ರಾಮದ ಮುನಿರಾಜು ಅವರ ಕುಟುಂಬ ತಮ್ಮ ಬಳಿ ಇರುವ ಮೂರು ಎಕರೆ ಜಮೀನಿನಲ್ಲಿ ವಿವಿಧ ಕೃಷಿ ಬೆಳೆಗಳನ್ನು ಬೆಳೆಯುವ ಮೂಲಕ ಅದರಲ್ಲೇ ಹೆಚ್ಚಿನ ಲಾಭವನ್ನು ಪಡೆಯುತ್ತಿದ್ದು, ಇತರ ರೈತರಿಗೆ ಈ ಕುಟುಂಬ ಮಾದರಿಯಾಗಿದೆ.

ಇತರರಿಗೆ ಮಾದರಿ ಈ ರೈತ ಕುಟುಂಬ
author img

By

Published : May 20, 2019, 10:37 AM IST

ಬೆಂಗಳೂರು: ತಮಗಿರುವ ಅಲ್ಪ ಭೂಮಿಯಲ್ಲಿ ಮಿಶ್ರ ಬೆಳೆಯನ್ನು ಬೆಳಯುವ ಮೂಲಕ ಅಧಿಕ ಲಾಭವನ್ನು ಪಡೆಯುತ್ತಿದ್ದು, ವ್ಯವಸಾಯ ಎಂದರೆ ಮೂಗು ಮುರಿಯುವವರಿಗೆ ಕೃಷಿಯಲ್ಲೇ ಬದುಕು ಕಟ್ಟಿಕೊಂಡಿರುವ ಮಹಾದೇವಪುರದ ಈ ರೈತ ಕುಟುಂಬ ಮಾದರಿಯಾಗಿ ನಿಲ್ಲುತ್ತದೆ.

ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಜ್ಯೋತಿಪುರ ಗ್ರಾಮದ ಮುನಿರಾಜು ಅವರ ಕುಟುಂಬ ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ತಮಗಿರುವ ಮೂರು ಎಕರೆ ಜಮೀನಿನಲ್ಲಿ ಇತರೆ ಬೆಳೆಗಳೊಂದಿಗೆ ರೇಷ್ಮೆ, ಸೊಪ್ಪು ಬೆಳೆಯುವ ಮೂಲಕ ಜೀವನ ನಡೆಸುತ್ತಿದ್ದಾರೆ.

ಇತರರಿಗೆ ಮಾದರಿ ಈ ರೈತ ಕುಟುಂಬ

ಒಬ್ಬ ಬೆಳೆದ ಬೆಳೆಯನ್ನೇ ಮತ್ತೊಬ್ಬ ಬೆಳೆದು ಆರ್ಥಿಕ ನಷ್ಟ ಹೊಂದುವ ರೈತರಿಗೆ ಇವರ ಮಿಶ್ರ ಕೃಷಿ ಪಾಠವಾಗಿ ಪ್ರೇರಕ ಶಕ್ತಿಯಾಗಿದೆ. ಮಿಶ್ರ ಬೆಳೆ ಬೆಳೆದು ಪ್ರಗತಿಪರ ಹಾಗೂ ಮಾದರಿ ರೈತರಾಗಿದ್ದಾರೆ.

ತಮ್ಮ ಜಮೀನಿನಲ್ಲಿ ಹಿಪ್ಪುನೇರಳೆ ಸೊಪ್ಪು, ಟೋಮ್ಯಾಟೋ, ಮೆಣಸಿನಕಾಯಿ, ಬೀನ್ಸ್, ತೊಗರಿ ಇತರೆ ಮಿಶ್ರ ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಇದರಿಂದ ನಮ್ಮ ಜೀವನ ಸಾಗಿಸಲು ಅನುಕೂಲವಾಗಿದೆ. ಕೃಷಿ ಇಲಾಖೆ ಆಗಾಗ ಬಂದು ಮಾಹಿತಿಯನ್ನು ನೀಡುತ್ತಿರುತ್ತಾರೆ. ನಾವು ಒಂದೇ ರೀತಿಯ ಬೆಳೆಯನ್ನು ಬೆಳೆಯದೆ ಮಿಶ್ರ ಬೆಳೆಯನ್ನು ಬೆಳೆಯುತ್ತಿದ್ದೇವೆ. ಕೃಷಿಯನ್ನು ನಂಬಿದವರಿಗೆ ಎಂದಿಗೂ ಮೋಸ ಆಗಿಲ್ಲ. ಆಗೋದು ಇಲ್ಲ. ಕೃಷಿಯಲ್ಲಿ ನೆಮ್ಮದಿಯ ಬದುಕು ಸಾಗಿಸುತ್ತಿದ್ದೇವೆ ಎಂದು ಮುನಿರಾಜು ಹೇಳುತ್ತಾರೆ.

ನಾವು ಸುಮಾರು 14 ವರ್ಷದಿಂದ ಈ ರೇಷ್ಮೆ ಬೆಳೆಯನ್ನು ಬೆಳೆಯುತ್ತಿದ್ದೇವೆ. ತಿಂಗಳಿಗೆ ರೇಷ್ಮೆ ಬೆಳೆಯೊಂದಿಗೆ ಇತರೆ ಬೆಳೆಗೆ ಒಂದು ಲಕ್ಷಕ್ಕೂ ಅಧಿಕ ಲಾಭ ಬರುತ್ತಿದ್ದು, ಮಕ್ಕಳ ಶಿಕ್ಷಣಕ್ಕೆ ಹಾಗೂ ಕುಟುಂಬ ನಿರ್ವಹಣೆಗೆ ಅನುಕೂಲವಾಗಿದೆ. ಇವರು ರೇಷ್ಮೆ ಬೆಳೆಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಉತ್ತಮ ತಳಿ ಬೆಳೆದಿದ್ದರಿಂದ ಸರ್ಕಾರ 2015ರಲ್ಲಿ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಿದೆ. ಕೃಷಿಯನ್ನೇ ಮುಂದುವರೆಸಿಕೊಂಡು ಕುಟುಂಬ ನಿರ್ವಹಣೆ ನಡೆಸುತ್ತಿದ್ದೇವೆ ಎಂದು ಮನಿರಾಜು ಅವರ ಪತ್ನಿ ಕವಿತಾ ಅಭಿಪ್ರಾಯ ವ್ಯಕ್ತಪಡಿಸಿದರು.

ಕೃಷಿಯನ್ನು ನಂಬಿ ಬದುಕು ನಡೆಸುವವರಿಗೆ ಭೂಮಿ ತಾಯಿ ಎಂದಿಗೂ ಕೈ ಬಿಡುವುದಿಲ್ಲ ಎಂಬುದನ್ನು ಮುನಿರಾಜು ಕುಟುಂಬ ತೋರಿಸಿ ಕೊಟ್ಟಿದ್ದು, ಇವರ ಈ ಕಾರ್ಯ ಇತರರಿಗೆ ಮಾದರಿಯಾಗಿದೆ.

Intro:ಮಿಶ್ರ ಬೆಳೆ ಬೆಳೆದು,ಇತರ ರೈತರರಿಗೆ ಮಾದರಿಯಾಗಿ ಕೃಷಿಯಿಂದ ಖುಷಿ ಜೀವನ ನಡೆಸುತ್ತಿರುವ ರೈತ.

ವ್ಯವಸಾಯ ಎಂದರೆ ಮೂಗು ತಿರುಗಿಸಿಕೊಂಡು ಹೋಗುವ ಅನೇಕರಿಗೆ ಹಾಗೂ ಕೃಷಿಯಲ್ಲಿಯೇ ಬದುಕು ಕಟ್ಟಿಕೊಳ್ಳುತ್ತಿರುವ ರೈತರಿಗೆ
ಮಹದೇವ ಪುರ ಕ್ಷೇತ್ರದ ಜೋತಿಪುರ ನಿವಾಸಿ ಮುನಿರಾಜ್ ಅವರು ಮಾದರಿಯಾಗಿ ನಿಲ್ಲುತ್ತಾರೆ. ತಮ್ಮ ಮಿಶ್ರ ಬೆಳೆಯ ಕೃಷಿಯಿಂದಲೇ ಸ್ವಾವಲಂಬನೆಯ ಬದುಕು ಕಟ್ಟಿಕೊಂಡಿದ್ದಾರೆ.

ಒಬ್ಬ ಬೆಳೆದ ಬೆಳೆಯನ್ನೇ ಮತ್ತೊಬ್ಬ ಬೆಳೆದು ಆರ್ಥಿಕ ನಷ್ಟ ಹೊಂದುವ ರೈತರಿಗೆ ಇವರ ಮಿಶ್ರ ಕೃಷಿ ಪಾಠವಾಗಿ ಪ್ರೇರಕ ಶಕ್ತಿಯಾಗಿದೆ. ಮಿಶ್ರ ಬೆಳೆ ಬೆಳೆದು ಪ್ರಗತಿ ಪರ ಹಾಗೂ ಮಾದರಿ ರೈತರಾಗಿದ್ದಾರೆ. ಇತರರಿಗೆ ಮಾರ್ಗದರ್ಶಕರೂ ಆಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೃಷಿ ಬೆಳೆಗಳು ರೈತನಿಗೆ ಲಾಭದಾಯಕವಾಗಿಲ್ಲ ಎಂದು ರೈತರು ಕಂಗೆಟ್ಟು ಆತ್ಮಹತ್ಯ ಮಾಡಿಕೊಳ್ಳುವಂತಹ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೆ ಇಲ್ಲೊಂದು ರೈತ ಕುಟುಂಬ ತಮಗಿರುವ ಅಲ್ಪ ಭೂಮಿಯಲ್ಲಿ ರೆಷ್ಮೆ ಹಾಗೂ ಮಿಶ್ರ ಬೆಳೆಗಳನ್ನು ಬೆಳೆಯುವ ಮೂಲಕ ಲಾಭದಾಕ ಬೆಳೆಗಳನ್ನು ಬೆಳೆದು ಶ್ರದ್ಧೆಯಿಂದ ಭೂಮಿ ತಾಯಿಯನ್ನು ನಂಬಿ ಕೃಷಿ ಮಾಡಿದರೆ ನಮ್ಮ ಕೈ ಬಿಡುವುದಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಹೀಗೆ ಒಂದೆಡೆ ಸಂಪಾಗಿ ಬೆಳೆದಿರುವ ಹಿಪ್ಪನೇರಳೆ ಸೊಪ್ಪು, ಟಮೋಟ, ಮೆಣಸಿನಕಾಯಿ, ಬೀನ್ಸ್, ತೊಗರಿ ಇತರೆ ಮಿಶ್ರ ಬೆಳೆಗಳು ಕಂಡು ಬಂದಿದ್ದು ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ಜ್ಯೋತಿಪುರ ಗ್ರಾಮದ ಮುನಿರಾಜು ರವರ ತೋಟದಲ್ಲಿ. ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ತಮಗಿರುವ ಮೂರು ಎಕರೆ ಜಮೀನಿನಲ್ಲಿ ಇತರೆ ಬೆಳೆಗಳೊಂದಿಗೆ ರೇಷ್ಮೆ ಸೊಪ್ಪು ಬೆಳೆದು ಇದರಿಂದ ಜೀವನ ನಡೆಸುತ್ತಿದ್ದಾರೆ. ಜೊತೆಗೆ ಇಲ್ಲಿನ ಕೃಷಿ ಅಧಿಕಾರಿಗಳು ರೈತರಿಗೆ ಕೃಷಿ ಇಲಾಖೆಯಿಂದ ದೊರೆಯುವ ಸವಲತ್ತುಗಳನ್ನು ನೀಡುವುದರಿಂದ ಇಂತಹ ಕೃಷಿ ಬೆಳೆಗಳನ್ನು ಬೆಳೆಯಲು ಹರ್ಷ ವ್ಯಕ್ತಪಡಿಸಿದ್ದಾರೆ.

ಬೈಟ್: ಮುನಿರಾಜು, ರೈತ

Body:ಇನ್ನು ಕೃಷಿ ಚಟುವಟಿಕೆ ಹಾಗೂ ರೇಷ್ಮೆ ಬೆಳೆ ಬೆಳೆಯಲು ಪತ್ನಿ, ಪೋಷಕರು ಹಾಗೂ ಸಹೋದರ, ಕೈ ಜೋಡಿಸಿದ್ದು, ತಿಂಗಳಿಗೆ ರೇಷ್ಮೆ ಬೆಳೆಯೊಂದಿಗೆ ಇತರೆ ಬೆಳೆಗೆ ಒಂದು ಲಕ್ಷಕ್ಕೂ ಅಧಿಕ ಲಾಭ ಪಡೆದು ಮಕ್ಕಳ ಶಿಕ್ಷಣಕ್ಕೆ ಹಾಗೂ ಕುಟುಂಬ ನಿರ್ವಹಣೆಗೆ ಅನುಕೂಲವಾಗಿದೆ. ಇವರು ರೇಷ್ಮೆ ಬೆಳೆಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಉತ್ತಮ ತಳಿ ಬೆಳೆದಿದ್ದರಿಂದ 2015 ರಲ್ಲಿ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿರುವುದರಿಂದ ಕೃಷಿಯನ್ನೇ ಮುಂದುವರೆಸಿಕೊಂಡು ಕುಟುಂಬ ನಿರ್ವಹಣೆ ನಡೆಸಲಾಗುತ್ತಿದೆ ಎಂದು ಬಿ.ಎ.ಪದವಿದರೆ ಕವಿತ ತಿಳಿಸಿದ್ದಾರೆ.

ಬೈಟ್: ಕವಿತ
ಮುನಿರಾಜು ಪತ್ನಿ

Conclusion:ಕೃಷಿಯನ್ನು ನಂಬಿ ಸಾಲಸೋಲ ಮಾಡಿಕೊಂಡು ಬೆಳೆಗಳು ಕೈಗೆಟಕದೆ ಆತ್ಮಹತ್ಯೆ ಮಾಡಿಕೊಳ್ಳುವಂತವರನ್ನು ಹೆಚ್ಚಾಗಿ ನೋಡಿದ್ದೇವೆ. ಆದರೆ, ಇಂತವರ ಮಧ್ಯೆ ಕೃಷಿಯನ್ನು ನಂಬಿ ಭೂಮಿ ತಾಯಿ ಎಂದಿಗೂ ಕೈ ಬಿಡುವುದಿಲ್ಲ ಎಂಬುದನ್ನು ಮುನಿರಾಜು ರೈತ ಕುಟುಂಬ ತೋರಿಸಿಕೊಟ್ಟಿದ್ದು, ಇವರ ಈ ಕಾರ್ಯ ಇತರರಿಗೆ ಮಾದರಿಯಾಗಲಿ.

ಧರ್ಮರಾಜು ಎಂ ಕೆಆರ್ ಪುರ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.