ಬೆಂಗಳೂರು: ಲಗೇಜ್ ತುಂಬಿದ್ದ ಆ್ಯಂಬುಲೆನ್ಸ್ನಲ್ಲಿ ಸೈರನ್ ಹಾಕುವ ಮೂಲಕ ಚಾಲಕ ಕಾನೂನು ಉಲ್ಲಂಘನೆ ಮಾಡಿದ್ದು, ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆ್ಯಂಬುಲೆನ್ಸ್ನಲ್ಲಿ ಹಾಸಿಗೆ ಹಾಗೂ ಲಗೇಜ್ ತುಂಬಿಕೊಂಡು ಚಾಲಕ, ಸಿಗ್ನಲ್ನಲ್ಲಿ ದಾರಿ ಮಾಡಿಕೊಡುವಂತೆ ಸೈರನ್ ಹಾಕಿ ಕಾನೂನು ಉಲ್ಲಂಘನೆ ಮಾಡಿದ್ದಾನೆ. ಶಿವಾಜಿನಗರದಿಂದ ಫ್ರೇಜರ್ ಟೌನ್ ಮಾರ್ಗದಲ್ಲಿ ಸೈರನ್ ಹಾಕಿಕೊಂಡು ಹೋಗುತ್ತಿದ್ದಾಗ ಸಾರ್ವಜನಿಕರು ದೃಶ್ಯ ಸೆರೆ ಹಿಡಿದಿದ್ದಾರೆ ಎನ್ನಲಾಗ್ತಿದೆ.
ಕೆಎ 51, ಬಿ 8479 ನಂಬರ್ನ ಪ್ರೈವೇಟ್ ಆ್ಯಂಬುಲೆನ್ಸ್ ಚಾಲಕ ಕಾನೂನು ದುರ್ಬಳಕೆ ಮಾಡಿಕೊಂಡಿದ್ದಾನೆ. ಇದೇನು ಆ್ಯಂಬುಲೆನಾ, ಇಲ್ಲಾ ಲಗೇಜ್ ವೆಹಿಕಲ್ಲಾ?. ಇಂಥವರ ವಿರುದ್ಧ ಕೇಸ್ ಹಾಕಿ, ಕಾನೂನಿನ ಪಾಠ ಕಲಿಸಬೇಕಿದೆ ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳ ಮೂಲಕ ಆಗ್ರಹಿಸಿದ್ದಾರೆ.