ETV Bharat / state

ಕರಗ ಹೊತ್ತ ಪೂಜಾರಿ ಮೇಲೆ ರಾಸಾಯನಿಕ ದ್ರಾವಣ ಎಸೆತ! - ಹಲಸೂರು ಗೇಟ್ ಪೊಲೀಸ್ ಠಾಣೆ

ಬೆಂಗಳೂರು ಕರಗೋತ್ಸವದ ವೇಳೆ ಕರಗ ಹೊತ್ತಿದ್ದ ಪೂಜಾರಿ ಮೇಲೆ ಕಿಡಿಗೇಡಿಗಳು ರಾಸಾಯನಿಕ ದ್ರಾವಣ ಎಸೆದಿದ್ದಾರೆ.

ಹೂವಿನ ಕರಗ ಹೊತ್ತ ಪೂಜಾರಿ ಮೇಲೆ ರಾಸಾಯನಿಕ ದ್ರಾವಣ ಎಸೆತ

author img

By

Published : Apr 11, 2023, 10:16 PM IST

ಹೂವಿನ ಕರಗ ಹೊತ್ತ ಪೂಜಾರಿ ಮೇಲೆ ರಾಸಾಯನಿಕ ದ್ರಾವಣ ಎಸೆತ

ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗೋತ್ಸವದ ವೇಳೆ ಕರಗ ಹೊತ್ತಿದ್ದ ಪೂಜಾರಿ ಮೇಲೆ ರಾಸಾಯನಿಕ ದ್ರಾವಣ ಎಸೆದು ಕಿಡಿಗೇಡಿಗಳು ಗಾಯಗೊಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಏಪ್ರಿಲ್ 6 ರಂದು ಬೆಂಗಳೂರು ಕರಗೋತ್ಸವ ಹಿನ್ನೆಲೆಯಲ್ಲಿ ಪೂಜಾರಿ ಜ್ಞಾನೇಂದ್ರ ಕರಗ ಹೊತ್ತಿದ್ದರು.‌ ಅಂದು ಮಧ್ಯರಾತ್ರಿ ಭಕ್ತಾದಿಗಳ ಗುಂಪಿನಲ್ಲಿ‌ ಕಿಡಿಗೇಡಿಗಳು ರಾಸಾಯನಿಕ ದ್ರಾವಣ ಸಿಂಪಡಿಸಿದ್ದಾರೆ.‌ ಇದರಿಂದ ಪೂಜಾರಿಯ ಕತ್ತು ಹಾಗೂ ಹೊಟ್ಟೆ ಭಾಗಕ್ಕೆ ಸುಟ್ಟ ಗಾಯಗಳಾಗಿವೆ. ಅಲ್ಲದೆ ಕರಗ ಹೊತ್ತ ಸಂದರ್ಭದಲ್ಲಿಯೇ ಪರಸ್ಪರ ಬಡಿದಾಟವಾಗಿದೆ.

ಇದನ್ನೂ ಓದಿ: ಬೀದರ್​:1.40 ಕೋಟಿ ರೂಪಾಯಿ ಮೌಲ್ಯದ 150 ಕೆಜಿ ಗಾಂಜಾ ವಶ

ಈ ಬಾರಿ ನಡೆದ ಬೆಂಗಳೂರಿನ ಕರಗ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತಾದಿಗಳು ಭಾಗಿಯಾಗಿದ್ದರು. ಅದ್ಧೂರಿ ಉತ್ಸವವನ್ನು ಆಯೋಜಿಸಿದ್ದ ಆಡಳಿತ ಮಂಡಳಿಯೂ ಉತ್ಸವದಲ್ಲಿ ಸಮಸ್ಯೆ ಬರದಂತೆ ಎಚ್ಚರಿಕೆ ವಹಿಸಿತ್ತು. ಉತ್ಸವದ ದಿನ ಮಧ್ಯಾಹ್ನ ಕರ್ಪೂರ ಹಚ್ಚುವ ಸಮಯದಲ್ಲಿ ಬೈಕ್​ಗಳಿಗೆ ಬೆಂಕಿ ತಾಗಿ ಸಮಸ್ಯೆ ಉಂಟಾಗಿತ್ತು. ಬಳಿಕ ಕರಗ ಹೊತ್ತು ಹೊರಟ ಸಂದರ್ಭದಲ್ಲಿಯೇ ಮತ್ತೊಂದು ವಿಘ್ನ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕರಗ ಹೊತ್ತ ಪೂಜಾರಿ ಮೇಲೆಯೇ ರಾಸಾಯನಿಕ ದ್ರಾವಣ ಎಸೆಯಲಾಗಿದೆ. ಈ ಸಂದರ್ಭದಲ್ಲಿ ಪೂಜಾರಿಯೂ ಸೇರಿ ಹಲವರು ಪರಸ್ಪರ ಬಡಿದಾಡಿಕೊಂಡಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ₹8 ಕೋಟಿ ಮೌಲ್ಯದ ಡ್ರಗ್ಸ್‌ ಪತ್ತೆ: ಐವರು ವಿದೇಶಿಗರ ಬಂಧನ

ಜ್ಞಾನೇಂದ್ರ ಮೇಲೆ ನಡೆದ ರಾಸಾಯನಿಕ ದಾಳಿ ಪರಿಣಾಮ ಸುಟ್ಟ ಗಾಯಗಳಾಗಿವೆ. ಅದರಲ್ಲೇ ಪೂಜಾರಿ ಕರಗ ಹೊತ್ತು ಸಾಗಿದ್ದಾರೆ. ಆದಿನಾರಾಯಣ ಎಂಬಾತ ಕೃತ್ಯ ನಡೆಸಿರುವುದಾಗಿ ತಿಳಿದು ಬಂದಿದೆ. ಪುಟ್ಟೇನಹಳ್ಳಿ ನಿವಾಸಿ ಚಿಕ್ಕ ಮುನಿಶ್ಯಾಮಪ್ಪ ಮಗನಾಗಿರೋ ಆದಿಗೆ ಕರಗ ಹೊತ್ತ ಜ್ಞಾನೇಂದ್ರ ವಿರುದ್ಧ ಮೊದಲಿನಿಂದಲೂ ದ್ವೇಷವಿತ್ತಂತೆ.

ಇದನ್ನೂ ಓದಿ : ಹಾವೇರಿ, ಬೆಳಗಾವಿಯಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಮದ್ಯ, ಲಕ್ಷಗಟ್ಟಲೆ ಹಣ ವಶ

ಇದೇ ಕಾರಣಕ್ಕೆ ಏಪ್ರಿಲ್ 7 ರಂದು 2:25 ಕ್ಕೆ ಕರಗ ಹೊತ್ತುಕೊಂಡು ಹೋಗುವಾಗ ಅದಿನಾರಾಯಣನಿಂದ ದಾಳಿ ನಡೆದಿದೆ. ಯಾವುದೋ ರಾಸಾಯನಿಕವನ್ನು ಕೊಲೆ ಮಾಡುವ ಉದ್ದೇಶದಿಂದ ಜ್ಞಾನೇಂದ್ರನ ಮೇಲೆ ಎರಚಲಾಗಿತ್ತು ಎಂದು ದೂರು ನೀಡಲಾಗಿದೆ. ಸದ್ಯ IPC ಸೆಕ್ಷನ್ 326/A, 427, 307, 332 ಅಡಿಯಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬೆನ್ನಲ್ಲೇ ಆರೋಪಿ ಆದಿನಾರಾಯಣ ಸೇರಿ ಇತರರು ಪರಾರಿಯಾಗಿದ್ದಾರೆ. ಈ ಮಧ್ಯೆ ಪೊಲೀಸರು ಹುಡುಕಾಟ ನಡೆಸಿದ್ದು, ಬಂಧನದ ಬಳಿಕ ಪ್ರಕರಣದ ಸತ್ಯಾಸತ್ಯತೆ ತಿಳಿಯಬೇಕಿದೆ.

ಇದನ್ನೂ ಓದಿ : ನಾಯಿ ಗಲೀಜು ಮಾಡುವ ವಿಚಾರಕ್ಕೆ ಗಲಾಟೆ: ಬ್ಯಾಟ್ ನಿಂದ ಹೊಡೆದು ವೃದ್ಧನ ಹತ್ಯೆ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.