ETV Bharat / state

ಬೆಂಗಳೂರು: ಬಿದ್ದ ರಸ್ತೆ ಗುಂಡಿಯಲ್ಲೇ ಅರ್ಧ ದಿನ ಕುಳಿತು ಸವಾರ ಪ್ರತಿಭಟನೆ.. ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ - bengaluru pothole news

ಬೆಂಗಳೂರಿನ ಹಲಸೂರಿನಲ್ಲಿನ ರಸ್ತೆ ಗುಂಡಿಗೆ ಬಿದ್ದ ಬೈಕ್ ಸವಾರ ಸುಮಾರು ಅರ್ಧ ದಿನ ಬಿದ್ದ ಜಾಗದಲ್ಲೇ ಕುಳಿತು ಪ್ರತಿಭಟಿಸಿದ್ದಾರೆ. ಮೋದಿ ಭೇಟಿಗಾಗಿ ತೇಪೆ ಹಾಕುವ ಸರ್ಕಾರ, ಜನ ಸಾಯುತ್ತಿದ್ದರೂ ಗುಂಡಿ ಮುಚ್ಚುವುದಿಲ್ಲವೇಕೆ? ಜನರ ಹಿತ ಬಿಜೆಪಿಗೆ ಬೇಕಿಲ್ಲವೇ? ಮಾನ, ಮರ್ಯಾದೆ, ನಾಚಿಕೆ ಈ ಮೂರನ್ನೂ ಬಿಟ್ಟಿದೆ ಎಂದು ಕಾಂಗ್ರೆಸ್ ಜರಿದಿದೆ.

ಬಿದ್ದ ರಸ್ತೆ ಗುಂಡಿಯಲ್ಲೇ ಅರ್ಧ ದಿನ ಕುಳಿತು ಸವಾರ ಪ್ರತಿಭಟನೆ

author img

By

Published : Nov 12, 2022, 9:05 PM IST

ಬೆಂಗಳೂರು: ಇಲ್ಲಿನ ಹಲಸೂರಿನಲ್ಲಿನ ರಸ್ತೆ ಗುಂಡಿಗೆ ಬಿದ್ದ ಬೈಕ್ ಸವಾರ ಸುಮಾರು ಅರ್ಧ ದಿನ ಬಿದ್ದ ಜಾಗದಲ್ಲೇ ಕುಳಿತು ಪ್ರತಿಭಟಿಸಿದ ಘಟನೆ ನಡೆದಿದೆ. ಈ ಬಗ್ಗೆ ಕಾಂಗ್ರೆಸ್ ಟ್ವೀಟ್​​ ಮಾಡಿ, ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ತಾಳಿದೆ. ಗುಂಡಿಯಲ್ಲಿ ಬಿದ್ದ ಸವಾರ ಪ್ರತಿಭಟನೆ ನಡೆಸಿದ್ದೇ ಇದಕ್ಕೆ ಸಾಕ್ಷಿ ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.

ಟ್ರಬಲ್ ಇಂಜಿನ್ ಸರ್ಕಾರ ಎಂಬ ಟ್ಯಾಗ್ ಲೈನ್ ಅಡಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬೆಂಗಳೂರಿನ ಹಲಸೂರಿನಲ್ಲಿನ ರಸ್ತೆ ಗುಂಡಿಗೆ ಬಿದ್ದ ಬೈಕ್ ಸವಾರ ಸುಮಾರು ಅರ್ಧ ದಿನ ಬಿದ್ದ ಜಾಗದಲ್ಲೇ ಕುಳಿತು ಪ್ರತಿಭಟಿಸಿದ್ದಾರೆ. ಮೋದಿ ಭೇಟಿಗಾಗಿ ತೇಪೆ ಹಾಕುವ ಸರ್ಕಾರ, ಜನ ಸಾಯುತ್ತಿದ್ದರೂ ಗುಂಡಿ ಮುಚ್ಚುವುದಿಲ್ಲವೇಕೆ? ಜನರ ಹಿತ ಬಿಜೆಪಿಗೆ ಬೇಕಿಲ್ಲವೇ? ಮಾನ, ಮರ್ಯಾದೆ, ನಾಚಿಕೆ ಈ ಮೂರನ್ನೂ ಬಿಟ್ಟಿದೆ ಎಂದು ಕಾಂಗ್ರೆಸ್ ಜರಿದಿದೆ.

  • ಬೆಂಗಳೂರಿನ ಹಲಸೂರಿನಲ್ಲಿನ ರಸ್ತೆ ಗುಂಡಿಗೆ ಬಿದ್ದ ಬೈಕ್ ಸವಾರ ಸುಮಾರು ಅರ್ಧ ದಿನ ಬಿದ್ದ ಜಾಗದಲ್ಲೇ ಕುಳಿತು ಪ್ರತಿಭಟಿಸಿದ್ದಾರೆ.

    ಮೋದಿ ಭೇಟಿಗಾಗಿ ತೇಪೆ ಹಾಕುವ ಸರ್ಕಾರ ಜನ ಸಾಯುತ್ತಿದ್ದರೂ ಗುಂಡಿ ಮುಚ್ಚುವುದಿಲ್ಲವೇಕೆ? ಜನರ ಹಿತ ಬಿಜೆಪಿಗೆ ಬೇಕಿಲ್ಲವೇ?

    "ಮಾನ, ಮರ್ಯಾದೆ, ನಾಚಿಕೆ"
    ಈ ಮೂರನ್ನೂ ಬಿಟ್ಟಿದೆ#TroubleEngineSarkara pic.twitter.com/pPMhG4A1og

    — Karnataka Congress (@INCKarnataka) November 12, 2022 " class="align-text-top noRightClick twitterSection" data=" ">

ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ ಕಾರ್ಯಕ್ರಮದಲ್ಲಿ ಜನ ಹೆಚ್ಚಾಗಿ ಪಾಲ್ಗೊಂಡಿರಲಿಲ್ಲ ಎಂಬ ವಿಚಾರವನ್ನು ಕೂಡ ಟ್ವೀಟ್ ಮಾಡಿರುವ ಕಾಂಗ್ರೆಸ್, ಜನತೆ ಸುಳ್ಳುಗಳನ್ನ ಎಷ್ಟು ದಿನ ಸಹಿಸಬಲ್ಲರು, ಟೊಳ್ಳುಗಳನ್ನ ಎಷ್ಟು ದಿನ ನಂಬಬಲ್ಲರು, ಜನಸಂಕಟ ಯಾತ್ರೆಯಲ್ಲಿ ಖಾಲಿ ಕುರ್ಚಿ ದರ್ಶನ ಪಡೆದ ರಾಜ್ಯ ಬಿಜೆಪಿ, ಪ್ರಧಾನಿ ಕರೆಸಿ ಚುನಾವಣಾ ತಯಾರಿ ಮಾಡಿದರೂ ಕುರ್ಚಿಗಳು ಖಾಲಿಯಾಗುತ್ತಿವೆ.

ಟ್ರಬಲ್ ಇಂಜಿನ್ ಸರ್ಕಾರದ ಮೇಲೆ ಜನಸಾಮಾನ್ಯರಷ್ಟೇ ಅಲ್ಲ ಸ್ವತಃ ಬಿಜೆಪಿ ಕಾರ್ಯಕರ್ತರೇ ಬೇಸತ್ತಿದ್ದಾರೆ! ಹಣ ನೀಡಿ ಜನರನ್ನೂ ಕರೆತಂದರೂ ಕುರ್ಚಿಗಳು ಖಾಲಿ. ಜೀವವಿದ್ದಿದ್ದರೆ ಕುರ್ಚಿಗಳಿಗೂ ಜಿಗುಪ್ಸೆ ಹುಟ್ಟಿ ಎದ್ದು ಹೊರಡುತ್ತಿದ್ದವು! ರಾಜ್ಯ ಬಿಜೆಪಿಗೆ ಖಾಲಿ ಕುರ್ಚಿಗಳೇ ಪ್ರೇಕ್ಷಕರು, ಕುರ್ಚಿಗಳು ಎದ್ದು ಹೋಗುವುದಿಲ್ಲ ಎಂಬ ಖಾತರಿ ಇದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಭಯೋತ್ಪಾದಕ ಗೋಡ್ಸೆ ಸಂತತಿಯವರಾದ ಬಿಜೆಪಿಯ ತಾಲಿಬಾನ್ ಮನಸ್ಥಿತಿ, ಸಂಸ್ಕೃತಿ ಹೊರಬಂದಿದೆ. ಹಿಂದೆ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದ ಬಿಜೆಪಿ ಇಂದು ಪ್ರಿಯಾಂಕ್ ಖರ್ಗೆ ಅವರಿಗೆ ಶೂಟ್ ಮಾಡುವ ಬೆದರಿಕೆ ಹಾಕುತ್ತಿದೆ. ಬ್ರಿಟಿಷರ ಗುಂಡುಗಳಿಗೇ ಹೆದರದ ಕಾಂಗ್ರೆಸ್, ಐಸಿಸ್ ಉಗ್ರರಂತಿರುವ ರಾಜ್ಯ ಬಿಜೆಪಿ ಹೇಡಿಗಳಿಗೆ ಹೆದರುವುದೇ?!

40 ಪರ್ಸೆಂಟ್ ಸರ್ಕಾರದ ಅಯೋಗ್ಯತನ ಜನರಿಗೆ ಅರ್ಥವಾಗಿ ತಮ್ಮ ಜೀವ ಉಳಿಸಿಕೊಳ್ಳು ತಮ್ಮದೇ ಖರ್ಚಿನಲ್ಲಿ ತಾವೇ ರಸ್ತೆಗುಂಡಿ ಮುಚ್ಚುತ್ತಿದ್ದಾರೆ. ಬಸವರಾಜ್ ಬೊಮ್ಮಾಯಿ ಅವರೇ, ಇದು ನಿಮ್ಮ ನಿಷ್ಕ್ರಿಯ ಟ್ರಬಲ್ ಇಂಜಿನ್ ಸರ್ಕಾರಕ್ಕೆ ನಾಚಿಕೆಗೇಡಲ್ಲವೇ? ಸರ್ಕಾರದ ಕೆಲಸವನ್ನು ಜನರೇ ಮಾಡುವುದಾದರೆ ಸರ್ಕಾರಕ್ಕೆ ತೆರಿಗೆ ಏಕೆ? ಕಮಿಷನ್ ಲೂಟಿಗಾಗಿಯೇ? ಎಂದು ಪ್ರಶ್ನಿಸಿದೆ.

ಕಾಂಗ್ರೆಸ್ ಟ್ವಿಟ್
ಕಾಂಗ್ರೆಸ್ ಟ್ವಿಟ್

ಹಿಂದೆ ಸಮಾವೇಶಕ್ಕೆ 500 ರೂ ನೀಡುವ ಭರವಸೆ ಕೊಟ್ಟು ಕರೆತಂದವರಿಗೆ 200 ರೂ ಕೊಟ್ಟು ವಂಚಿಸಿದ್ದ ಬಿಜೆಪಿ ಈಗ ಮತ್ತೊಮ್ಮೆ ಒಂದು ರೂಪಾಯಿಯನ್ನೂ ಕೊಡದೆ ವಂಚಿಸಿದೆ. ಹಣ ಸಿಗದೇ ಕಾರ್ಮಿಕರು ಬಿಜೆಪಿ ವಿರುದ್ಧ ಪೊಲೀಸ್ ದೂರು ನೀಡುವಂತಾಗಿದ್ದು, ಬಿಜೆಪಿ ವಂಚನೆಗೆ ಹಿಡಿದ ಕನ್ನಡಿ.

ನರೇಂದ್ರ ಮೋದಿ ಅವರೇ ನಿಮ್ಮನ್ನ ಮೆಚ್ಚಿಸಲು ರಾಜ್ಯ ಬಿಜೆಪಿ ನಾಯಕರು ಹಣ ಕೊಡುತ್ತೇವೆ ಎಂದು ಕರೆತಂದ ಜನರಿಗೆ ₹500 ನೀಡದೇ ವಂಚಿಸಿದ್ದಾರೆ. ಕನಿಷ್ಠ ಮೋಸ ಹೋದ ಕಾರ್ಮಿಕರಿಗಾದರೂ ನ್ಯಾಯ ಕೊಡಿಸಿ, ಅವರ ಪಾಲಿನ 500 ರೂಪಾಯಿಯನ್ನು ಕೊಡಿಸಿ! ಮೋದಿ ಈಗ ಚಲಾವಣೆ ಇಲ್ಲದ ನಾಣ್ಯ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

(ಓದಿ: ವಿಧಾನಸಭೆಯತ್ತ ಗಮನ ಹರಿಸಿದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್.. ಆಯ್ಕೆ ಕ್ಷೇತ್ರ ಯಾವುದು ಗೊತ್ತಾ?)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.