ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು, ಪ್ರತಿಯೊಬ್ಬರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾದುದು ಅನಿವಾರ್ಯವಾಗಿದೆ.
ದಕ್ಷಿಣ ವಿಭಾಗ ಡಿಸಿಪಿ ಆಗಿದ್ದ ಡಾ. ರೋಹಿಣಿ ಸಫೆಟ್ ಸಾರ್ವಜನಿಕರಿಗೆಂದೇ ದಿನಕ್ಕೊಂದು ಯೋಜನೆಗಳನ್ನು ಜಾರಿಗೆ ತಂದು ಕೊರೊನಾ ವಿರುದ್ಧ ಪೊಲೀಸರು, ಸಾರ್ವಜನಿಕರು, ಯುವಕರು ಒಗ್ಗಟ್ಟಾಗಿ ಕೆಲಸ ಮಾಡುವಂತೆ ಅವಕಾಶ ಕಲ್ಪಿಸಿಕೊಟ್ಟಿದ್ದರು.
ಸದ್ಯ ಕೊರೊನಾ ಸಂದರ್ಭದಲ್ಲಿ ಸಾರ್ವಜನಿಕರಿಗಾಗಿ ಹಿರಿಯರ ಸಹಾಯವಾಣಿ, ವೀರ ವನಿತೆಯರು ಹೀಗೆ ಒಂದೊಂದು ಥೀಮ್ ಜಾರಿಗೆ ತಂದಿದ್ದರು. ಇದೀಗ 'ನಮ್ಮ ಅಕ್ಕ-ತಂಗಿಯರು' ಎಂಬ ಹೊಸ ಗ್ರೂಪ್ ಕ್ರಿಯೇಟ್ ಮಾಡಿದ್ದು, ದಕ್ಷಿಣ ವಿಭಾಗ ವ್ಯಾಪ್ತಿಯಲ್ಲಿರುವ ಪ್ರತಿಯೊಬ್ಬರು ಆಸಕ್ತಿಯಿಂದ ಇದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದಾಗಿದೆ.
'ನಮ್ಮ ಅಕ್ಕ-ತಂಗಿಯರು' ಎಂಬ ಹೆಸರಿನ ಈ ಗ್ರೂಪ್ನ ಸದಸ್ಯರು, ಹೋಂ ಐಸೋಲೇಷನ್ನಲ್ಲಿ ಇರುವವರಿಗೆ ತರಕಾರಿ, ಅಗತ್ಯ ವಸ್ತುಗಳನ್ನು ನೀಡುವುದು ಸೇರಿದಂತೆ ಹಲವು ರೀತಿಯಲ್ಲಿ ನೆರವಾಗಲು ಸನ್ನದ್ಧವಾಗಿದ್ದಾರೆ.
ಸದ್ಯ ಈ ಗ್ರೂಪ್ನಲ್ಲಿ ಬಹುತೇಕರು ಮಹಿಳೆಯರು, ಯುವಕರು, ಪೊಲೀಸ್ ಸಿಬ್ಬಂದಿ ಇದ್ದು, ಎಲ್ಲಾ ರೀತಿಯಾದ ಸಹಾಯವನ್ನು ಸಾರ್ವಜನಿಕರಿಗೆ ನಮ್ಮ ಅಕ್ಕ-ತಂಗಿಯರು ಎಂಬ ಪರಿಕಲ್ಪನೆಯಡಿ ಸಹಾಯ ಮಾಡಲು ಮುಂದಾಗಿದ್ದಾರೆ.
ಸದ್ಯ ನೂತನವಾಗಿ ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಕಮಲ್ ಪಂತ್ ಅವರು 'ನಮ್ಮ ಅಕ್ಕ-ತಂಗಿಯರು' ಎಂಬ ಹೊಸ ಕಾನ್ಸೆಪ್ಟ್ ಅನ್ನು, ಮುಂದೆ ಯಾವ ರೀತಿ ಅಭಿವೃದ್ಧಿ ಪಡಿಸಲು ಸಲಹೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇಂದು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸೇರಿ 17 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ರೋಹಿಣಿ ಅವರು ಸಿಐಡಿ ವಿಭಾಗದ ಎಸ್ಪಿ ಆಗಿ ವರ್ಗಾವಣೆ ಮಾಡಲಾಗಿದೆ.