ಬೆಂಗಳೂರು: 22 ಕ್ಯಾರಟ್ ಚಿನ್ನಕ್ಕೆ 916 ಹಾಲ್ ಮಾರ್ಕ್ ನಕಲಿ ಸೀಲ್ ಹಾಕಿ ಮಾರಾಟ ಮಾಡುತ್ತಿದ್ದ ಆರೋಪಿ ಸುದರ್ಶನ್ ಜೈನ್ ತನಿಖೆಯನ್ನ ಸಿಸಿಬಿ ಡಿಸಿಪಿ ರವಿ ಕುಮಾರ್ ಚುರುಕುಗೊಳಿಸಿದ್ದಾರೆ.
ಬ್ಯೂರೊ ಆಫ್ ಇಂಡಿಯನ್ ಸ್ಟಾಂಡರ್ಡ್ 2016 ಆ್ಯಕ್ಟ್ ಪ್ರಕಾರ 47 ಕಂಪೆನಿಗೆ ಮಾತ್ರ 22 ಕ್ಯಾರಟ್ ಚಿನ್ನಕ್ಕೆ 916 ಹಾಲ್ ಮಾರ್ಕ್ ಸೀಲ್ ಹಾಕುವ ಅನುಮತಿ ಕೊಡಲಾಗಿತ್ತು. ಆದರೆ ಆರೋಪಿ ಸುದರ್ಶನ್ ಹಲವಾರು ಕಂಪನಿಗಳಿಗೆ ಚಿನ್ನವನ್ನ ಕೊಟ್ಟಿರುವ ಮಾಹಿತಿ ಬಹಿರಂಗವಾಗಿದ್ದು ಈ ಹಿನ್ನೆಲೆ, ಸುದರ್ಶನ್ನನ್ನು ತೀವ್ರ ವಿಚಾರಣೆ ಒಳಪಡಿಸಲಾಗಿದೆ.
ಶಿವಾಜಿನಗರ ಮತ್ತು ಆರ್ ಆರ್ ನಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ 22 ಕ್ಯಾರೆಟ್ ಚಿನ್ನಕ್ಕೆ 916 ಹಾಲ್ ಮಾರ್ಕ್ ಮುದ್ರೆ ಹಾಕುವ ವ್ಯಾಪರವನ್ನ ಕಳೆದ ಆರು ತಿಂಗಳಿಂದ ಮಾಡುತ್ತಿದ್ದ. ಹೀಗಾಗಿ ಸೂಕ್ತ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರ ದಾಳಿ ನಡೆಸಿದ್ದಾರೆ.