ಬೆಂಗಳೂರು : ಕೋವಿಡ್ ಕಾರಣಕ್ಕೆ 6,7 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿಗಳು ಪೂರ್ಣಾವಧಿಯಲ್ಲಿ ಶುರುವಾಗಿರಲಿಲ್ಲ. ಇದೀಗ ಕೊರೊನಾ ಎರಡನೇ ಅಲೆಯ ಆತಂಕದ ನಡುವೆಯೇ ಬೆಂಗಳೂರು ನಗರ ಹಾಗೂ ಕೇರಳ ಗಡಿಭಾಗದಲ್ಲಿ ಕೇವಲ 8ನೇ ತರಗತಿ ಮಾತ್ರ ಆರಂಭವಾಗಿದ್ದು, ಉಳಿದ ತರಗತಿಗಳಿಗೆ ವಿದ್ಯಾಗಮವೇ ಮುಂದುವರಯಲಿದೆ.
ಒಂದು ವರ್ಷದ ಬಳಿಕ ಶಾಲೆಗೆ ಆಗಮಿಸುತ್ತಿರುವ ವಿದ್ಯಾರ್ಥಿಗಳಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಹಾಗೂ ಪೋಷಕರಿಂದ ಅನುಮತಿ ಪತ್ರ ತರುವುದನ್ನು ಕಡ್ಡಾಯಗೊಳಿಸಲಾಗಿತ್ತು. ಮೊದಲ ದಿನ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ದ್ವಾರದ ಬಳಿ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಓದಿ : ಕೊರೊನಾ ಎಸ್ಒಪಿ ಪ್ರಕಾರವೇ ಶಾಲೆ ಪ್ರಾರಂಭವಾಗಿದೆ : ಡಿಡಿಪಿಐ ರಮೇಶ್
ಸುದೀರ್ಘ ಸಮಯದ ಬಳಿಕ ಮಕ್ಕಳು ಶಾಲೆಗೆ ಬಂದಿದ್ದರಿಂದ, ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪಬ್ಲಿಕ್ ಸರ್ಕಾರಿ ಶಾಲೆ ಇಂದು ಮಧುವಣ ಗಿತ್ತಿಯಂತೆ ಸಿಂಗಾರಗೊಂಡಿತ್ತು. ತೋರಣ, ಬಾಳೆಕಂದು, ಬಣ್ಣ ಬಣ್ಣದ ರಂಗೋಲಿಯಿಂದ ಸಿಂಗರಿಸಲಾಗಿತ್ತು. ಶಾಲೆಗೆ ಬರುವ ಪ್ರತೀ ವಿದ್ಯಾರ್ಥಿಗಳಿಗೂ ಕೆಂಪು ಬಣ್ಣದ ಗುಲಾಬಿ ಹೂ ಕೊಟ್ಟು ಭರ್ಜರಿಯಾಗಿ ಸ್ವಾಗತಿಸಲಾಯ್ತು. ನೆರೆ ರಾಜ್ಯಗಳಲ್ಲಿ ಕೊರೊನಾ ಹೆಚ್ಚಾಗ್ತಿದ್ದು, ರಾಜ್ಯದಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ.