ETV Bharat / state

ರಾಜ್ಯದಲ್ಲಿ ದಾಖಲೆಯ ಶೇ. 73.19 ಮತದಾನ: 3,88,51,807 ಮತದಾರರಿಂದ ಹಕ್ಕು ಚಲಾವಣೆ - polling in karnataka

ರಾಜ್ಯ ವಿಧಾನಸಭೆ ಚುನಾವಣೆಗೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮತದಾನವಾಗಿದ್ದು, ಕಳೆದ ಬಾರಿಗಿಂತ ಈ ಸಲ ಶೇಕಡಾ 0.75ರಷ್ಟು ಅಧಿಕ ದಾಖಲಾಗಿದೆ.

73.19% polling in the state 3,88,51,807 voters voted
ರಾಜ್ಯದಲ್ಲಿ ಶೇ 73.19 ಮತದಾನ: 3,88,51,807 ಮತದಾರರಿಂದ ಹಕ್ಕು ಚಲಾವಣೆ
author img

By

Published : May 11, 2023, 6:38 PM IST

ಬೆಂಗಳೂರು: ರಾಜ್ಯದಲ್ಲಿ ನಿನ್ನೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 73.19% ಮತದಾನ ಆಗಿದೆ. ಈ ಸಂಬಂಧ ಚುನಾವಣಾ ಆಯೋಗ ಅಂತಿಮ ಅಂಕಿ-ಅಂಶ ನೀಡಿದೆ. ಆ ಮೂಲಕ ಕರ್ನಾಟಕ ವಿಧಾನಸಭೆ ಚುನಾವಣೆ ಇತಿಹಾಸದಲ್ಲಿ ಅತಿ ಹೆಚ್ಚು ಮತದಾನ ಆಗಿದೆ. 2018ರ ಚುನಾವಣೆಯಲ್ಲಿ ರಾಜ್ಯದಲ್ಲಿ ಒಟ್ಟು 72.44% ಮತದಾನ ಆಗಿತ್ತು. ಈ ಬಾರಿ 73.19% ಮತದಾನ ಆಗಿದೆ. ಆ ಮೂಲಕ ಈ ಬಾರಿ 0.75% ಹೆಚ್ಚು ಮತದಾನ ಆಗಿದೆ. ನಿನ್ನೆ ಒಟ್ಟು 3,88,51,807 ಮತದಾರರು ತಮ್ಮ ಮತ ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಈ ಪೈಕಿ 1,96,58,398 ಪುರುಷ ಮತದಾರರು ಮತ ಹಾಕಿದ್ದರೆ, 1,91,92,372 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. 1,037 ಇತರರು ಮತ ಚಲಾಯಿಸಿದ್ದಾರೆ. ಪುರುಷ ಮತದಾರರು ಒಟ್ಟು 73.68%, ಮಹಿಳಾ ಮತದಾರರು 72.70% ಮತ ಚಲಾವಣೆ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 85.56% ಮತದಾನ ಆಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 85.08% ಮತದಾನ ಆಗುವ ಮೂಲಕ ದ್ವಿತೀಯ ಸ್ಥಾನದಲ್ಲಿದೆ. ಉಳಿದಂತೆ ರಾಮನಗರ ಜಿಲ್ಲೆಯಲ್ಲಿ 84.05% ಮತದಾನ ಆಗಿದೆ. ಇನ್ನು ಮಂಡ್ಯದಲ್ಲಿ 84.45% ಮತದಾನ ಆಗಿದೆ.

ಬೆಂಗಳೂರಲ್ಲಿನ ಮತದಾನದ ವಿವರ: ಬೆಂಗಳೂರಲ್ಲಿ ಈ ಬಾರಿಯೂ ನಿರಾಶಾದಾಯಕ ಮತದಾನ‌ ನಡೆದಿದೆ. ಬೆಂಗಳೂರಿನ ಮತದಾನ ಪ್ರಮಾಣವನ್ನು ಹೆಚ್ಚಿಸಲು ಚುನಾವಣಾ ಆಯೋಗ ನಾನಾ ಕಸರತ್ತು ನಡೆಸಿತ್ತು. ಆದರೆ ಬೆಂಗಳೂರಿಗರು ತಮ್ಮ ನಿರಾಸಕ್ತಿ ಮುಂದುವರೆಸಿದ್ದಾರೆ. ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಯಲಹಂಕ ಒಳಗೊಂಡ ಬೆಂಗಳೂರು ನಗರ ವಿಭಾಗದಲ್ಲಿ 57.71% ಮತದಾನ ಆಗಿದೆ. ಇನ್ನು ಚಾಮರಾಜಪೇಟೆ, ಚಿಕ್ಕಪೇಟೆ, ಗಾಂಧಿನಗರ, ರಾಜಾಜಿನಗರ, ಆರ್.ಆರ್.ನಗರ, ಶಾಂತಿನಗರ ಹಾಗೂ ಶಿವಾಜಿನಗರ ಒಳಗೊಂಡ ಬಿಬಿಎಂಪಿ (ಕೇಂದ್ರ) ವಿಭಾಗದಲ್ಲಿ ಒಟ್ಟು 55.50% ಮತದಾನ ಆಗಿದೆ.

ಇತ್ತ ಸಿವಿ ರಾಮನ್ ನಗರ, ಹೆಬ್ಬಾಳ, ಕೆ.ಆರ್. ಪುರಂ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಪುಲಕೇಶಿನಗರ, ಸರ್ವಜ್ಞನಗರ ಕ್ಷೇತ್ರ ಒಳಗೊಂಡ ಬಿಬಿಎಂಪಿ (ಉತ್ತರ) ವಿಭಾಗದಲ್ಲಿ 52.59% ಮತದಾನ ಆಗಿದೆ. ಇನ್ನು ಬಿಟಿಎಂ ಲೇಔಟ್, ಬಸವನಗುಡಿ, ಬೊಮ್ಮನಹಳ್ಳಿ, ಗೋವಿಂದರಾಜ ನಗರ, ಜಯನಗರ, ಪದ್ಮನಾಭ ನಗರ, ವಿಜಯನಗರ ಕ್ಷೇತ್ರಗಳನ್ನೊಳಗೊಂಡ ಬಿಬಿಎಂಪಿ (ದಕ್ಷಿಣ) ವಿಭಾಗದಲ್ಲಿ ಈ ಬಾರಿ ಕೇವಲ 52.33% ಮತದಾನ ಆಗಿದೆ.

ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೆ.75 ರಷ್ಟು ಮತದಾನ: ಮೊದಲ ಬಾರಿಗೆ ಶಾಂತಿಭಂಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.