ಬೆಂಗಳೂರು: ರಾಜ್ಯದಲ್ಲಿಂದು 708 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,30,668ಕ್ಕೆ ಏರಿಕೆಯಾಗಿದೆ. ಮೂವರು ಕೋವಿಡ್ನಿಂದಾಗಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 12,158ಕ್ಕೆ ತಲುಪಿದೆ.
19 ಸೋಂಕಿತರು ಅನ್ಯ ಕಾರಣಕ್ಕೆ ಮೃತಪಟ್ಟಿದ್ದಾರೆ. 643 ಸೋಂಕಿತರು ಇಂದು ಗುಣಮುಖರಾಗಿದ್ದು, ಈವರೆಗೆ 9,09,701 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 183 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ರಾಜ್ಯದಲ್ಲಿ 8,790 ಸಕ್ರಿಯ ಪ್ರಕರಣಗಳಿವೆ. ಕಳೆದ 7 ದಿನಗಳಲ್ಲಿ 19,015 ಮಂದಿ ಹೋಂ ಕ್ವಾರೆಂಟೈನ್ನಲ್ಲಿದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 56,213 ಮಂದಿ , ದ್ವಿತೀಯ ಸಂಪರ್ಕದಲ್ಲಿ 62,801 ಮಂದಿ ಇದ್ದಾರೆ.
ಈವರೆಗೆ ಯುಕೆಯಿಂದ ಬಂದ 47 ಮಂದಿಗೆ ಪಾಸಿಟಿವ್ ಬಂದಿದ್ದು, ಇವರ ಸಂಪರ್ಕದಲ್ಲಿದ್ದ 26 ಮಂದಿಗೂ ಸೋಂಕು ದೃಢವಾಗಿದೆ. ಇನ್ನು ಯುಕೆಯಿಂದ ಬಂದವರಲ್ಲಿ 14 ಜನರಿಗೆ ರೂಪಾಂತರ ಕೊರೊನಾ ದೃಢಪಟ್ಟಿದೆ.
ಬೆಂಗಳೂರಿನಲ್ಲಿ 399 ಮಂದಿಗೆ ಸೋಂಕು ದೃಢಪಟ್ಟಿದ್ದು, ಈವರೆಗೆ 3,94,213 ಕೊರೊನಾ ತಗುಲಿದೆ. ಇಂದು 248 ಮಂದಿ ಗುಣಮುಖರಾಗಿದ್ದು 3,84,145 ಡಿಸ್ಚಾರ್ಜ್ ಆಗಿದ್ದಾರೆ. ಇಂದು ಇಬ್ಬರು ಸೋಂಕಿತರು ಮೃತಪಟ್ಟಿದ್ದು, ಸದ್ಯ 5,710 ಸಕ್ರಿಯ ಪ್ರಕರಣಗಳಿವೆ.
ಇದನ್ನೂ ಓದಿ: HCLನಿಂದ 20 ಸಾವಿರ ಉದ್ಯೋಗಿಗಳ ನೇಮಕ: ಈಗಲೇ ಸಿದ್ಧರಾಗಿ..