ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸದಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ಸಂಚಾರಿ ನಿಯಮ ತಂದಿದ್ದರೂ ಟ್ರಾಫಿಕ್ ವೈಲೇಷನ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. 70 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದ ಬೈಕ್ ಸವಾರನೊಬ್ಬ ಟ್ರಾಫಿಕ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ರಾಜಾಜಿನಗರದ ಸಂಚಾರಿ ಠಾಣಾ ವ್ಯಾಪ್ತಿಯ ಮಹಾಲಕ್ಷ್ಮಿಲೇಔಟ್ ಶಂಕರನಗರ ಬಳಿ ತಪಾಸಣೆ ಮಾಡುತ್ತಿದ್ದ ಟ್ರಾಫಿಕ್ ಪೊಲೀಸರ ಕೈಗೆ ಬೈಕ್ ಸವಾರ ಮಂಜುನಾಥ್ ಸಿಕ್ಕಿಬಿದ್ದಿದ್ದಾನೆ. ಬೈಕ್‌ನ ನೋಂದಣಿ ಸಂಖ್ಯೆ ಪರಿಶೀಲಿಸಿದಾಗ ಒಂದು ಕ್ಷಣ ಪೊಲೀಸರು ದಂಗಾಗಿದ್ದಾರೆ. ಯಾಕೆಂದರೆ, ಈತನ ವಿರುದ್ದ ನೋ ಪಾರ್ಕಿಂಗ್, ಹಿಂಬದಿ ಸವಾರನ ಮೇಲೆ ಹೆಲ್ಮೆಟ್ ಇಲ್ಲದೆ ಚಾಲನೆ, ಜೀಬ್ರಾ ಕ್ರಾಸ್ ಬೈಕ್ ನಿಲ್ಲಿಸಿರುವುದು ಸೇರಿದಂತೆ 70 ಬಾರಿ ಟ್ರಾಫಿಕ್ ವೈಲೇಷನ್ ಮಾಡಿರುವುದು ತಿಳಿದು ಬಂದಿದೆ.
ಈ ಸಂಬಂಧ ಬೈಕ್ ಸವಾರನಿಂದ ₹15,400 ದಂಡ ಕಟ್ಟಿಸಿಕೊಂಡಿದ್ದಾರೆ.