ಬೆಂಗಳೂರು: ಇಂದು ಒಂದೇ ದಿನ ದಾಖಲೆಯ 69 ಪಾಸಿಟಿವ್ ಕೇಸ್ಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 1,056ಕ್ಕೆ ಏರಿಕೆ ಆಗಿದೆ. ಮತ್ತೊಬ್ಬರು ವೈರಸ್ಗೆ ಬಲಿಯಾಗಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಾವಿನ 36ಕ್ಕೆ ಏರಿಕೆಯಾಗಿದ್ದರೆ, 11 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಳಿದ 539 ಮಂದಿ ಪ್ರತ್ಯೇಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 480 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರು 13, ದಕ್ಷಿಣ ಕನ್ನಡ 15, ಮಂಡ್ಯ 13, ಬೀದರ್ 7, ಉಡುಪಿ 5, ಕಲಬುರಗಿ 3, ಹಾಸನ 7, ಚಿತ್ರದುರ್ಗ 2, ಕೋಲಾರ 1, ಶಿವಮೊಗ್ಗ 1, ಉತ್ತರ ಕನ್ನಡ 1, ಬಾಗಲಕೋಟೆ 1 ಪಾಸಿಟಿವ್ ಕೇಸ್ ಪತ್ತೆಯಾಗಿವೆ.
ರೋಗಿ ಸಂಖ್ಯೆ 1,041 ಚಿಟಗುಪ್ಪ ಪಟ್ಟಣ, ಬೀದರ್ ಜಿಲ್ಲೆಯ 52 ವರ್ಷದ ವ್ಯಕ್ತಿ ಕೊರೊನಾಗೆ ಇಂದು ಬಲಿಯಾಗಿದ್ದಾರೆ. ಹೈದರಾಬಾದ್ ಪ್ರಯಾಣ ಮಾಡಿರುವ ಹಿನ್ನೆಲೆ ಹೊಂದಿದ್ದು, ತೀವ್ರ ಉಸಿರಾಟ ತೊಂದರೆ ಇತ್ತು. ಮೇ 12 ರಂದೇ ನಿಧನರಾಗಿದ್ದು, ಇಂದು ಕೋವಿಡ್-19 ವರದಿ ಪಾಸಿಟಿವ್ ಬಂದಿದೆ.
ಅಂತರ್ ಜಿಲ್ಲಾ ವಲಸಿಗರಿಗೆ ಆರೋಗ್ಯ ಇಲಾಖೆಯಿಂದ ಬಿಗ್ ರಿಲೀಫ್
ಇನ್ನು ರಾಜ್ಯದೊಳಗಿನ ಅಂತರ್ ಜಿಲ್ಲಾ ಪ್ರಯಾಣಿಕರು ಯಾವುದೇ ರೀತಿಯ ರೋಗ ಲಕ್ಷಣವಿಲ್ಲದಿದ್ದ ಪಕ್ಷದಲ್ಲಿ ಅಂತಹ ಪ್ರಯಾಣಿಕರು ನಿರ್ಬಂಧಕ್ಕೆ ಒಳಪಡಿಸುವ ಅವಶ್ಯಕತೆ ಇಲ್ಲವೆಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಅಂತರ್ ಜಿಲ್ಲಾ ವಲಸಿಗರಿಗೆ ಆರೋಗ್ಯ ಇಲಾಖೆಯಿಂದ ಬಿಗ್ ರಿಲೀಫ್ ನೀಡಿದ್ದು, ಜಿಲ್ಲಾವಾರು ಪ್ರಯಾಣ ಮಾಡಿದರೇ ಕ್ವಾರಂಟೈನ್ ಮಾಡುವ ಅವಶ್ಯಕತೆ ಇಲ್ಲ. ರೋಗದ ಲಕ್ಷಣಗಳು ಇರುವವರು ಮಾತ್ರ ಕಡ್ಡಾಯವಾಗಿ ಕ್ವಾರಂಟೈನ್ ಆಗಬೇಕಾಗುತ್ತೆ ಅಂತಾ ಆರೋಗ್ಯ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ.
ಆರೋಗ್ಯ ಇಲಾಖೆ-ವೈದ್ಯಕೀಯ ಶಿಕ್ಷಣ ಇಲಾಖೆಯು ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳ ನಿರ್ವಹಣೆಗೆ ಸಂಬಂಧಿಸಿದಂತೆ ನಿಮ್ಹಾನ್ಸ್ ತಜ್ಞರಿಂದ ಜಿಲ್ಲಾ ಮಟ್ಟದ ಸನ್ನದ್ಧತೆ ಮತ್ತು ಆರೋಗ್ಯ ವ್ಯವಸ್ಥೆಯ ಕಾರ್ಯಕ್ಷಮತೆಯ ತ್ವರಿತ ಮೌಲ್ಯಮಾಪನ ಕೈಗೊಳ್ಳುವಂತೆ ಆದೇಶಿಸಲಾಗಿದೆ.