ಬೆಂಗಳೂರು: ರಾಜ್ಯದಲ್ಲಿ ಕೊರೊನಾಗೆ ಮತ್ತೊಬ್ಬರು ಬಲಿಯಾಗಿದ್ದು, ಸಾವಿನ ಸಂಖ್ಯೆ 43ಕ್ಕೆ ಏರಿಕೆಯಾಗಿದೆ. ಇಂದು ರಾಜ್ಯದಲ್ಲಿ ಹೊಸದಾಗಿ 69 ಪಾಸಿಟಿವ್ ಕೇಸ್ಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 2,158ಕ್ಕೆ ಏರಿಕೆಯಾಗಿದೆ. ಹಾಗೂ 680 ಮಂದಿ ಇದುವರೆಗೆ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಬೆಂಗಳೂರಿನಲ್ಲಿ ಇಂದು 6 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ವಿದೇಶಿ - ಅಂತರ್ ರಾಜ್ಯ ಪ್ರಯಾಣ, ಕಂಟೇನ್ಮೆಂಟ್ ಝೋನ್ ಸಂಪರ್ಕ ಹೊಂದಿದ್ದಾರೆ. ಇನ್ನು ಇಂದು ಪತ್ತೆಯಾಗಿರುವ ಪ್ರಕರಣಗಳಲ್ಲಿ, ಮಹಾರಾಷ್ಟ್ರ, ದುಬೈ, ತಮಿಳುನಾಡಿನ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.
ಪಿ -1686 - 55 ವರ್ಷದ ಮಹಿಳೆ, ಬೆಂಗಳೂರು ಗ್ರಾಮಾಂತರ ನಿವಾಸಿಯಾಗಿದ್ದು, ತೀವ್ರ ಉಸಿರಾಟದ ತೊಂದರೆಯಿಂದ ಮೇ 19 ರಂದು ಆಸ್ಪತ್ರೆಗೆ ದಾಖಲಾಗಿದ್ದು, ನಿನ್ನೆ ನಿಧನ ಹೊಂದಿದ್ದಾರೆ.
ಕೋವಿಡ್-19 ಚಿಕಿತ್ಸೆಗೆ ರಾಜ್ಯದಲ್ಲಿರುವ ಸೌಕರ್ಯಗಳ ಅಂಕಿಅಂಶ
ಕೊರೊನಾ ವೈರಸ್ ಹರಡುವಿಕೆ ಹೆಚ್ಚಾಗುತ್ತಿರುವ ಈ ಸಮಯದಲ್ಲಿ, ರಾಜ್ಯ ಆರೋಗ್ಯ ಇಲಾಖೆ ಇನ್ನಷ್ಟು ಮೂಲ ಸೌಕರ್ಯಗಳನ್ನು ಬಲ ಪಡಿಸುತ್ತಿದೆ. ಕೋವಿಡ್ -19 ಚಿಕಿತ್ಸೆಗೆ ರಾಜ್ಯದಲ್ಲಿರುವ ಆಸ್ಪತ್ರೆಗಳ ಹಾಸಿಗೆ ವ್ಯವಸ್ಥೆ, ವೆಂಟಿಲೇಟರ್ ವ್ಯವಸ್ಥೆಯ ಅಂಕಿ ಅಂಶಗಳು ಹೀಗಿವೆ.
ಐಸಿಯು ಹಾಸಿಗೆಗಳು
ಆಸ್ಪತ್ರೆಗಳಲ್ಲಿ ಲಭ್ಯವಿರುವ ಐಸಿಯು ಹಾಸಿಗೆ - 4, 408
ಕೊರೊನಾ ಸೋಂಕಿತರಿಗಾಗಿ - 2,048
ವೆಂಟಿಲೇಟರ್ ಹಾಸಿಗೆಗಳು
ವೆಂಟಿಲೇಟರ್ ವ್ಯವಸ್ಥೆಯುಳ್ಳ ಹಾಸಿಗೆಗಳ ಸಂಖ್ಯೆ - 1,939
ಸೋಂಕಿತರಿಗಾಗಿ ಇರುವ ಹಾಸಿಗೆಗಳ ಸಂಖ್ಯೆ - 988
ಸೆಂಟ್ರಲ್ ಆಕ್ಸಿಜನರೇಟೆಡ್
ಸೆಂಟ್ರಲ್ ಆಕ್ಸಿಜನರೇಟೆಡ್ ಬೆಡ್ಗಳು -18, 243
ಸೋಂಕಿತರಿಗಾಗಿ ಇರುವ ಬೆಡ್ಗಳು- 8, 073