ETV Bharat / state

ಬಯೋಕಾನ್​ನಿಂದ ಮೆಟ್ರೋ ನಿಲ್ದಾಣಕ್ಕೆ 65 ಕೋಟಿ ರೂ. ಸಿಎಸ್​ಆರ್ ಫಂಡ್

ಸಿಎಸ್​ಆರ್​ ಚಟುವಟಿಕೆಯ ಭಾಗವಾಗಿ 65 ಕೋಟಿ ರೂ. ಧನ ಸಹಾಯವನ್ನು ಮೆಟ್ರೋ ನಿಲ್ದಾಣ ಕಾಮಗಾರಿಗೆ ನೀಡಲು ಬಯೋಕಾನ್ ಸಂಸ್ಥೆ ನಿರ್ಧರಿಸಿದೆ.

CSR fund from Biocon to Metro station
ಮೆಟ್ರೋ ನಿಲ್ದಾಣಕ್ಕೆ ಬಯೋಕಾನ್ ಹೆಸರು
author img

By

Published : Oct 8, 2020, 10:46 PM IST

ಬೆಂಗಳೂರು : ಮೆಟ್ರೋ ಹಂತ -2 ರ ಆರ್​ವಿ ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದ ಹೆಬ್ಬಗೋಡಿ ನಿಲ್ದಾಣಕ್ಕೆ ಬಯೋಕಾನ್ ಫೌಂಡೇಶನ್​ನಿಂದ 65 ಕೋಟಿ ರೂ. ನೀಡುವ ಒಪ್ಪಂದ ಪತ್ರಕ್ಕೆ ಬಿಎಂಆರ್​ಸಿಎಲ್​ ಮತ್ತು ಬಯೋಕಾನ್ ಫೌಂಡೇಶನ್ ಸಹಿ ಹಾಕಿದೆ.

ಬಯೋಕಾನ್ ಫೌಂಡೇಶನ್ ತನ್ನ ಸಿಎಸ್​​ಆರ್​ ಚಟುವಟಿಕೆಯ ಸುಸ್ಥಿರ ನಗರಾಭಿವೃದ್ಧಿ ಮತ್ತು ನಗರ ಸಾರಿಗೆ ಅಡಿ ಈ ಹಣವನ್ನು ಮೆಟ್ರೋ ನಿಗಮಕ್ಕೆ ನೀಡಲಿದೆ. ಬಯೋಕಾನ್ ಕೊಡುಗೆ ಗುರುತಿಸಿ, ಹೆಬ್ಬಗೋಡಿ ಮೆಟ್ರೊ ನಿಲ್ದಾಣವನ್ನು "ಬಯೋಕಾನ್ ಹೆಬ್ಬಗೋಡಿ ಮೆಟ್ರೋ ನಿಲ್ದಾಣ" ಎಂದು ಬಿಎಂಆರ್​ಸಿಎಲ್ ನಾಮಕರಣ ಮಾಡಲು ಕರ್ನಾಟಕ ಸರ್ಕಾರವನ್ನು ಕೋರಲಿದೆ ಎಂದು ಬಿಎಂಆರ್​ಸಿಎಲ್​ ತಿಳಿಸಿದೆ.

ಹೆಬ್ಬಗೋಡಿ ಮೆಟ್ರೋ ನಿಲ್ದಾಣ ಆರ್​.ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ 18.82 ಕಿ.ಮೀ ನ ಹೊಸ ಮಾರ್ಗದ ಭಾಗವಾಗಿದ್ದು, ಎರಡನೇ ಹಂತದ ಬೆಂಗಳೂರು ಮೆಟ್ರೋ ರೈಲು ಯೋಜನೆಯ ಅಡಿಯಲ್ಲಿ ರೂ. 5,744 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.