ETV Bharat / state

ಕಾಂಗ್ರೆಸ್​​ ಸ್ವಾತಂತ್ರೋತ್ಸವದ ಪಾದಯಾತ್ರೆಗೆ 62 ಸಾವಿರ ಜನರ ನೋಂದಣಿ: ಡಿಕೆಶಿ

ವಾಹನ ದಟ್ಟಣೆ ತಡೆಯಲು ಮೆಟ್ರೋ ರೈಲು ಟಿಕೆಟ್ ಖರೀದಿ ಮಾಡಲಾಗಿದೆ. ಟಿಕೆಟ್ ದರ ವಿನಾಯಿತಿ ನೀಡುವಂತೆ ಮೆಟ್ರೋ ರೈಲು ಆಡಳಿತ ಮಂಡಳಿ ಹಾಗೂ ಸಿಎಂಗೆ ಪತ್ರ ಬರೆದಿದ್ದೆ. ನಮಗೆ ಇಲ್ಲಿ ರಾಜಕಾರಣ ಮುಖ್ಯವಲ್ಲ. ಪಾದಯಾತ್ರೆಯಲ್ಲೂ ರಾಜಕೀಯ ಭಾಷಣ ಇರುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

62-thousand-people-registered-for-congress-independence-day-march-says-dk-shivakumar
ಕಾಂಗ್ರೆಸ್​​ ಸ್ವಾತಂತ್ರೋತ್ಸವದ ಪಾದಯಾತ್ರೆಗೆ 62 ಸಾವಿರ ಜನರ ನೋಂದಣಿ: ಡಿಕೆಶಿ
author img

By

Published : Aug 12, 2022, 9:48 PM IST

ಬೆಂಗಳೂರು: ಸ್ವಾತಂತ್ರೋತ್ಸವದ ನಿಮಿತ್ತ ಕಾಂಗ್ರೆಸ್​ ಆಯೋಜಿಸಿರುವ ಪಾದಯಾತ್ರೆಗೆ ಈಗಾಗಲೇ 62,394 ಜನರು ಆನ್​ಲೈನ್ ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದಿನಕ್ಕೆ 10 ಸಾವಿರ ಮಂದಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ನೋಂದಣಿ ಮಾಡಿಕೊಂಡವರನ್ನು ದೂರವಾಣಿ ಮೂಲಕ ಸಂಪರ್ಕಿಸುತ್ತಿದ್ದೇವೆ. ಅವರಿಗೆ ಕಿಟ್, ರಾಷ್ಟ್ರಧ್ವಜ, ಟೀ ಶರ್ಟ್ ನೀಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಆ.10ರವರೆಗೆ ನೋಂದಣಿ ಮಾಡಿಕೊಂಡಿದ್ದ 42 ಸಾವಿರ ಜನರ ಪೈಕಿ 32 ಸಾವಿರ ಜನ 35 ವರ್ಷಕ್ಕಿಂತ ಕಡಿಮೆ ವಯೋಮಾನದವರು. ಯುವ ಜನರಿಗೆ ಈ ವಿಚಾರ ಮುಟ್ಟಬೇಕು ಎಂಬುದು ನಮ್ಮ ಆಶಯವಾಗಿದ್ದು, ನೋಂದಣಿ ಮಾಡಿಕೊಂಡವರ ಪೈಕಿ ಶೇ.75ರಷ್ಟು ಮಂದಿ ಅವರೇ ಆಗಿದ್ದಾರೆ.

ವಾಹನ ದಟ್ಟಣೆ ತಡೆಯಲು ಮೆಟ್ರೋ ರೈಲು ಟಿಕೆಟ್ ಖರೀದಿ ಮಾಡಲಾಗಿದೆ. ಟಿಕೆಟ್ ದರ ವಿನಾಯಿತಿ ನೀಡುವಂತೆ ಮೆಟ್ರೋ ರೈಲು ಆಡಳಿತ ಮಂಡಳಿ ಹಾಗೂ ಸಿಎಂಗೆ ಪತ್ರ ಬರೆದಿದ್ದೆ. ನಮಗೆ ಇಲ್ಲಿ ರಾಜಕಾರಣ ಮುಖ್ಯವಲ್ಲ. ಪಾದಯಾತ್ರೆಯಲ್ಲೂ ರಾಜಕೀಯ ಭಾಷಣ ಇರುವುದಿಲ್ಲ. ಯಾರನ್ನೂ ದೂಷಿಸುವುದಿಲ್ಲ. ದೇಶದ ಇತಿಹಾಸ ಸ್ಮರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ.

ರಾಮಲಿಂಗಾರೆಡ್ಡಿ ಅವರ ತಂಡ 45-50 ಮಳಿಗೆ ಹಾಕಿ, ತಿಂಡಿ ನೀರು ವ್ಯವಸ್ಥೆ ಮಾಡಲಿದೆ. ಸೇವಾದಳದ 1 ಸಾವಿರ ಸದಸ್ಯರನ್ನು ಒಂದೊಮ್ಮೆ ರಸ್ತೆಯಲ್ಲಿ ರಾಷ್ಟ್ರಧ್ವಜ ಬಿದ್ದಿದ್ದರೆ ಅದನ್ನು ಗೌರವಯುವತಾಗಿ ಎತ್ತಿಕೊಳ್ಳಲು ನೇಮಿಸಲಾಗಿದೆ. ಸರ್ಕಾರ ರಾಷ್ಟ್ರಧ್ವಜ ಖರೀದಿಗೆ ದರ ನಿಗದಿ ಮಾಡಿದೆ. ನಾನು ಅದನ್ನು ಪ್ರಶ್ನಿಸುವುದಿಲ್ಲ. ನಾವು ನೀಡುವ ರಾಷ್ಟ್ರಧ್ವಜಕ್ಕೆ ಹಣ ಪಡೆಯುವುದಿಲ್ಲ. ಇದು ದೇಶಕ್ಕೆ ಗೌರವ ನೀಡುವ ವಿಚಾರವಾಗಿದ್ದು, ಇದನ್ನು ವ್ಯಾಪಾರ ಮಾಡಬಾರದು ಎಂದು ಹೇಳಿದರು.

2 ಲಕ್ಷ ಜನ ಭಾಗವಹಿಸುವ ನಿರೀಕ್ಷೆ : ಕಾರ್ಯಕ್ರಮ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್​ ಮಾತನಾಡಿ, ಇತಿಹಾಸದಲ್ಲೇ ಅತಿ ದೊಡ್ಡ ಕಾರ್ಯಕ್ರಮ ಮಾಡಲು ತೀರ್ಮಾನಿಸಿದ್ದು, ಜನರಿಂದ ಬಹಳ ದೊಡ್ಡ ಸ್ಪಂದನೆ ಸಿಕ್ಕಿದೆ. ವಿದ್ಯಾರ್ಥಿಗಳು, ವಕೀಲರು, ವೈದ್ಯರು, ಬೇರೆ, ಬೇರೆ ಕ್ಷೇತ್ರ, ಸಮುದಾಯಗಳ ಜನ ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಪ್ರತಿ ಜಿಲ್ಲೆಯಿಂದ ಈ ಕಾರ್ಯಕ್ರಮದಲ್ಲಿ ಜನರು ಭಾಗವಹಿಸಬೇಕು. ಬೆಂಗಳೂರಿನ ಹತ್ತಿರದ ಜಿಲ್ಲೆಗಳಿಂದ ಹೆಚ್ಚು ಜನ ಭಾಗವಹಿಸುವಂತೆ ಹಾಗೂ ದೂರದ ಜಿಲ್ಲೆಗಳ ಜನರಿಗೂ ಆಹ್ವಾನ ನೀಡಿದ್ದೇವೆ. ನಮ್ಮ ಪ್ರಕಾರ 1.5 ಲಕ್ಷದಿಂದ 2 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ಎಲ್ಲರಿಗೂ ರಾಷ್ಟ್ರಧ್ವಜ ನೀಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಪಾದಯಾತ್ರೆ ಮಾರ್ಗ: ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮಧ್ಯಾಹ್ನ 2 ಗಂಟೆಗೆ ಪಾದಯಾತ್ರೆ ಆರಂಭವಾಗಿ ಕೆ.ಆರ್ ವೃತ್ತ, ಹಡ್ಸನ್ ಸರ್ಕಲ್, ಜೆಸಿ ರಸ್ತೆ, ಮಿನರ್ವ ವೃತ್ತ, ವಿವಿಪುರಂ ವೃತ್ತ ಮಾರ್ಗವಾಗಿ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನ ತಲುಪುತ್ತೇವೆ. ನಂತರ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ಸಂಬಂಧಿಸಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಮಂಗಳೂರು, ಬೆಳಗಾವಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಕಲಾ ತಂಡಗಳು ಪಾದಯಾತ್ರೆಯಲ್ಲಿ ಭಾಗವಹಿಸಲಿವೆ ಎಂದು ವಿವರಿಸಿದರು.

ಇದನ್ನೂ ಓದಿ: ರಾಷ್ಟ್ರಧ್ವಜ ಸಂಬಂಧ ಸಿಎಂ ಬೊಮ್ಮಾಯಿಗೆ 13 ಪ್ರಶ್ನೆ ಕೇಳಿದ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.