ಬೆಂಗಳೂರು: ಜಾಹೀರಾತು ಬೈಲಾ, ಜಾಹೀರಾತು ಫಲಕಗಳು ಹಾಗೂ ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಭಾಷೆಗೆ ಆದ್ಯತೆ ನೀಡುವ ಬಗ್ಗೆ ಬಿಬಿಎಂಪಿ ಮೇಯರ್ ಸಭೆ ನಡೆಸಿದರು.
ಜಾಹೀರಾತು ತೆರವು ಬಳಿಕ ಉಳಿದಿರುವ ಕಬ್ಬಿಣದ ಸ್ಟ್ರಕ್ಚರ್ಗಳನ್ನು ತೆರವು ಮಾಡುವಂತೆ ಹೈಕೋರ್ಟ್ ಆದೇಶಿಸಿದೆ. ಈ ಸಂಬಂಧ ಕೂಡಲೆ ಕಬ್ಬಿಣದ ಸ್ಟ್ರಕ್ಚರ್ಗಳನ್ನು ತೆರವುಗೊಳಿಸುವಂತೆ ಎಲ್ಲಾ ವಲಯದ ಆಯುಕ್ತರಿಗೆ ಮೇಯರ್ ಸೂಚಿಸಿದರು. ಹೋರ್ಡಿಂಗ್ಸ್ ಅಳವಡಿಸುವ ಮಾಲೀಕರಿಗೆ ಕೂಡಲೇ ತೆರವುಗೊಳಿಸುವಂತೆ ಸೂಚನೆ ನೀಡಬೇಕು. ಇಲ್ಲವಾದ್ರೆ ಪೊಲೀಸರ ಸಹಾಯದೊಂದಿಗೆ ಪಾಲಿಕೆ ಸಿಬ್ಬಂದಿಯೇ ತೆರವು ಮಾಡಬೇಕು ಎಂದು ತಿಳಿಸಿದ್ರು. ಹೆಬ್ಬಾಳದ ಮೇಲ್ಸೇತುವೆ ಬಳಿ ಹಾಕಿರುವ ಹೋರ್ಡಿಂಗ್ ಸಾಕಷ್ಟು ವಿವಾದ ಸೃಷ್ಟಿಸಿದ್ದು, ಅದು ಬಿಡಿಎ ಪಿಪಿಪಿ ಮಾದರಿಯಲ್ಲಿ ಹಾಕಲು ಅನುಮತಿ ನೀಡಿದೆ ಎಂದು ತಿಳಿಸಿದರು.
ಅಂಗಡಿ ಮುಂಗಟ್ಟುಗಳು ಕಡ್ಡಾಯವಾಗಿ ಕನ್ನಡ ನಾಮಫಲಕವನ್ನು ಅಳವಡಿಸಬೇಕು. ಇಲ್ಲವಾದಲ್ಲಿ ಪರವಾನಗಿ ರದ್ದು ಮಾಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು. ಪಾಲಿಕೆ ವ್ಯಾಪ್ತಿಯಲ್ಲಿ 48 ಸಾವಿರ ಉದ್ದಿಮೆಗಳಿಗೆ ಉದ್ದಿಮೆ ಪರವಾನಗಿ ನೀಡಲಾಗಿದೆ. ಆದರೆ, ಬೆಸ್ಕಾಂ ಪ್ರಕಾರ 5 ಲಕ್ಷಕ್ಕೂ ಹೆಚ್ಚು ಉದ್ದಿಮೆಗಳಿವೆ ಎಂಬ ಮಾಹಿತಿ ಇದೆ. ಈ ಪೈಕಿ ಎಲ್ಲಕ್ಕೂ ಉದ್ದಿಮೆ ಪರವಾನಗಿ ನೀಡಿದರೆ ಪಾಲಿಕೆಗೆ ವರಮಾನ ಬರಲಿದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆಯೂ ಸೂಚಿಸಿದರು.