ETV Bharat / state

ಬಿಟ್‌ಕಾಯಿನ್ ಮೂಲಕ ಡ್ರಗ್ಸ್ ಖರೀದಿಸಿ, ಬೆಂಗಳೂರಿನಲ್ಲಿ ಮಾರಾಟ: ನೈಜೀರಿಯಾ ಪ್ರಜೆ ಸೇರಿ 6 ಮಂದಿ ಅರೆಸ್ಟ್

ಬಿಟ್ ಕಾಯಿನ್ ಮೂಲಕ ಹಣ ಪಾವತಿಸಿ ಕಡಿಮೆ ಬೆಲೆಗೆ ಎಂಡಿಎಂಎ ಎಕ್ಸ್‌ಟಸಿ ಮಾತ್ರೆಗಳು ಮತ್ತು ಎಲ್‌ಎಸ್‌ಡಿ ಸ್ಟ್ರಿಪ್​ಗಳು ಹಾಗು ಗಾಂಜಾವನ್ನು ಖರೀದಿಸಿ ಮಾರುತ್ತಿದ್ದ 6 ಮಂದಿ ಮೇಲೆ ಸಿಸಿಬಿ ಮಾದಕದ್ರವ್ಯ ನಿಗ್ರಹ ತಂಡ ದಾಳಿ ನಡೆಸಿ ಬಂಧಿಸಿದೆ.

6 arrested in bangalore drug case
ಡ್ರಗ್ಸ್​ ಪ್ರಕರಣದಡಿ ಅರೆಸ್ಟ್ ಆದವರು
author img

By

Published : May 30, 2021, 9:45 AM IST

ಬೆಂಗಳೂರು: ಲಾಕ್​ಡೌನ್ ಇದ್ದರೂ ಬಿಟ್ ಕಾಯಿನ್ ಮೂಲಕ ಡ್ರಗ್ಸ್ ಖರೀದಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ಆದಿತ್ಯನ್, ಅಕಿಲ್, ಬೆಂಗಳೂರಿನ ಶೆರ್ವಿನ್ ಸುಪ್ರಿತ್, ಅಂಕೇತ್, ಡೌಮಾನಿಕ್ ಪಾಲ್ ಹಾಗೂ ನೈಜೀರಿಯಾದ ಜಾನ್ ಚುಕುವಾ ಬಂಧಿತರು.

drugs
ಎಂಡಿಎಂಎ ಎಕ್ಸ್‌ಟಸಿ ಮಾತ್ರೆಗಳು ಮತ್ತು ಎಲ್‌ಎಸ್‌ಡಿ ಸ್ಟ್ರಿಪ್​ಗಳು

ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಮಂಗಲದ ಮನೆಯೊಂದರಲ್ಲಿ ದಂಧೆಯ ಅಡ್ಡೆ ಮಾಡಿಕೊಂಡಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಮಾದಕದ್ರವ್ಯ ನಿಗ್ರಹ ತಂಡ ದಾಳಿ ನಡೆಸಿದೆ.

ಆರೋಪಿಗಳು ಡಾರ್ಕ್ ವೆಬ್‌ನ ಟಾರ್ ಬ್ರೌಸರ್​ನಲ್ಲಿ ಹಾಗು ಡ್ರೈಡ್ ವೆಬ್ ಸೈಟ್ ನಿಂದ ಮಾಹಿತಿ ಪಡೆದು ವಿಕ್ಕರ್ ಮೀ ಆ್ಯಪ್‌ನಲ್ಲಿ ಸ್ಥಳೀಯ ವ್ಯಕ್ತಿಯಿಂದ ಬಿಟ್ ಕಾಯಿನ್ ಮೂಲಕ ಹಣ ಪಾವತಿಸಿ ಕಡಿಮೆ ಬೆಲೆಗೆ ಎಂಡಿಎಂಎ ಎಕ್ಸ್‌ಟಸಿ ಮಾತ್ರೆಗಳು ಮತ್ತು ಎಲ್‌ಎಸ್‌ಡಿ ಸ್ಟ್ರಿಪ್​ಗಳನ್ನು ಕೊರಿಯರ್ ಮೂಲಕ ತರಿಸಿಕೊಂಡಿದ್ದಾರೆ. ಜೊತೆಗೆ ಗಾಂಜಾವನ್ನು ಬೆಂಗಳೂರಿನಲ್ಲಿ ಅವರ ಪರಿಚಿತರಿಂದ ಖರೀದಿ ಮಾಡಿಕೊಂಡಿದ್ದಾರೆ. ಕೊರೊನಾ ಲಾಕ್‌ಡೌನ್ ಕಾರಣದಿಂದ ಮಾದಕ ದ್ರವ್ಯಗಳ ಲಭ್ಯತೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿರುವುದರಿಂದ ಬೆಳಗ್ಗಿನ ವಿನಾಯಿತಿ ಅವಧಿಯಲ್ಲಿ ಕಾಲೇಜ್ ವಿದ್ಯಾರ್ಥಿಗಳಿಗೆ ಪರಿಚಿತ ಗಿರಾಕಿಗಳಿಗೆ ಮತ್ತು ಐಟಿ/ಬಿಟಿ ಉದ್ಯೋಗಿಗಳಿಗೆ ಎಕ್ಸ್‌ಟೆಸಿ ಪಿಲ್ಸ್‌ಗೆ 4 ರಿಂದ 5 ಸಾವಿರ ಹಾಗು ಎಲ್‌ಎಲ್‌ಡಿ ಅನ್ನು ಒಂದು ಪೀಸ್‌ಗೆ ಸುಮಾರು 5 ಸಾವಿರ ರೂ. ಹಾಗು ಗಾಂಜಾವನ್ನು 100 ಗ್ರಾಂಗೆ 5000 ರೂ.ನಂತೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು.

ಸದ್ಯ ಆರೋಪಿಗಳಿಂದ ಸುಮಾರು 35 ಲಕ್ಷ ಮೌಲ್ಯದ 400 ಎಂಡಿಎಂಎ ಎಕ್ಸ್‌ಟಿಸಿ ಮಾತ್ರೆಗಳು, 76 ಎಲ್‌ಎಸ್‌ಡಿ ಪೇಪರ್‌ ಬ್ಲಾಕ್‌ಗಳು, 6 ಮೊಬೈಲ್ ಫೋನ್‌ಗಳು, 1 ದ್ವಿಚಕ್ರ ವಾಹನ, ಒಂದು ಹೊಂಡಾ ಸಿಟಿ ಜಾಜ್ ಕಾರು, 5 ಸಾವಿರ ನಗದು ಹಣ ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.