ETV Bharat / state

ಕಾಂಗ್ರೆಸ್​​​ನ ಐದನೇ ಪಟ್ಟಿ ಪ್ರಕಟ: ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಬದಲು!

ಕಾಂಗ್ರೆಸ್ ಪಕ್ಷ ಇಂದು ಸಂಜೆ ಅಭ್ಯರ್ಥಿಗಳ ಐದನೇ ಪಟ್ಟಿ ಪ್ರಕಟಿಸಿದೆ.

Congress List
ಕಾಂಗ್ರೆಸ್​ನಿಂದ ಐದನೇ ಪಟ್ಟಿ ಪ್ರಕಟ
author img

By

Published : Apr 19, 2023, 8:06 PM IST

Updated : Apr 19, 2023, 10:45 PM IST

ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಐದನೇ ಪಟ್ಟಿ ಪ್ರಕಟಿಸಿದ್ದು 9 ಕ್ಷೇತ್ರಗಳ ಪೈಕಿ ಕೇವಲ ನಾಲ್ಕು ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದೆ. ಪುಲಿಕೇಶಿ ನಗರಕ್ಕೆ ಎ.ಸಿ. ಶ್ರೀನಿವಾಸ, ಶಿಗ್ಗಾಂವಿ ಕ್ಷೇತ್ರ ಅಭ್ಯರ್ಥಿ ಬದಲಾವಣೆ ಮಾಡಲಾಗಿದೆ. ಯಾಸಿರ್ ಅಹಮದ್ ಖಾನ್ ಪಠಾಣ್​ಗೆ ಶಿಗ್ಗಾಂವಿ ಕ್ಷೇತ್ರದ ಟಿಕೆಟ್​ ನೀಡಲಾಗಿದೆ. ಈ ಹಿಂದೆ ಮೊಹಮ್ಮದ್ ಯೂಸುಫ್ ಸವಣೂರು ಅವರಿಗೆ ಟಿಕೆಟ್ ಘೋಷಿಸಲಾಗಿತ್ತು. ಮುಳಬಾಗಿಲು ಕ್ಷೇತ್ರಕ್ಕೆ ಡಾ.ಬಿ.ಸಿ. ಮುದ್ದು ಗಂಗಾಧರ್​, ಕೆ.ಆರ್.ಪುರಂಗೆ ಡಿ.ಕೆ.ಮೋಹನ್ ಅವರಿಗೆ ಕಾಂಗ್ರೆಸ್​ ಟಿಕೆಟ್​ ನೀಡಲಾಗಿದೆ. ನಾಲ್ಕೇ ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಲಾಗಿದೆ. ಇನ್ನೂ 5 ಕ್ಷೇತ್ರಗಳಿಗೆ ಕಾಂಗ್ರೆಸ್ ಟಿಕೆಟ್​ ಬಾಕಿ ಉಳಿಸಿಕೊಂಡಿದೆ.

5 ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡ ಕಾಂಗ್ರೆಸ್: ಸಿ.ವಿ. ರಾಮನ್ ನಗರ, ಮಂಗಳೂರು ಉತ್ತರ, ಶಿಡ್ಲಘಟ್ಟ, ಅರಕಲಗೂಡು, ರಾಯಚೂರು ಸಿಟಿ ಕ್ಷೇತ್ರಕ್ಕೆ ಇನ್ನೂ ಟಿಕೆಟ್​ ಘೋಷಣೆಯಾಗಿಲ್ಲ. ಇನ್ನೂ ಐದು ಕ್ಷೇತ್ರ ಬಾಕಿ ಉಳಿಸಿಕೊಂಡ ಕಾಂಗ್ರೆಸ್ ಮೌಖಿಕವಾಗಿ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಿಸುವ ಸಾಧ್ಯತೆ ಹೆಚ್ಚಿದೆ. ಇಂದು ಬಿಡುಗಡೆಯಾದ ಪಟ್ಟಿಯಲ್ಲಿ ಪುಲಕೇಶಿ ನಗರ ಅಚ್ಚರಿ ಮೂಡಿಸಿದ್ದು, ಇಲ್ಲಿಂದ ಹಾಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಗೆ ಟಿಕೆಟ್ ತಪ್ಪಿದೆ. ಟಿಕೆಟ್ ತಪ್ಪಿಸುವ ಸಾಧ್ಯತೆಯನ್ನು ನಿರೀಕ್ಷಿಸಿದ್ದ ಅವರು ಈಗಾಗಲೇ ಪಕ್ಷೇತರ ಅಭ್ಯರ್ಥಿಯಾಗಿ ಎರಡು ಸಾರಿ ನಾಮಪತ್ರ ಸಲ್ಲಿಸಿದ್ದಾರೆ.

5th Congress List Release
ಕಾಂಗ್ರೆಸ್​ನಿಂದ ಐದನೇ ಪಟ್ಟಿ ಪ್ರಕಟ

ಇದನ್ನೂ ಓದಿ: ಅಫಜಲಪುರನಲ್ಲಿ ಅಣ್ಣ-ತಮ್ಮಂದಿರ ಪೈಪೋಟಿ: ಚಿತ್ತಾಪುರನಲ್ಲಿ ಖರ್ಗೆಗೆ ರಾಠೋಡ್​ ಟಕ್ಕರ್

ಕಾಂಗ್ರೆಸ್​ನಿಂದ ಅವರಿಗೆ ಬಿ ಫಾರಂ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಜಮೀರ್ ಅಹ್ಮದ್ ಕಾಂಗ್ರೆಸ್ ಪಕ್ಷದ ಮೇಲೆ ತೀವ್ರ ಒತ್ತಡ ಹೇರಿದ್ದರು. ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ ಅಖಂಡ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಡೆಯ ಕ್ಷಣದಲ್ಲಿ ಅವರಿಗೆ ಟಿಕೆಟ್ ನೀಡಬಹುದೆಂದು ನಿರೀಕ್ಷಿಸಲಾಗಿತ್ತು. ಕ್ಷೇತ್ರದಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಮಾಜಿ ಶಾಸಕ ಪ್ರಸನ್ನ ಕುಮಾರ್ ಸಹ ಟಿಕೆಟ್​ಗಾಗಿ ತೀವ್ರ ಪೈಪೋಟಿ ನಡೆಸಿದ್ದರು. ಆದರೆ, ಈ ಮೂವರ ಸ್ಪರ್ಧೆಯನ್ನು ಗಮನಿಸಿದ ಕಾಂಗ್ರೆಸ್ ನಾಯಕರು ಮೂವರನ್ನು ಬಿಟ್ಟು ಶ್ರೀನಿವಾಸ್​ಗೆ ಮಣೆ ಹಾಕಿದೆ.

ಇದನ್ನೂ ಓದಿ: ಸ್ವರೂಪ್‌ ನನ್ನ ಮಗನಿದ್ದಂತೆ, ನಾನೇ ಕುಮಾರಸ್ವಾಮಿಯವರಿಗೆ ಹೇಳಿ ಟಿಕೆಟ್‌ ಕೊಡಿಸಿದೆ: ಭವಾನಿ ರೇವಣ್ಣ

ಎಸಿ ಶ್ರೀನಿವಾಸ್ 2013 ಮತ್ತು 2018ರಲ್ಲಿ ಮಹದೇವಪುರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಎರಡು ಸಾರಿ ಅರವಿಂದ ಲಿಂಬಾವಳಿ ವಿರುದ್ಧ ಸೋಲು ಅನುಭವಿಸಿದ್ದರು. ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾವಿ ಕ್ಷೇತ್ರದಿಂದ ಈ ಹಿಂದೆ ಮೊಹಮ್ಮದ್ ಯೂಸುಫ್ ಸವಣೂರು ಅವರ ಹೆಸರನ್ನು ಘೋಷಿಸಲಾಗಿತ್ತು. ಆದರೆ, ಇವರ ಹೆಸರನ್ನು ಇಂದು ಬದಲಿಸಿರುವ ಕಾಂಗ್ರೆಸ್ ಪಕ್ಷ ಯಾಸಿರ್ ಅಹಮದ್ ಖಾನ್ ಪಠಾಣ್ ಅವರನ್ನು ಕಣಕ್ಕಿಳಿಸಿದೆ. ಇನ್ನೂ ಐದು ಕ್ಷೇತ್ರಗಳಿಗೆ ಘೋಷಣೆಯಾಗದ ಕ್ಷೇತ್ರಗಳೆಂದರೆ ಸಿ.ವಿ.ರಾಮನ್ ನಗರ, ಮಂಗಳೂರು ಉತ್ತರ, ಶಿಡ್ಲಘಟ್ಟ, ಅರಕಲಗೂಡು, ರಾಯಚೂರು ಸಿಟಿ ಕ್ಷೇತ್ರಕ್ಕೆ ಪೆಂಡಿಂಗ್​ ಇಡಲಾಗಿದೆ.

ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚೇಂಜ್​: ಕಾಂಗ್ರೆಸ್ ಹೈಕಮಾಂಡ್​ ನಿನ್ನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಕ್ಕೆ ಮೊಹ್ಮದ್ ಯೂಸೂಪ್ ಸವಣೂರು ಎಂಬುವವರಿಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು. ಹುಬ್ಬಳ್ಳಿಯ ಅಂಜುಮನ್ ಕಮಿಟಿಯ ಅಧ್ಯಕ್ಷರಾಗಿದ್ದ ಮೊಹ್ಮದ್ ಯೂಸೂಪ್ ಸವಣೂರ ಅವರು ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಅಂದುಕೊಂಡಂತೆ ಆಗಿದ್ದರೆ, ಜಗದೀಶ ಶೆಟ್ಟರ ವಿರುದ್ದ ಸ್ಪರ್ಧಿಸಬೇಕಾಗಿತ್ತು. ಆದರೆ, ಎಲ್ಲವೂ ಬದಲಾಗಿದ್ದರಿಂದ ಯೂಸೂಪ್ ಸವಣೂರುಗೆ ಹಾವೇರಿ ಜಿಲ್ಲೆ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಲಾಗಿತ್ತು. ಇದರ ಬೆನ್ನಲ್ಲಿಯೇ ಮಾಜಿ ಶಾಸಕ ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿ ಅಜ್ಜಂಪೀರ್ ಖಾದ್ರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಬೇಕಾಗಿಯೇ ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ದ ದುರ್ಬಲ ಅಭ್ಯರ್ಥಿ ಹಾಕಿದೆ ಎನ್ನಲಾಗಿತ್ತು. ಆದರೆ, ಇಂದು ಸಂಜೆ ಕಾಂಗ್ರೆಸ್ ಹೈಕಮಾಂಡ್ ಶಿಗ್ಗಾಂವಿ ಕ್ಷೇತ್ರಕ್ಕೆ ಯಾಸೀರಖಾನ್ ಪಠಾಣಗೆ ಅಭ್ಯರ್ಥಿಯನ್ನಾಗಿ ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದೆ. ನಾಮಪತ್ರ ಸಲ್ಲಿಕೆಗೆ ಗುರುವಾರ ಕೊನೆಯ ದಿನವಾಗಿದ್ದು, ಅವತ್ತೇ ಯಾಸೀರ್ ಖಾನ್ ಪಠಾಣ ನಾಮಪತ್ರ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ನಿಂದ ಸ್ಟಾರ್ ಕ್ಯಾಂಪೇನರ್‌ಗಳ ಪಟ್ಟಿ ಬಿಡುಗಡೆ: ನಟಿ ರಮ್ಯಾ, ಶೆಟ್ಟರ್​​ಗೂ ಸ್ಥಾನ

Last Updated : Apr 19, 2023, 10:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.