ETV Bharat / state

54 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ ಭೂಪ: ಅವನಷ್ಟೇ ಉದ್ದದ ರಸೀದಿ ನೀಡಿದ ಪೊಲೀಸರು! - Police Sub Inspector Dhyamappa siezed vehicle at Bengalore

ರಾಜಧಾನಿಯ ಸಂಚಾರಿ ಪೊಲೀಸರ ಕಠಿಣ ಕ್ರಮಗಳು, ಸಂಚಾರಿ ನಿಯಮಗಳ ಉಲ್ಲಂಘನೆಗೆ ಸರ್ಕಾರದ ದಂಡ ಹೆಚ್ಚಳದಂತಹ ಕ್ರಮಗಳಿಗೂ ಸಾರ್ವಜನಿಕರು ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ದಂಡ ಹೆಚ್ಚಳವಾದರೂ ಸಹ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ನಗರದಲ್ಲಿ ಹೆಚ್ಚಳವಾಗುತ್ತಿವೆ.

54-times-traffic-rules-violation-by-bike-rider-at-bengalore
54 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ ಭೂಪನಿಗೆ ಅವನ್ನಷ್ಟೇ ಉದ್ದದ ರಸೀದಿ ನೀಡಿದ ಪೊಲೀಸರು
author img

By

Published : Dec 17, 2020, 8:36 PM IST

ಬೆಂಗಳೂರು: ಸುಮಾರು 54 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ ದ್ವಿಚಕ್ರ ವಾಹನ ಮಾಲೀಕ ಪೂರ್ವ ವಿಭಾಗದ ಹಲಸೂರು ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್​​​ಪೆಕ್ಟರ್ ದ್ಯಾಮಪ್ಪ ನೇತೃತ್ವದ ತಂಡದ ಕೈಗೆ ಸಿಕ್ಕಿಬಿದ್ದಿದ್ದು, ಅವನಷ್ಟೇ ಉದ್ದದ ರಸೀದಿ ನೀಡಿ ರೂ. 29,500 ದಂಡ ವಸೂಲಿ ಮಾಡಿದ್ದಾರೆ.

54 ಬಾರಿ ಸಂಚಾರಿ ನಿಯಮ ಉಲ್ಲಂಘನೆ

ಹೆಲ್ಮೆಟ್ ರಹಿತ ಚಾಲನೆ, ಸಿಗ್ನಲ್ ಜಂಪ್, ಜೀಬ್ರಾ ಕ್ರಾಸ್ ಉಲ್ಲಂಘ‌ನೆ ಹೀಗೆ ಹತ್ತು ಹಲವು ಪ್ರಕರಣ ವಾಹನ ಸವಾರನ ಮೇಲೆ ದಾಖಲಾಗಿತ್ತು. ಬೈಕ್ ಜಪ್ತಿ ಮಾಡಿ ಸವಾರನಿಗೆ ಸಂಚಾರದ ಅರಿವು ತರಬೇತಿ ಪಡೆಯಲು ಕಳುಹಿಸಲಾಗಿದೆ. 10ಕ್ಕೂ ಹೆಚ್ಚು ಬಾರಿ ನಿಯಮ‌ ಉಲ್ಲಂಘನೆ ಮಾಡಿ ಸಿಕ್ಕಿಬಿದ್ದರೆ ಅಂತಹ ವಾಹನ ಚಾಲಕರನ್ನು ಸಂಚಾರಿ ನಿಯಮಗಳ ಅರಿವು ತರಬೇತಿಗೆ ಕಳುಹಿಸಲಾಗುತ್ತದೆ. ತರಬೇತಿ ಪಡೆದು ಪ್ರಮಾಣಪತ್ರ ತೆಗೆದುಕೊಂಡ ಬಳಿಕವಷ್ಟೇ ವಾಹನ ಹಿಂತಿರುಗಿಸಲಾಗುತ್ತದೆ.

ಓದಿ: ಕೊರೊನಾದಿಂದ ಗುಣಮುಖರಾದ ಅಲೋಕ್ ಕುಮಾರ್: ಕೇಕ್ ಕತ್ತರಿಸಿ ಸಂಭ್ರಮ ಹಂಚಿಕೊಂಡ ಮಗಳು

ಈ ಬಗ್ಗೆ ಟ್ವೀಟ್ ಮೂಲಕ ಸಂಚಾರ ವಿಭಾಗದ ಡಿಸಿಪಿ ನಾರಾಯಣ್ ಕೂಡ ಮಾಹಿತಿ ಹಂಚಿಕೊಂಡಿದ್ದು, ವಾಹನ ಸವಾರರು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.